ಲಾಸ್ ಏಂಜಲೀಸ್: ವಿದೇಶದಲ್ಲಿ ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿ/ ಮದ್ಯದ ದೊರೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಅವರ ಮದ್ಯ ಸೇವಿಸುವುದಿಲ್ಲ ಎಂಬ ವಾಗ್ದಾನ ಒಂದು ವರ್ಷ ಪೂರ್ಣಗೊಂಡಿದೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಜೂನಿಯರ್ ಮಲ್ಯ ಇತ್ತೀಚೆಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದು, ಒಂದು ಹನಿ ಮದ್ಯ ಸೇವಿಸದೇ ಒಂದು ವರ್ಷವನ್ನು ಹೇಗೆ ಪೂರೈಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
"ನಾನು ಪದೇ ಪದೆ ಕುಡಿಯುವವನಲ್ಲ, ಆದರೆ, ನಾನು ಹಾಗೆ ಮಾಡಿದಾಗ, ಮರುದಿನ ನಾನು ದುರ್ಬಲವಾದ ಆತಂಕ ಅನುಭವಿಸುತ್ತೇನೆ. ನಾನು ಎಷ್ಟು ಅಥವಾ ಎಷ್ಟು ಕಡಿಮೆ ಕುಡಿದಿದ್ದರೂ ಪರವಾಗಿಲ್ಲ. ನಾನು ಕುಡಿಯುದನ್ನು ತ್ಯಜಿಸಲು ನಿರ್ಧರಿಸಿದೆ" ಎಂದು ಸಿದ್ಧಾರ್ಥ್ ಹಂಚಿಕೊಂಡರು.
ಇದನ್ನು ಹಂಚಿಕೊಳ್ಳಿ ಮುಖ್ಯ ಕಾರಣ ಬಹಳಷ್ಟು ಜನರು ಒತ್ತಡವನ್ನು ತಾಳಲಾರದೇ ಕುಡಿಯಲು ಬಯಸುತ್ತಾರೆ ಎಂಬುದು ನನಗೆ ತಿಳಿದಿದೆ. ವಿಶೇಷವಾಗಿ ಸ್ನೇಹಿತರೊಂದಿಗೆ ಹೊರಗಿರುವಾಗ. ಆದರೆ, ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಭಾವಿಸಿದರೆ ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಿ. ಚಿಂತಿಸಬೇಡಿ ಇತರರು ಏನು ಯೋಚಿಸುತ್ತಾರೆ ಎಂಬುದರ ಕುರಿತು ಯೋಚಿಸದೇ ನಿಮಗೆ ಉತ್ತಮವಾದದ್ದನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ.
ನಾನು ಮಿತಿಮೀರಿ ಕುಡಿತದ ಚಟವನ್ನು ತ್ಯಜಿಸಿ ಒಂದು ವರ್ಷವಾಗಿದೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಇದೆ. ಮದ್ಯ ಸೇವಿಸಿದೆ ಹೇಗೆ ಇದ್ದಿರಿ ಎಂದು ಜನರು ನನಗೆ ಕಳುಹಿಸುತ್ತಿರುವ ಪ್ರೀತಿ ಮತ್ತು ಸಂದೇಶಗಳಿಂದ ನಾನು ಮುಳುಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.