ನವದೆಹಲಿ: ದೇಶದ ಅಗ್ರ ಶ್ರೀಮಂತರಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ ಒಡೆತನದ ಅದಾನಿ ಗ್ರೀನ್ ಎನರ್ಜಿ ಕಂಪನಿ ನವೀಕರಿಸಬಹುದಾದ ಇಂಧನ ಯೋಜನೆಗಳ ನಿರ್ಮಾಣಕ್ಕಾಗಿ ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ 288 ಮಿಲಿಯನ್ ಡಾಲರ್ (ಸುಮಾರು ರೂ 2,188 ಕೋಟಿ) ಸಾಲ ಪಡೆದಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ತನ್ನ ನಿರ್ಮಾಣದ ಹಣಕಾಸು ಚೌಕಟ್ಟನ್ನು 1.64 ಶತಕೋಟಿ ಡಾಲರ್‌ಗೆ ವಿಸ್ತರಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿರುವ ನವೀಕರಿಸಬಹುದಾದ ಯೋಜನೆಗಳ ಬಂಡವಾಳಕ್ಕಾಗಿ 288 ಮಿಲಿಯನ್ ಡಾಲರ್ ಸಾಲವನ್ನು ಪ್ರಮುಖ ಅಂತಾರಾಷ್ಟ್ರೀಯ ಸಾಲದಾತರ ಗುಂಪಿನೊಂದಿಗೆ ಪಡೆಯುತ್ತಿರುವುದಾಗಿ ಕಂಪನಿ ತಿಳಿಸಿದೆ.
ಗ್ರೀನ್ ಹೈಬ್ರಿಡ್ ಯೋಜನೆಗೆ ಒಪ್ಪಂದಗಳ ಪ್ರಕಾರ ಏಳು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಾದ ಬಿಎಲ್‌ಪಿ ಪರಿಬಾಸ್, ಸಹಕಾರಿ ರಾಬೋಬ್ಯಾಂಕ್ ಯುಎ, ಇಂಟೆಸಾ ಸ್ಯಾನ್‌ಪೋಲೊ ಎಸ್‌ಪಿಎ, ಜಪಾನ್‌ನ ಎಂಯುಎಫ್‌ಜಿ ಬ್ಯಾಂಕ್ , ಸೊಸೈಟಿ ಜನರಲ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಹಾಗೂ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್ ಸಾಲ ನೀಡುತ್ತಿವೆ.
ರಾಜಸ್ಥಾನದಲ್ಲಿ ಸ್ಥಾಪಿಸುತ್ತಿರುವ ಸೌರ ಮತ್ತು ಗಾಳಿ ನವೀಕರಿಸಬಹುದಾದ ಯೋಜನೆಗಳ 450 ಮೆಗಾ ಹೈಬ್ರಿಡ್ ಪೋರ್ಟ್ಫೋಲಿಯೊಗೆ ಹಣಕಾಸು ನೆರವನ್ನು ಒದಗಿಸುತ್ತದೆ. 2021ರ ಮಾರ್ಚ್‌ನಲ್ಲಿ ಏಷ್ಯಾದ ಅತಿದೊಡ್ಡ ಹಣಕಾಸಿನ ಯೋಜನೆಗಳಲ್ಲಿ ಒಂದಾಗಿದ್ದ 1.35 ಬಿಲಿಯನ್ ಡಾಲರ್ ಮೊತ್ತದ ರಿವಾಲ್ವರ್ ತಯಾರಿಕೆಯ ಯೋಜನೆಯನ್ನು ಬಂದ್ ಮಾಡಿರುವುದಾಗಿ ಇದೇ ವೇಳೆ ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ.
ಈ ಆರ್ಥಿಕ ಸಾಲದ ನೆರವು ವಿದ್ಯುತ್ ಉತ್ಪಾದನೆಯನ್ನು ಡಿಕಾರ್ಬನೈಜ್ ಮಾಡುವತ್ತ ಸಾಗುತ್ತಿರುವ ನಮ್ಮ ಗುರಿಗೆ ಸಹಾಯ ಮಾಡಿಕೊಡುತ್ತದೆ ಎಂದು ಎಜಿಇಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿನೀತ್ ಎಸ್ ಜೈನ್ ತಿಳಿಸಿದ್ದಾರೆ.
ಎಜಿಇಎಲ್ 2030ರ ವೇಳೆಗೆ 45 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು ದೇಶಾದ್ಯಂತ 450ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯ ಶೇ.10 ರಷ್ಟು ಇದೆ.
ಇದನ್ನೂ ಓದಿ: ಭಾರತದಲ್ಲಿ 42 ಬಿಲಿಯನ್ ಡಾಲರ್ ಹೂಡಿಕೆಗೆ ಜಪಾನ್ ಸಜ್ಜು.. ಮೋದಿ-ಜಪಾನ್ ಪಿಎಂ ಭೇಟಿ ವೇಳೆ ಒಪ್ಪಂದ