ETV Bharat / business

ಕೊರೊನಾ ವಿರುದ್ಧ ಇಮ್ಯುನಿಟಿ ವೃದ್ಧಿಗೆ ಅಮುಲ್​ನಿಂದ 'ತುಳಸಿ', 'ಶುಂಠಿ' ಹಾಲು ಮಾರುಕಟ್ಟೆಗೆ - ಆರೋಗ್ಯ

ತುಳಸಿಯಲ್ಲಿ ಸೂಕ್ಷ್ಮಜೀವಾಣುಗಳಿದ್ದು ಅಲರ್ಜಿಯ ವಿರುದ್ಧ ಇಮ್ಯುನಿಟಿ ವೃದ್ಧಿಗೆ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡಲು ಅತ್ಯಂತ ಉಪಯುಕ್ತ..

Amul
ಅಮುಲ್
author img

By

Published : Aug 1, 2020, 3:27 PM IST

ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ವೇಳೆ ತನ್ನ ಗ್ರಾಹಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮುಲ್ ಇಂಡಿಯಾ, 'ಶುಂಠಿ' ಮತ್ತು 'ತುಳಸಿ' ಹಾಲಿನ ಉತ್ಪನ್ನಗಳನ್ನು ಹೊರ ತಂದಿದೆ.

ಈ ಎರಡೂ ಉತ್ಪನ್ನಗಳು ಕ್ಯಾನ್​ ಮತ್ತು ಪ್ಯಾಕೇಟ್​ಗಳಲ್ಲಿ ಲಭ್ಯವಿರುತ್ತದೆ. 125 ಮಿಲಿ ಕ್ಯಾನ್‌ನ ಬೆಲೆ 25 ರೂ. ನಿಗದಿಪಡಿಸಲಾಗಿದೆ. ಈ ಪಾನೀಯಗಳನ್ನು ದಿನದ ಯಾವುದೇ ಗಂಟೆಯಲ್ಲಿ ಯಾವುದೇ ವಯಸ್ಸಿನವರು ನಿಯಮಿತವಾಗಿ ಸೇವಿಸಬಹುದು. ಪ್ಯಾಕ್‌ಗಳು ಕೋಣೆಯ ಉಷ್ಣಾಂಶದಲ್ಲಿ 6 ತಿಂಗಳ ತನಕ ಬಳಸಲು ಯೋಗ್ಯವಾಗಿರುತ್ತವೆ.

ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ ಅಮುಲ್ ಇಂಡಿಯಾ 'ಅರಿಶಿನ' ರುಚಿಯ ಹಾಲನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಕಂಪನಿಯು ಇದನ್ನು 200 ಎಂಎವಿ ಬಾಟಲಿಯಲ್ಲಿ ರುಚಿಯಾದ ಬಟರ್‌ಸ್ಕಾಚ್‌ನಲ್ಲಿ ಬಿಡುಗಡೆ ಮಾಡಿತ್ತು. ಕಂಪನಿಯು ಇದಕ್ಕೆ 30 ರೂ. ಬೆಲೆ ನಿಗದಿಪಡಿಸಿ 'ಗೋಲ್ಡನ್ ಮಿಲ್ಕ್' ಎಂದು ಹೆಸರಿಟ್ಟಿತ್ತು.

ತುಳಸಿಯಲ್ಲಿ ಸೂಕ್ಷ್ಮಜೀವಾಣುಗಳಿದ್ದು ಅಲರ್ಜಿಯ ವಿರುದ್ಧ ಇಮ್ಯುನಿಟಿ ವೃದ್ಧಿಗೆ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡಲು ಅತ್ಯಂತ ಉಪಯುಕ್ತ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಶುಂಠಿ ಸಹ ನೆರವಾಗುತ್ತದೆ. ಕೊರೊನಾದಂತಹ ವೈರಸ್ ಎದುರಿಸಲು ಈ ಸಮಯದಲ್ಲಿ ನಮಗೆ ಬೇಕಾಗಿರುವುದು ಬಲವಾದ ಮತ್ತು ಪರಿಪೂರ್ಣ ರೋಗನಿರೋಧಕ ಶಕ್ತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.