ETV Bharat / business

ಟನ್ ಕಬ್ಬಿಗೆ 275 ರೂ. ಬೆಂಬಲ ಬೆಲೆ: 40 ಲಕ್ಷ ಟನ್‌ ಸಕ್ಕರೆ ಸಂಗ್ರಹಕ್ಕೆ ಕೇಂದ್ರ ಅಸ್ತು -

ಕೃಷಿ ವೆಚ್ಚ ಮತ್ತು ದರ (ಸಿಎಸಿಪಿ) ಆಯೋಗದ ಶಿಫಾರಸು ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ. ಎಫ್​ಆರ್​ಪಿ ದರದ ಪರಿಣಾಮ ರೈತರಿಗೆ ಖಾತರಿಯ ಆದಾಯ ಸಿಗಲಿದೆ. ಎಫ್​ಆರ್​ಪಿಗಿಂತ ಕಡಿಮೆ ದರವನ್ನು ಕಾರ್ಖಾನೆಗಳು ಖರೀದಿಸಬಾರದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 25, 2019, 7:54 AM IST

Updated : Jul 25, 2019, 9:56 AM IST

ನವದೆಹಲಿ: ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ಕನಿಷ್ಠ ದರವನ್ನು 2019-20 ಸಾಲಿಗೆ ಯಥಾಸ್ಥಿತಿಯಲ್ಲಿ (₹275) ಹಾಗೂ 40 ಲಕ್ಷ ಟನ್​ಗಳಷ್ಟು ಸಕ್ಕರೆಯ ಮುಂಜಾಗ್ರತೆಯ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಮುಂದಿನ ಅಕ್ಟೋಬರ್​ನಿಂದ ಆರಂಭವಾಗಲಿರುವ ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಾಲ್‌ ಕಬ್ಬಿನ ಎಫ್‌ಆರ್‌ಪಿ ದರವನ್ನು ₹ 275ಕ್ಕೆ ನಿಗದಿಪಡಿಸಲಾಗಿದೆ.

ಈ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಕೃಷಿ ವೆಚ್ಚ ಮತ್ತು ದರ (ಸಿಎಸಿಪಿ) ಆಯೋಗದ ಶಿಫಾರಸು ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ. ಎಫ್​ಆರ್​ಪಿ ದರದ ಪರಿಣಾಮ ರೈತರಿಗೆ ಖಾತರಿಯ ಆದಾಯ ಸಿಗಲಿದೆ. ಎಫ್​ಆರ್​ಪಿಗಿಂತ ಕಡಿಮೆ ದರವನ್ನು ಕಾರ್ಖಾನೆಗಳು ಖರೀದಿಸಬಾರದು ಎಂದು ಹೇಳಿದ್ದಾರೆ.

ಇನ್ನೊಂದೆಡೆ ಕೇಂದ್ರ ಆಹಾರ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು (ಸಿಸಿಇಎ) 40 ಲಕ್ಷ ಟನ್​ ಸಕ್ಕರೆ ಸಂಗ್ರಹಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಸಕ್ಕರೆಗೆ ಉತ್ತಮ ಬೆಲೆ ಬರುವಂತೆ ಮಾಡಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಪಾವತಿಸಲು ನೆರವಾಗಲಿದೆ. ದೇಶದ ವಿವಿಧ ಸಕ್ಕರೆ ಕಾರ್ಖಾನೆಗಳು ರೈತರಿಗೆ 15 ಸಾವಿರ ಕೋಟಿ ರೂ.ಯಷ್ಟು ಬಾಕಿ ನೀಡಬೇಕಿದೆ.

Intro:Body:Conclusion:
Last Updated : Jul 25, 2019, 9:56 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.