ನವದೆಹಲಿ: ಬಹುನಿರೀಕ್ಷಿತ ಐಫೋನ್ 12 ಸರಣಿಯು ಅಕ್ಟೋಬರ್ 30ರಿಂದ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಆರಂಭಿಕ ಬೆಲೆಯು 69,900 ರೂ.ಯಿಂದ ಪ್ರಾರಂಭವಾಗಲಿದೆ. ಈ ಸಾಧನಗಳು 64 ಜಿಬಿ, 128 ಜಿಬಿ, ಮತ್ತು 256 ಜಿಬಿ ಮೆಮೊರಿ ಸಾಮರ್ಥ್ಯದ ರೂಪಾಂತರಗಳಲ್ಲಿ ಲಭ್ಯವಿರುತ್ತವೆ. ಐಫೋನ್ 12 ಫೋನ್ 76,900 ರೂ.ಯಿಂದ ಪ್ರಾರಂಭವಾಗಲಿದ್ದು, 12 ಮಿನಿ ಆರಂಭಿಕ ಬೆಲೆ 69,900 ರೂ.ಗೆ ಮಾರಾಟವಾಗಲಿದೆ.
ಮತ್ತೊಂದೆಡೆ ಐಫೋನ್ 12 ಪ್ರೊ 64 ಜಿಬಿ ರೂಪಾಂತರಕ್ಕೆ 1,19,900 ರೂ. ವೆಚ್ಚವಾಗಲಿದ್ದು, 12 ಪ್ರೊ ಮ್ಯಾಕ್ಸ್ ಭಾರತದಲ್ಲಿ 1,29,900 ರೂ. ದರದಿಂದ ಪ್ರಾರಂಭವಾಗುತ್ತದೆ. ಅಕ್ಟೋಬರ್ 30ರಿಂದ ಈ ಎರಡು ಸಾಧನಗಳನ್ನು ಸಹ ಮಾರಾಟ ಮಾಡಲಾಗುತ್ತದೆ.
ಕಂಪನಿಯು ತನ್ನ ಆ್ಯಪಲ್ ಟಿವಿ ಸ್ಟ್ರೀಮಿಂಗ್ ಸೇವೆಗೆ ಒಂದು ವರ್ಷದ ಅವಧಿಯ ಚಂದಾದಾರಿಕೆ ಮತ್ತು ಹೊಸ ಖರೀದಿಗಳೊಂದಿಗೆ ಮೂರು ತಿಂಗಳ ಆ್ಯಪಲ್ ಆರ್ಕೇಡ್ ಸಹ ನೀಡುತ್ತಿದೆ. ಹೆಚ್ಚು ಪರಿಸರ ಸ್ನೇಹಿಯಾಗಿರಲು ಆ್ಯಪಲ್ ಡ್ರೈವ್‌ನ ಭಾಗವಾಗಿ ಸಾಧನಗಳ ಬಾಕ್ಸ್ ಚಾರ್ಜರ್‌ಗಳೊಂದಿಗೆ ನೀಡುವುದಿಲ್ಲ. ಕಂಪನಿಯು ಹೊಸ ಮ್ಯಾಗ್‌ಸೇಫ್ ಪರಿಕರಗಳನ್ನು ಪರಿಚಯಿಸಿದ್ದು, ಇದು ಚಾರ್ಜಿಂಗ್‌ಗಾಗಿ ತನ್ನ ಸ್ವಾಮ್ಯದ ಮ್ಯಾಗ್ನೆಟಿಕ್ ಪಿನ್ ತಂತ್ರಜ್ಞಾನ ಬಳಸುತ್ತದೆ. ನವೆಂಬರ್ 6 ರಿಂದ ಇವುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.
ಆ್ಯಪಲ್ ಇತ್ತೀಚೆಗೆ ಭಾರತದಲ್ಲಿ ತನ್ನ ಮೊದಲ ಆನ್‌ಲೈನ್ ಚಿಲ್ಲರೆ ಅಂಗಡಿ ಪರಿಚಯಿಸಿತು. ಕಂಪನಿಯು ತನ್ನ ವಿಸ್ತೃತ ಸೇವೆಯಾದ ಆ್ಯಪಲ್‌ಕೇರ್ ಅನ್ನು ದೇಶದಲ್ಲಿಯೂ ಮಾರಾಟ ಮಾಡಲು ಅವಕಾಶ ಮಾಡಿಕೊಂಡಿದೆ.
ಐಫೋನ್ 12
- ಐಫೋನ್ 12 ಒಎಲ್ಇಡಿ ಡಿಸ್‌ಪ್ಲೇ
- A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್
- 5G ಬೆಂಬಲಿತ
- ಎರಡು ಕ್ಯಾಮೆರಾ ಫೀಚರ್ (12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕ)
- 64GB ವೇರಿಯಂಟ್
ಐಫೋನ್ 12 ಮಿನಿ
- 5.4- ಇಂಚಿನ ಡಿಸ್‌ಪ್ಲೇಯು ಸೂಪರ್ ರೆಟಿನಾ ಎಕ್ಸ್ಆರ್ಡಿ ಡಿಸ್‌ಪ್ಲೇ
- ಎ14 ಬಯೋನಿಕ್ ಎಸ್‌ಒಸಿ
- 5G ಸಪೋರ್ಟ್
- ಐಫೋನ್ 12 ಫೀಚರ್ಸ್ ಹೊಂದಿದ್ದು, ಗಾತ್ರದಲ್ಲಿ ವ್ಯತ್ಯಾಸವಿದೆ
ಐಫೋನ್ 12 ಪ್ರೊ
- 6.1-ಇಂಚಿನ ಡಿಸ್‌ಪ್ಲೇ
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್, 2 ವೈಡ್-ಆಂಗಲ್ ಸೆನ್ಸರ್, ಟೆಲಿಫೋಟೋ ಸಂವೇದಕ
- 128GB ವೇರಿಯಂಟ್
ಐಫೋನ್ 12 ಪ್ರೊ ಮ್ಯಾಕ್ಸ್
- 6.7 ಇಂಚಿನ ಡಿಸ್‌ಪ್ಲೇ
- ಟೆಲಿಫೋಟೋ ಕ್ಯಾಮರಾ, 65 ಎಂಎಂ ಫೋಕಲ್ ಉದ್ದ, 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿ, ಅಲ್ಟ್ರಾ-ವೈಡ್-ಆಂಗಲ್ ಕ್ಯಾಮರಾ
- ಡಾಲ್ಬಿ ಸಪೋರ್ಟ್