ನವದೆಹಲಿ: ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ 24 ಗಂಟೆಯೊಳಗೆ ಟಿಕೆಟ್ಗಳನ್ನು ರದ್ದುಪಡಿಸಿದರೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ಮುಖ್ಯಸ್ಥ ಹಾಗು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಮಾತನಾಡಿ, ಪ್ರಯಾಣಿಕರು 2019ರ ಮೇ 1ರ ಬಳಿಕ ಬುಕ್ ಮಾಡಿದ ವಿಮಾನ ಟಿಕೆಟನ್ನು 24 ಗಂಟೆಯೊಳಗೆ ರದ್ದುಪಡಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಧಿಸದೆ, ಬುಕ್ಕಿಂಗ್ ಹಣ ಮರುಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯ ಫೆಬ್ರವರಿ 27ರಂದು ಹೊಸ ಪ್ರಯಾಣಿಕ ಚಾರ್ಟರನ್ನು ಅಂತಿಮಗೊಳಿಸಿ ಪ್ರಸ್ತುತವಿರುವ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿದೆ.
ದೇಶಿ ಪ್ರಯಾಣಿಕರ ಟಿಕೆಟ್ ಮಾರಾಟ ಹಾಗೂ ಪ್ರಯಾಣದ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಜಿಸಿಎ ಆದೇಶ ಅನ್ವಯ ಈ ಸೇವೆ 2019ರ ಮೇ 1ರಿಂದ ಜಾರಿಗೆ ಬರುತ್ತಿದೆ. ಟಿಕೆಟ್ ಕ್ಯಾನ್ಸಲ್ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.