ನವದೆಹಲಿ: ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯಲ್ಲಿ ಶನಿವಾರ ಶೇ 3ರಷ್ಟು ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ತೈಲ ಬೆಲೆಗಳ ಏರಿಳಿತದ ಬಳಿಕ ಎರಡು ತಿಂಗಳಲ್ಲಿ ನಾಲ್ಕನೇ ಬಾರಿ ಹೆಚ್ಚಳವಾಗಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೊಸ ಗರಿಷ್ಠ ಮಟ್ಟ ತಲುಪಿದ ನಂತರ ಬದಲಾಗದೇ ಯಥಾವತ್ತಾಗಿ ಉಳಿದಿವೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆ ಕಿಲೋಲಿಟರ್‌ಗೆ 1,512.38 ರೂ.ಯಷ್ಟು ಹೆಚ್ಚಳವಾಗಿದೆ. ಇದು 2020ರ ಡಿಸೆಂಬರ್ 1ರ ನಂತರದ ನಾಲ್ಕನೇ ಏರಿಕೆಯಾಗಿದೆ. ಡಿಸೆಂಬರ್ 1ರಂದು ಶೇ 7.6ರಷ್ಟು (ಪ್ರತಿ ಕಿಲೋಗೆ 3,288.38 ರೂ.) ಹೆಚ್ಚಳವಾಗಿತ್ತು. ಡಿ.16 ರಂದು ಶೇ 6.3 ರಷ್ಟು (2,941.5 ರೂ.) ಮತ್ತು ಜನವರಿ 1ರಂದು 1,817.62 ರೂ. (ಶೇ 3.69) ಏರಿಕೆಯಾಗಿತ್ತು.
ಇದನ್ನೂ ಓದಿ: ಸುರಕ್ಷಿತ ಪಾವತಿ ವ್ಯವಸ್ಥೆಗೆ ಒತ್ತು ನೀಡಬೇಕಿದೆ: ಆರ್‌ಬಿಐ ಗವರ್ನರ್
ಹಿಂದಿನ ಹದಿನೈದು ದಿನಗಳಲ್ಲಿ ಮಾನದಂಡದ ಅಂತಾರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ದರದ ಸರಾಸರಿ ಬೆಲೆಯ ಆಧಾರದ ಮೇಲೆ ಪ್ರತಿ ತಿಂಗಳು 1 ಮತ್ತು 16ರಂದು ಎಟಿಎಫ್ ಬೆಲೆ ಪರಿಷ್ಕರಿಸಲಾಗುತ್ತದೆ. ಮುಂಬೈನಲ್ಲಿ ಶನಿವಾರ ಎಟಿಎಫ್ ಬೆಲೆ ಪ್ರತಿ ಕಿಲೋಗೆ 50,596.02 ರೂ.ಗೆ ಏರಿದೆ. ಸ್ಥಳೀಯ ತೆರಿಗೆಗಳ ಪ್ರಮಾಣವನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಕೋವಿಡ್-19 ಲಾಕ್ಡೌನ್ನಿಂದ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಸಾಮಾನ್ಯ ವ್ಯವಹಾರಕ್ಕೆ ಮರಳಲು ಹೆಣಗಾಡುತ್ತಿರುವ ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚುವರಿ ದರದ ಹೊರೆ ಇನ್ನಷ್ಟು ಬಿಗಡಾಯಿಸಲಿದೆ. ವಿಮಾನಯಾನ ಸಂಸ್ಥೆಯ ಚಾಲನಾ ವೆಚ್ಚದ ಶೇ 40ರಷ್ಟನ್ನು ಎಟಿಎಫ್ ಬೆಲೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಲಿದೆ.
ದಾಖಲೆಯ ಮಟ್ಟಕ್ಕೆ ಏರಿದ ನಂತರ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ. ಜನವರಿ 14ರಂದು ಪೆಟ್ರೋಲ್ ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಲೀಟರ್‌ಗೆ 84.70 ರೂ., ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ 91.32 ರೂ.ಯಷ್ಟಿದೆ. ಮುಂಬೈಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 81.60 ರೂ. ದೆಹಲಿಯಲ್ಲಿ 74.88 ರೂ.ನಷ್ಟಿದೆ.