ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ವೈಯಕ್ತಿಕ ಕಾಳಜಿಯ ದೃಷ್ಟಿಯಿಂದ ಮುಂದಿನ 6-9 ತಿಂಗಳಲ್ಲಿ ಭೌತಿಕ ಅಂಗಡಿಗಳಿಗಿಂತ ಆನ್‌ಲೈನ್ ಶಾಪಿಂಗ್‌ಗೆ ಆದ್ಯತೆ ನೀಡುವ ಭಾರತೀಯ ಗ್ರಾಹಕರ ಪಾಲು ಶೇ 64ಕ್ಕೆ ಏರಿಕೆಯಾಗಬಹುದು ಎಂದು ಕ್ಯಾಪ್ಜೆಮಿನಿ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಶೇ 57 ಜನರು ಆನ್‌ಲೈನ್ ಶಾಪಿಂಗ್‌ಗೆ ಆದ್ಯತೆ ನೀಡಿದ್ದರು. ಪ್ರಸ್ತುತ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಶೇ 46ರಷ್ಟಿದೆ ಎಂದು ವರದಿ ಹೇಳಿದೆ.
ಮುಂದಿನ 6-9 ತಿಂಗಳಲ್ಲಿ ದೇಶದ ಗ್ರಾಹಕರು ಭೌತಿಕ ಚಿಲ್ಲರೆ ಅಂಗಡಿಗಳಲ್ಲಿ ತಮ್ಮ ಶಾಪಿಂಗ್ ಪ್ರಮಾಣ ಕಡಿಮೆ ಮಾಡುತ್ತಾರೆ. ಸಾಂಕ್ರಾಮಿಕ ರೋಗದ ಮೊದಲು ಮಾಡಿದ ಶೇ 59ಕ್ಕೆ ಹೋಲಿಸಿದರೆ 46 ಪ್ರತಿಶತದಷ್ಟು ಭಾರತೀಯರು ಭೌತಿಕ ಚಿಲ್ಲರೆ ಅಂಗಡಿಗಳಲ್ಲಿ ಶಾಪಿಂಗ್ ಮಾಡುತ್ತಾರೆ.
ಸುಮಾರು 72 ಪ್ರತಿಶತದಷ್ಟು ಭಾರತೀಯ ಗ್ರಾಹಕರು ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸಲು ಆದ್ಯತೆ ನೀಡುತ್ತಾರೆ. ಇದು ವಿತರಣಾ ಭರವಸೆ ಮತ್ತು ಭವಿಷ್ಯದ ವಹಿವಾಟಿನ ಭರವಸೆಯಾಗಿದೆ. ಜಾಗತಿಕವಾಗಿ ಶೇ 59ರಷ್ಟು ಗ್ರಾಹಕರು ಕೋವಿಡ್ -19ಗಿಂತ ಮೊದಲು ಭೌತಿಕ ಮಳಿಗೆಗಳಿಂದ ಖರೀದಿಸುತ್ತಿದ್ದರು. ಮುಂದಿನ 6-9 ತಿಂಗಳಲ್ಲಿ ಶೇ 39ರಷ್ಟು ಗ್ರಾಹಕರು ಭೌತಿಕ ಮಳಿಗೆಗಳ ಜತೆ ಹೆಚ್ಚಿನ ಮಟ್ಟದ ಸಂವಾದ ನಿರೀಕ್ಷಿಸುತ್ತಿದ್ದಾರೆ.
ಬೇಡಿಕೆ ಇದೆ ಪೂರೈಕೆ ಕಷ್ಟ: ಜನರು ಏಕಾಏಕಿ ಆನ್‌ಲೈನ್ ಶಾಪಿಂಗ್‌ಗೆ ಮೊರೆ ಹೋಗಿ ಅವರಿಗೆ ಬೇಕಾದ ವಸ್ತುಗಳು ಸಿಗುತ್ತವೆ ಎಂಬ ಖಾತ್ರಿಯಿಲ್ಲ. ಈಗ ಇಡೀ ಜಗತ್ತೇ ಸ್ತಬ್ಧವಾಗಿದೆ. ವಸ್ತುಗಳು ಬೇಕಿದ್ದರೂ ಅದರ ಪೂರೈಕೆಯಲ್ಲಿ ಕೊರತೆಯಾಗಲಿದೆ. ಫೆಬ್ರವರಿ, ಮಾರ್ಚ್‌ನಿಂದ ಚೀನಾದಿಂದಲೂ ಭಾರತಕ್ಕೆ ಬಹುತೇಕ ವಸ್ತುಗಳು ಕಾಲಿಟ್ಟಿಲ್ಲ. ಅಲ್ಲಿಯೂ ಕಳೆದ ಕೆಲವು ತಿಂಗಳಿಂದ ಲಾಕ್‌ಡೌನ್ ಹೇರಲಾಗಿತ್ತು.