ನವದೆಹಲಿ: ಮೇ 4ರಿಂದ ಆರಂಭವಾಗುವ ಮೂರನೇ ಹಂತದ ಲಾಕ್‌ಡೌನ್ ವೇಳೆ ಫ್ಲಿಪ್ಕಾರ್ಟ್, ಅಮೆಜಾನ್ನಂತಹ ಇ-ಕಾಮರ್ಸ್ ಕಂಪನಿಗಳು ಅತ್ಯವಶ್ಯಕವಲ್ಲದ ವಸ್ತುಗಳನ್ನು ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಿದ್ದು, ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಹಲವು ನಿರ್ಬಂಧಗಳನ್ನು ತೆಗೆದುಹಾಕಿದೆ.
ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಳಿಗೆ ಅತ್ಯವಶ್ಯಕವಲ್ಲದ ವಸ್ತುಗಳನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧಗಳಿಲ್ಲ. ಈ ಪ್ರದೇಶಗಳಲ್ಲಿ ಕಟಿಂಗ್ ಶಾಪ್ ಮತ್ತು ಸಲೂನ್ ತೆರೆಯಲು ಸಹ ಅವಕಾಶವಿದೆ.
ಲಾಕ್‌ಡೌನ್‌ನ ಮೂರನೇ ಹಂತವು ಆರಂಭವಾಗುವ ಮೇ 4ರಿಂದ ಈ ವಿನಾಯತಿಗಳು ಜಾರಿಗೆ ಬರಲಿವೆ.