ದೆಹಲಿ : 5G ಅನ್ನು ಹೊರತರುವುದು ಭಾರತದ ರಾಷ್ಟ್ರೀಯ ಆದ್ಯತೆಯಾಗಿರಬೇಕು ಎಂದು ರಿಲಯನ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
'ಇಂಡಿಯಾ ಮೊಬೈಲ್ ಕಾಂಗ್ರೆಸ್ 2021'ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಂಬಾನಿ, ಭಾರತ 2Gಯಿಂದ 4G, 5Gಗೆ ಅಪ್‌ಗ್ರೇಡ್ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು. "2Gಗೆ ಸೀಮಿತವಾದ ಸಾಮಾಜಿಕ-ಆರ್ಥಿಕ ಪಿರಮಿಡ್‌ನ ಕೆಳಭಾಗದಲ್ಲಿ ಲಕ್ಷಾಂತರ ಭಾರತೀಯರನ್ನು ಇರಿಸುವುದು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳಿಂದ ಅವರನ್ನು ವಂಚಿತಗೊಳಿಸಿದಂತಾಗುತ್ತದೆ ಎಂದು ಹೇಳಿದರು.
'ಮುಂದಿನ ದಶಕದ ಸಂಪರ್ಕ' ಎಂಬ ಸಮ್ಮೇಳನದ ವಿಷಯಕ್ಕೆ ಸಂಬಂಧಿಸಿದ ಐದು ವಿಚಾರಗಳನ್ನು ಅಂಬಾನಿ ಪಟ್ಟಿ ಮಾಡಿದ್ದಾರೆ. ಭಾರತ ಹೆಚ್ಚಿನ ಡಿಜಿಟಲ್ ಸೇರ್ಪಡೆಯತ್ತ ಸಾಗಬೇಕು.
ಜಿಯೋದಲ್ಲಿ ನಾವು ಪ್ರಸ್ತುತ 4G ಮತ್ತು 5G ಕಾರ್ಯಗತಗೊಳಿಸುವಿಕೆ ಮತ್ತು ಬ್ರಾಡ್‌ಬ್ಯಾಂಡ್ ಮೂಲಸೌಕರ್ಯ ವಿಸ್ತರಣೆಯ ಮೇಲೆ ಕೇಂದ್ರೀಕರಿಸಿದ್ದೇವೆ. ಜತೆಗೆ ಜಿಯೋ ನೆಟ್‌ವರ್ಕ್ ಅನ್ನು ತ್ವರಿತವಾಗಿ 4Gಯಿಂದ 5Gಗೆ ಅಪ್‌ಗ್ರೇಡ್ ಮಾಡಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 5ಜಿ ಅಂದ್ರೆ ಅತಿವೇಗದ ಅಂತರ್ಜಾಲ ಸಂಪರ್ಕವಷ್ಟೇ ಅಲ್ಲ: ಬೆಂಜಮಿನ್ ಬ್ರಿಲಾಟ್