ETV Bharat / business

ವರ್ಷದಲ್ಲಿ 3.5 ಲಕ್ಷ ಉದ್ಯೋಗ ನಷ್ಟ... ಫಿನಿಕ್ಸ್​​ನಂತೆ ಮೇಲೆದ್ದು ಬರುತ್ತೇವೆ ಎಂದ ವಾಹನೋದ್ಯಮ

ವಾಹನಗಳ ಹೊಸ ಮತ್ತು ನವೀಕರಿಸಿದ ಎಂಜಿನ್​ ಮಾದರಿಗಳ ಜತೆಗೆ ಮಾರುಕಟ್ಟೆಗೆ ಕಾಲಿಡಲು ಉದ್ಯಮವು ಹವಣಿಸುತ್ತಿದೆ. ಆರ್ಥಿಕ ಕುಸಿತದ ಹೊಡೆತದಿಂದ ಉದ್ಯಮವು ಹಂತ - ಹಂತವಾಗಿ ಹೊರಬರಲಿದೆ ಎಂಬ ನಿರೀಕ್ಷೆ ಉದ್ಯಮಿಗಳಲ್ಲಿದೆ. ಹೊಗೆ ಹೊರಸೂಸುವಿಕೆಯ ನೂತನ ಮಾನದಂಡವಾದ ಬಿಎಸ್​​-6ನ ಕಟ್ಟುನಿಟ್ಟಿನ ನಿಯಮಗಳು ವಾಹನಗಳ ದರ ಏರಿಕೆಗೆ ಸವಾಲಾಗಿದ್ದರೂ ಜನರು ಶೋ ರೂಂಗಳತ್ತ ಮುಖಮಾಡಲು ನೆರವಾಗಬಲದು ಎಂಬುದು ಅವರ ಆಸೆಯ.

Auto industry
ವಾಹನೋದ್ಯಮ
author img

By

Published : Dec 27, 2019, 6:23 PM IST

ನವದೆಹಲಿ: 2019ರ ಕ್ಯಾಲೆಂಡರ್​ ವರ್ಷದಲ್ಲಿ ವಾಹನಗಳ ಮಂದಗತಿಯ ಮಾರಾಟ ಬೆಳವಣಿಗೆ ದರದದಿಂದ ಬಳಲಿದ ಭಾರತೀಯ ವಾಹನ ಉದ್ಯಮ, ಮುಂದಿನ ಹಣಕಾಸು ವರ್ಷದಲ್ಲಿ ಅತ್ಯುತ್ತಮ ವಹಿವಾಟು ನಡೆಸುವ ನಿರೀಕ್ಷೆಗಳನ್ನು ಇರಿಸಿಕೊಂಡಿದೆ.

ವಾಹನಗಳ ಹೊಸ ಮತ್ತು ನವೀಕರಿಸಿದ ಎಂಜಿನ್​ ಮಾದರಿಗಳ ಜತೆಗೆ ಮಾರುಕಟ್ಟೆಗೆ ಕಾಲಿಡಲು ಉದ್ಯಮವು ಹವಣಿಸುತ್ತಿದೆ. ಆರ್ಥಿಕ ಕುಸಿತದ ಹೊಡೆತದಿಂದ ಉದ್ಯಮವು ಹಂತ - ಹಂತವಾಗಿ ಹೊರಬರಲಿದೆ ಎಂಬ ನಿರೀಕ್ಷೆ ಉದ್ಯಮಿಗಳಲ್ಲಿದೆ. ಹೊಗೆ ಹೊರಸೂಸುವಿಕೆಯ ನೂತನ ಮಾನದಂಡವಾದ ಬಿಎಸ್​ ​-6ನ ಕಟ್ಟುನಿಟ್ಟಿನ ನಿಯಮಗಳು ವಾಹನಗಳ ದರ ಏರಿಕೆಗೆ ಸವಾಲಾಗಿದ್ದರೂ ಜನರು ಶೋ ರೂಂಗಳತ್ತ ಮುಖಮಾಡಲು ನೆರವಾಗಬಲದು ಎಂಬುದು ಅವರ ಆಸೆಯ.

ಭಾರತದ ಪ್ರಮುಖ ಮೋಟಾರು ಪ್ರದರ್ಶನದ ದ್ವೈವಾರ್ಷಿಕ ಆಟೋ ಎಕ್ಸ್‌ಪೋ ವಾಹನೋದ್ಯಮ ಪುನರುಜ್ಜೀವನದ ವೇದಿಕೆಯಾಗಬಹುದು. ಇದು ಕುಸಿತದ ಹಾದಿಯಲ್ಲಿ ಇದ್ದಾಗಲೇ ಕಳೆದ ಹಬ್ಬದ ಋತುವಿನಂದು ಆರಂಭವಾಯಿತು. ಆದರು, ಜನರು ಅಲ್ಪ ಮಟ್ಟಿನ ಸ್ಪಂದನೆ ತೋರಿದ್ದಾರೆ.

ದ್ವಿಚಕ್ರ ವಾಹನಗಳಿಂದ ಹಿಡಿದು ಕಾರು ಮತ್ತು ಬೃಹತ್ ಟ್ರಕ್‌ಗಳ ಮಾರಾಟವು ಕೆಂಪು ಬಣ್ಣದಲ್ಲಿದ್ದವು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಸಗಟು ರವಾನೆ ಶೇ 13-17ರಷ್ಟು ಕುಸಿತವಾಗಿದೆ. ಇದರೊಂದಿಗೆ ಉದ್ಯಮವು 2019-20ರಲ್ಲಿ ಮುಚ್ಚುವ ಭೀತಿಯನ್ನು ಎದುರಿಸಿತ್ತು.

ಮಾರಾಟದ ಕುಸಿತದಿಂದ ಕುಸಿತವು ಅನೇಕ ಕಂಪನಿಗಳ ಉತ್ಪಾದನಾ ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸಬೇಕಾಯಿತು. ಇದರಿಂದ ಕಂಪನಿಗಳು ತಮ್ಮ ಉತ್ಪಾದನಾ ಯೋಜನೆಗಳನ್ನು ವರ್ಷವಿಡಿ ಮರುಮೌಲ್ಯಮಾಪನ ಮಾಡಬೇಕಾಯಿತು. ಮಾರಾಟಗಾರರ ಮತ್ತು ವಾಹನ ಘಟಕಗಳು ಸೇರಿದಂತೆ ಸುಮಾರು 3.5 ಲಕ್ಷ ಜನರು ಉದ್ಯೋಗಗಳನ್ನು ಕಳೆದುಕೊಂಡರು.

ಇಂತಹ ಕಠಿಣ ಸಮಯದ ಹೊರತಾಗಿಯೂ ನಾವು ಯಾವುದೇ ಭರವಸೆಗಳು ಕಳೆದುಕೊಂಡಿಲ್ಲ. 2020-21ರಲ್ಲಿ ಉದ್ಯಮ ಚೇತರಿಸಿಕೊಳ್ಳಲಿದೆ ಎಂಬ ಭರವಸೆಯನ್ನು ಭಾರತೀಯ ವಾಹನ ತಯಾರಕ ಸಂಸ್ಥೆ (ಎಸ್​ಐಎಎಂ) ವ್ಯಕ್ತಪಡಿಸಿದೆ.

ಬಿಎಸ್ - VI ಮಾನದಂಡ ಜಾರಿಗೆ ಬರಲಿದ್ದು, ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಹೊಸ ಪ್ಲಾಟ್‌ಫಾರ್ಮ್‌ಗಳು ಲಭ್ಯವಾಗಲಿದೆ. ಇದರೊಂದಿಗೆ 2020 ವರ್ಷವು ಆಸಕ್ತಿದಾಯಕ ವರ್ಷವಾಗಲಿದೆ ಎಂದು ಸಿಯಾಮ್ ಅಧ್ಯಕ್ಷ ರಾಜನ್ ವಾಧೇರಾ ತಿಳಿಸಿದರು.

ಉದ್ಯಮಕ್ಕೆ ಭರವಸೆಯಾದ ಅಂಶಗಳು:

ಮುಂದಿನ ವರ್ಷದ ಆರಂಭಿಕ ತಿಂಗಳಲ್ಲಿ ಭಾರತದ ಆರ್ಥಿಕತೆಯು ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ಕೆಳ ಹಂತದಲ್ಲಿದ್ದ ಮಾರಾಟ ಮತ್ತು ಹೊಸ ಮಾದರಿಗಳ ಲಭ್ಯತೆಯು ವಾಹನ ಕ್ಷೇತ್ರದ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲಲಿವೆ ಎಂದು ವಾಧೇರಾ ಹೇಳಿದರು.

ಅವರ ಪ್ರಕಾರ, ಮುಂದಿನ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಿಂದ ಈ ವಲಯವು ಪುನರುಜ್ಜೀವನಗೊಳ್ಳುವ ನಿರೀಕ್ಷೆಯಿದೆ. ಆದರೆ, ಇದರ ಬೆಳವಣಿಗೆಯ ಲಕ್ಷಣಗಳು ಮೂರನೇ ತ್ರೈಮಾಸಿಕದಿಂದ ಗೋಚರಿಸಲಿವೆ.

ಬಿಎಸ್-6 ನಿಯಮಗಳನ್ನು ಅನುಷ್ಠಾನಗೊಳಿಸುವುದರಿಂದ ಎಲ್ಲ ಹಳೆಯ ದಾಸ್ತಾನು ವಾಹನಗಳನ್ನು ತೆರವುಗೊಳಿಸುವುದು, ಹೊಸ ವಾಹನಗಳ ದಾಸ್ತಾನು ಮತ್ತು ಮಾರುಕಟ್ಟೆಯಲ್ಲಿ ಹೊಸ ಬಿಎಸ್-6 ಕಂಪ್ಲೈಂಟ್ ವಾಹನಗಳು ಲಭ್ಯವಾಗಲಿವೆ. ಇದು ಉತ್ಪಾದನೆ ಮತ್ತು ಮಾರಾಟಕ್ಕೆಯ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಿದ್ದಾರೆ.

ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ವಾಹನಗಳ ತಯಾರಿಕ ವೆಚ್ಚವು ಶೇ 8-10ರಷ್ಟು ಏರಿಕೆಯಾಗಬಹುದು. ಇದು ಮತ್ತಷ್ಟು ನಷ್ಟಕ್ಕೆ ಕಾರಣವಾಗಬಹುದು ಎಂದು ಉದ್ಯಮವು ಆತಂಕ ವ್ಯಕ್ತಪಡಿಸಿದೆ.

ಟಾಟಾ ಮೋಟಾರ್ಸ್‌ ಬಿಎಸ್-6 ಪರಿವರ್ತನೆಯ ಮೇಲೆ ಅತಿಹೆಚ್ಚು ಹೂಡಿಕೆ ಮಾಡಿದೆ. ಬಿಎಸ್-6 ಪರಿವರ್ತನೆಗೆ ನಾವು ಸಿದ್ಧರಿದ್ದೇವೆ. ನಮ್ಮ ಹೊಸ ಬಿಎಸ್-6 ಉತ್ಪನ್ನಗಳು ಜನವರಿ 2020ರಿಂದ ಹೊರಬರಲಿವೆ ಎಂದು ಟಾಟಾ ಮೋಟಾರ್ಸ್ ಸಿಇಒ ಮತ್ತು ಎಂಡಿ ಗುಂಟರ್ ಬುಟ್ಶೆಕ್ ಹೇಳಿದರು.

Intro:Body:

The Indian auto industry is desperately pinning hopes on the next financial year for a turnaround, banking on a host of new and upgraded models slated to make their way to the market.

New Delhi: Battered by an unprecedented slowdown, the Indian auto industry is desperately pinning hopes on the next financial year for a turnaround, banking on a host of new and upgraded models slated to make their way to the market.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.