ETV Bharat / business

ಗ್ರಾಹಕರಿಗೆ ಸಿಹಿಸುದ್ದಿ: ಗಗನಕ್ಕೇರಿದ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ

ಚಿಲ್ಲರೆ ಈರುಳ್ಳಿ ಬೆಲೆ ಕಳೆದ ಮೂರು ದಿನಗಳಲ್ಲಿ ಪ್ರತಿ ಕೆ.ಜಿ.ಗೆ 65 ರೂ. ಸ್ಥಿರವಾಗಿದೆ. ಬೆಲೆ ಏರಿಕೆ ಪರಿಶೀಲಿಸಲು ಸರ್ಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತುಗಳನ್ನು ಸಕಾಲಿಕವಾಗಿ ನಿಷೇಧಿಸಲಾಗಿದೆ ಮತ್ತು ಆಮದು ಮಾಡಿಕೊಳ್ಳಲು ಕ್ರಮ ಕೈಗೊಂಡಿದೆ ಎಂದು ಗೋಯಲ್ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Onion
ಈರುಳ್ಳಿ
author img

By

Published : Oct 30, 2020, 7:21 PM IST

ನವದೆಹಲಿ: ದೇಶೀಯ ಪೂರೈಕೆ ಹೆಚ್ಚಿಸಲು ಮತ್ತು ಬೆಲೆ ಏರಿಕೆ ಪರಿಶೀಲಿಸುವ ಪ್ರಯತ್ನದಲ್ಲಿ ಖಾಸಗಿ ವ್ಯಾಪಾರಿಗಳು ಈಗಾಗಲೇ 7,000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದಾರೆ. ದೀಪಾವಳಿಗೂ ಮುನ್ನ 25,000 ಟನ್ ಬರುವ ನಿರೀಕ್ಷೆಯಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಸಹಕಾರಿ ನಾಫೆಡ್ ಸಹ ಈರುಳ್ಳಿ ಆಮದು ಪ್ರಾರಂಭಿಸಲಿದೆ. ಅಲ್ಲದೇ, ಸ್ಥಳೀಯ ಪೂರೈಕೆ ಮತ್ತು ಬೆಲೆ ನಿಯಂತ್ರಣ ಸುಧಾರಿಸುವ ಉದ್ದೇಶದಿಂದ ಭೂತಾನ್‌ನಿಂದ 30,000 ಟನ್ ಆಲೂಗಡ್ಡೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಚಿಲ್ಲರೆ ಈರುಳ್ಳಿ ಬೆಲೆ ಕಳೆದ ಮೂರು ದಿನಗಳಲ್ಲಿ ಪ್ರತಿ ಕೆ.ಜಿ.ಗೆ 65 ರೂ. ಸ್ಥಿರವಾಗಿದೆ. ಬೆಲೆ ಏರಿಕೆ ಪರಿಶೀಲಿಸಲು ಸರ್ಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತುಗಳನ್ನು ಸಕಾಲಿಕವಾಗಿ ನಿಷೇಧಿಸಲಾಗಿದೆ ಮತ್ತು ಆಮದು ಮಾಡಿಕೊಳ್ಳಲು ಕ್ರಮ ಕೈಗೊಂಡಿದೆ ಎಂದು ಗೋಯಲ್ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಡಿಸೆಂಬರ್​​ವರೆಗೆ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರವು ಕೆಲವು ನಿಯಮಗಳನ್ನು ಸಡಿಲಿಸಿತು. ಈವರೆಗೆ 7,000 ಟನ್ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಂಡಿದ್ದಾರೆ ಎಂದರು.

ದೀಪಾವಳಿಗೂ ಮುನ್ನ ಇನ್ನೂ 25 ಸಾವಿರ ಟನ್ ಈರುಳ್ಳಿ ಬರುವ ನಿರೀಕ್ಷೆಯಿದೆ. ಆಮದುಗಳ ಜೊತೆಗೆ ಮುಂದಿನ ತಿಂಗಳಿನಿಂದ ಮಂಡಿಗಳಲ್ಲಿ ಹೊಸ ಖಾರಿಫ್ ಬೆಳೆ ಆಗಮನವು ಪೂರೈಕೆ ಪರಿಸ್ಥಿತಿ ಸುಧಾರಿಸಲು ಮತ್ತು ಬೆಲೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ನೆರವಾಗುತ್ತದ ಎಂದು ಹೇಳಿದರು.

ಈಜಿಪ್ಟ್, ಅಫ್ಘಾನಿಸ್ತಾನ ಮತ್ತು ಟರ್ಕಿಯಂತಹ ದೇಶಗಳಿಂದ ಈರುಳ್ಳಿಯನ್ನು ಖಾಸಗಿ ವ್ಯಾಪಾರಿಗಳು ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಹೇಳಿದರು. ನಾಫೆಡ್ ಸಹ ತನ್ನದೇ ಆದ ಸಾಮರ್ಥ್ಯದ ಮೇಲೆ ಆಮದು ಮಾಡಿಕೊಳ್ಳುತ್ತದೆ.

ಈರುಳ್ಳಿ ಆಮದು ಮತ್ತು ಈರುಳ್ಳಿ ಬೀಜಗಳ ರಫ್ತು ನಿಷೇಧಿಸಲು ಸರ್ಕಾರವು ಕೆಲವು ಮಾನ ದಂಡಗಳನ್ನು ಸಡಿಲಗೊಳಿಸಿದೆ ಎಂದು ತಿಳಿಸಿದರು.

ಹೋರ್ಡಿಂಗ್ ಮತ್ತು ಬ್ಲ್ಯಾಕ್ ಮಾರ್ಕೆಟಿಂಗ್ ತಡೆಯಲು ವ್ಯಾಪಾರಿಗಳಿಗೆ ಸ್ಟಾಕ್ ಮಿತಿ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಈರುಳ್ಳಿ ಬಫರ್ ಸ್ಟಾಕ್ ಅನ್ನು ಹೊಂದಿರುವ ನಾಫೆಡ್ ಮುಕ್ತ ಮಾರುಕಟ್ಟೆಯಲ್ಲಿ ಸ್ಟಾಕ್ ಅನ್ನು ಲೋಡ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ನಾಫೆಡ್ 36,488 ಟನ್​ಗಳನ್ನು ಲೋಡ್ ಮಾಡಿದೆ.

ಆಲೂಗಡ್ಡೆ ಬೆಲೆ ಸಹ ಏರುತ್ತಿದೆ. ದೇಶಾದ್ಯಂತ ಸರಾಸರಿ ಚಿಲ್ಲರೆ ಬೆಲೆ ಕಳೆದ ಮೂರು ದಿನಗಳಿಂದ ಪ್ರತಿ ಕೆ.ಜಿ.ಗೆ ಸುಮಾರು 42 ರೂ.ನಷ್ಟಿದೆ. ಆಲೂಗಡ್ಡೆ ಆಮದು ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಮುಂದಿನ ಒಂದೆರಡು ದಿನಗಳಲ್ಲಿ ಭೂತಾನ್‌ನಿಂದ ಸುಮಾರು 30,000 ಟನ್ ಆಲೂಗಡ್ಡೆ ಬರಲಿದೆ ಎಂದು ಸಚಿವರು ಹೇಳಿದರು.

ನಾವು ಸುಮಾರು 10 ಲಕ್ಷ ಟನ್ ಆಲೂಗಡ್ಡೆಯನ್ನು ಆಮದು ಮಾಡಿಕೊಂಡು ಬೆಲೆಗಳನ್ನು ನಿಯಂತ್ರಣಕ್ಕೆ ತರಲಿದ್ದೇವೆ ಎಂದು ಭರವಸೆ ನೀಡಿದರು.

ಖರೀಫ್ ಈರುಳ್ಳಿ ಮುಂದಿನ ತಿಂಗಳಿನಿಂದ ಮಂಡಿಗಳಿಗೆ ಬರುವ ನಿರೀಕ್ಷೆಯಿದೆ. ಖಾರಿಫ್ ಮತ್ತು ನಂತರದ ಖಾರಿಫ್ ಋತುವಿನಿಂದ ಈರುಳ್ಳಿ ಉತ್ಪಾದನೆಯು ಪ್ರಸಕ್ತ ವರ್ಷದಲ್ಲಿ 6 ಲಕ್ಷ ಟನ್ ನಿಂದ 37 ಲಕ್ಷ ಟನ್ ಕಡಿಮೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.