ETV Bharat / business

ರಷ್ಯಾ ದಾಳಿ ಮುಂದುವರಿಕೆ ಎಫೆಕ್ಟ್‌; ಹೊಸ ದಾಖಲೆ ಬರೆದ ತೈಲ, ಬ್ಯಾರಲ್‌ಗೆ 130 ಡಾಲರ್​​​ಗೆ ಏರಿಕೆ - ಬ್ರೆಂಟ್‌ ಕಚ್ಚಾ ತೈಲ ಬ್ಯಾರಲ್‌ಗೆ 10 ಡಾಲರ್‌ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲವು $10 ಏರಿಕೆ ಬಳಿಕ ಬ್ಯಾರಲ್‌ಗೆ 130 ಡಾಲರ್‌ಗೆ ತಲುಪಿದೆ.

Brent crude up $10, shares sink as Ukraine conflict deepens
ರಷ್ಯಾ ಮೇಲೆ ದಾಳಿ ಮುಂದುವರಿಕೆ ಎಫೆಕ್ಟ್‌; ಹೊಸ ದಾಖಲೆ ಬರೆದ ತೈಲ ಬ್ಯಾರಲ್‌ಗೆ 130 ಡಾಲರ್‌..
author img

By

Published : Mar 7, 2022, 9:22 AM IST

Updated : Mar 7, 2022, 9:45 AM IST

ಟೋಕಿಯೋ: ಉಕ್ರೇನ್‌ ವಿರುದ್ಧ ರಷ್ಯಾ ಸಮರ ಮುಂದುವರಿಸುವ ಜೊತೆಗೆ ಕಠಿಣ ನಿರ್ಬಂಧಗಳನ್ನು ವಿಧಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಪರಿಣಾಮ ಬೀರುತ್ತಿದ್ದು, ತೈಲ ಬೆಲೆ ಬ್ಯಾರೆಲ್‌ಗೆ 10 ಡಾಲರ್‌ ಗಿಂತ ಹೆಚ್ಚು ಜಿಗಿತ ಕಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲವು 10 ಡಾಲರ್‌ ಏರಿಕೆ ಬಳಿಕ ಬ್ಯಾರಲ್‌ಗೆ 130 ಡಾಲರ್‌ಗೆ ಮುಟ್ಟಿದೆ. ಅಮೆರಿಕದಲ್ಲಿ ಕಚ್ಚಾ ತೈಲವು ಬ್ಯಾರೆಲ್‌ಗೆ $124 ಡಾಲರ್‌ ಇದ್ದು, 9 ಡಾಲರ್‌ನಷ್ಟು ಜಿಗಿತವಾಗಿದೆ.

ರಷ್ಯಾ ಪಡೆಗಳು ಉಕ್ರೇನ್‌ನ ಪ್ರಮುಖ ಪ್ರದೇಶ ಹಾಗೂ ಕಟ್ಟಡಗಳನ್ನು ಹಾನಿಗೊಳಿಸಿರುವುದರಿಂದ ಆ ದೇಶ ಹೆಚ್ಚಿನ ಅಪಾಯದಲ್ಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆಯ ನಂತರ ತೈಲ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಉಂಟಾಗಿದೆ.

ಉಕ್ರೇನ್‌ನ ಎರಡು ನಗರಗಳಲ್ಲಿ ಕಳೆದ ಶನಿವಾರ ಘೋಷಿಸಲಾಗಿದ್ದ ತಾತ್ಕಾಲಿಕ ಕದನ ವಿರಾಮ ವಿಫಲವಾಗಿದೆ ಎಂದು ಎರಡೂ ದೇಶಗಳು ಪರಸ್ಪರ ಆರೋಪಿಸಿಕೊಂಡಿವೆ. ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿಯ ಎರಡು ಘಟಕಗಳನ್ನು ಸೇನಾ ಪಡೆಗಳು ಮುಚ್ಚಿಸಿವೆ ಎಂಬ ಹೇಳಿಕೆಯ ಬಳಿಕ ತೈಲ ಬೆಲೆಗಳು ಮತ್ತಷ್ಟು ಏರಿಕೆ ಕಾರಣವಾಗಿದೆ.

ರಷ್ಯಾಗೆ ಮತ್ತಷ್ಟು ನಿರ್ಬಂಧಗಳನ್ನು ಮುಂದುವರಿಸಿರುವ ವಿಶ್ವದ ದೊಡ್ಡಣ್ಣ ಅಮೆರಿಕ, ಪುಟಿನ್‌ ಸರ್ಕಾರದಿಂದ ತೈಲ ಹಾಗೂ ಇಂಧನ ಉತ್ಪನ್ನಗಳ ಆಮದು ನಿಷೇಧಿಸುವುದನ್ನು ವಿಸ್ತರಿಸಿದೆ. ಜಾಗತಿಕ ಆರ್ಥಿಕತೆಯಿಂದ ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸಲು ಕಾನೂನಿನ ಬಗ್ಗೆ ಪರಿಶೋಧಿಸಲಾಗುತ್ತಿದೆ ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾದಲ್ಲಿ ಮಾಸ್ಟರ್ ಕಾರ್ಡ್‌, ವೀಸಾ ಕಾರ್ಡ್‌ ಸೇವೆ ರದ್ದು: 'ಯೂನಿಯನ್‌ ಪೇ'ಗೆ ಬದಲಾವಣೆ

Last Updated : Mar 7, 2022, 9:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.