ನವದೆಹಲಿ: ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಗೆ ಹೆಚ್ಚುವರಿ ಹಣದ ಹರಿವು ಒದಗಿಸುವ ಭಾರತ್ ಬಾಂಟ್ ಇಟಿಎಫ್ಗೆ ಡಿಸೆಂಬರ್ 12ರಿಂದ ಆರಂಭವಾಗಲಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹೊರಡಿಸುವ ಹಲವು ಬಾಂಡ್‌ಗಳನ್ನು ಇಟಿಎಫ್ ಷೇರುಪೇಟೆಯಲ್ಲಿ ಬಾಂಡ್‌ಗಳು ವಹಿವಾಟಿಗೆ ಒಳಪಡಲಿವೆ. ಸಣ್ಣ ಹೂಡಿಕೆದಾರರೂ ಸಹ ಇಂತಹ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿಯು (ಸೆಬಿ) ಡಿ.12ರಂದು ಚಾಲನೆ ನೀಡಲಿದೆ.
ಭಾರತ್ ಇಟಿಎಫ್ ಬಾಂಡ್ ವಿನಿಮಯಕ್ಕೆ ಸೆಬಿ ಅನುಮತಿ ನೀಡಿದೆ. ಡಿ. 12ರಿಂದ 20ರವರೆಗೆ ಸಣ್ಣ ಹೂಡಿಕೆದಾರರು ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಇವುಗಳ ಒಟ್ಟಾರೆ ಗಾತ್ರ ₹ 7,000 ಕೋಟಿಯಷ್ಟು ಇರಲಿದೆ ಎಂದು ಮೂಲಗಳು ಅಂದಾಜಿಸಿವೆ.
ಬಾಂಡ್ಗಳ ಇಟಿಎಫ್ ಮೆಚ್ಯುರಿಟಿ ದಿನ ಹೊಂದಿರಲಿದೆ. ವಹಿವಾಟಿಗೆ ಒಳಪಡುವ ಬಾಂಡ್‌ಗಳು 3 ವರ್ಷ ಮತ್ತು 10 ವರ್ಷಗಳ ಮೆಚ್ಯುರಿಟಿ ಅವಧಿ ಇರಲಿದೆ. ಎನ್ಎಚ್ಎಐ, ಹುಡ್ಕೋ, ಐಆರ್ಎಫ್ಸಿ, ಪಿಜಿಸಿಐಎಲ್, ಗೇಲ್, ಪಿಎಫ್ಸಿ, ಎಕ್ಸಿಮ್ ಬ್ಯಾಂಕ್ ಮತ್ತು ನಬಾರ್ಡ್ ಬ್ಯಾಂಕ್ ಬಾಂಡ್ ಮೇಲೆ ಹೂಡಿಕೆ ಮಾಡಬಹುದಾಗಿದೆ.