ಪ್ಯಾರಿಸ್: ನಗದುರಹಿತ ವಹಿವಾಟಿನ ಡಿಜಿಟಲ್ ಕರೆನ್ಸಿಯಾದ ಬಿಟ್ ಕಾಯಿನ್ 2020ರ ಕ್ಯಾಲೆಂಡರ್ ವರ್ಷದಲ್ಲಿ ಸುಮಾರು ಶೇ 170ರಷ್ಟು ಏರಿಕೆಯಾದ ಬಳಿಕ, ಈಗ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ವರ್ಚುವಲ್ ಕರೆನ್ಸಿಯಾದ ಬಿಟ್‌ಕಾಯಿನ್ ಶನಿವಾರ ಮೊದಲ ಬಾರಿಗೆ ಅದರ ಬೆಲೆ 30,000 ಡಾಲರ್ಗೆ ಏರಿಕೆ ಕಂಡಿದೆ ಎಂದು ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ತಿಳಿದುಬಂದಿದೆ.
ವಿಕೇಂದ್ರೀಕೃತ ಕ್ರಿಪ್ಟೋಕರೆನ್ಸಿ ಡಿಸೆಂಬರ್ 16ರಂದು 20,000 ಡಾಲರ್ನ ಸಾರ್ವಕಾಲಿಕ ಗರಿಷ್ಠ ಬೆಲೆ ಮುರಿದ ನಂತರ 30,823.30 ಡಾಲರ್ನಷ್ಟಾಗಿದೆ (22,52,922 ರೂ.) ಎಂದು ತಿಳಿಸಿದೆ.
ಓದಿ: ಯುವಕರೇ, ಮುಂದೆ ಬರುವ ಹೇರಳ ಅವಕಾಶಗಳಿಗೆ ಈಗಲೇ ಸಿದ್ಧರಾಗಿ : ಪ್ರಧಾನಿ ಮೋದಿ ಕರೆ