ದಿಸ್ಪುರ್: ಅಸ್ಸೊಂ ರಾಜ್ಯ ಸರ್ಕಾರವು ವಧುವಿನ ಮನೆಯವರಿಗೆ ಅರುಂಧತಿ ಗೋಲ್ಡ್ ಸ್ಕೀಮ್ ಯೋಜನೆಯಡಿ ಹೊಸ ವರ್ಷದ ಉಡುಗೊರೆಯೊಂದನ್ನು ನೀಡುತ್ತಿದೆ.
2020ರ ಜನವರಿ ತಿಂಗಳಿಂದ ಅಸ್ಸೊಂ ಸರ್ಕಾರವು ಅರುಂಧತಿ ಚಿನ್ನದ ಯೋಜನೆಯೊಂದನ್ನು ಆರಂಭಿಸುತ್ತಿದ್ದು, ವಿವಾಹ ನೋಂದಾಯಿತ ಮಹಿಳೆಗೆ ಚಿನ್ನಾಭರಣ ಖರೀದಿಗಾಗಿ 30,000 ರೂ. ಧನ ಸಹಾಯ ನೀಡುತ್ತಿದೆ.
ಈ ಯೋಜನೆ ಜಾರಿಯಿಂದ 2020ರಲ್ಲಿ ಅಸ್ಸೊಂ ಸರ್ಕಾರಕ್ಕೆ ಹೆಚ್ಚುವರಿಯಾಗಿ 800 ಕೋಟಿ ರೂ. ವೆಚ್ಚ ತಗುಲುತ್ತದೆ. ಯೋಜನೆಯ ಫಲಾನುಭವಿಯಾಗಲು ಮದುವೆಯ ಮುನ್ನ ವಧು ವಿಶೇಷ ಮದುವೆ ಕಾಯ್ದೆ 1954ರ ಅಡಿಯಲ್ಲಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಿದೆ. ವಧು ಮತ್ತು ವಧುವಿನ ಪೋಷಕರ ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಹೆಚ್ಚಿರಬಾರದು. ಫಲಾನುಭವಿಗೆ ಕನಿಷ್ಠ 18- 21 ವರ್ಷ ವಯಸ್ಸಾಗಿರಬೇಕು.