ETV Bharat / business

ಚೀನಾಗೆ ಬುದ್ಧಿ ಕಲಿಸಿದ ಭಾರತೀಯರು: ಡ್ರ್ಯಾಗನ್​ ಕಂಪನಿಗಳ ಮೊಬೈಲ್ ಮಾರಾಟ ಕುಸಿತ... ಹಾಗಿದ್ರೆ ನಂ.1 ಯಾರು? - ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಸ್ಮಾರ್ಟ್​​ಫೋನ್​

ವರ್ಷದಿಂದ ವರ್ಷದ (ವೈಒವೈ) ಶೇ 32ರಷ್ಟು ಬೆಳವಣಿಗೆಯೊಂದಿಗೆ ಎರಡು ವರ್ಷಗಳ ನಂತರ ಸ್ಯಾಮ್​ಸಂಗ್ ಭಾರತೀಯ ಸ್ಮಾರ್ಟ್​​ಫೋನ್​ ಮಾರುಕಟ್ಟೆಯಲ್ಲಿ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮಿದೆ. ಕೋವಿಡ್​ ಪರಿಸ್ಥಿತಿಯಿಂದ ಸ್ಯಾಮ್‌ಸಂಗ್ ಅನೇಕ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಿ ಮತ್ತೆ ಪ್ರಥಮ ಸ್ಥಾನಕ್ಕೆ ಏರಿದೆ. ಪೂರೈಕೆ ಸರಪಳಿ, ಹೊಸ ಉತ್ಪನ್ನಗಳ ಮಾರಾಟ, ನಾನಾ ಬೆಲೆಯ ಆಯ್ಕೆ, ನಿರಂತರ ಆನ್‌ಲೈನ್ ಪ್ರಚಾರ ತಂತ್ರಗಳ ಮೊರೆ ಹೋಗಿದೆ.

Smartphone
ಸ್ಮಾರ್ಟ್​​ಫೋನ್
author img

By

Published : Dec 17, 2020, 7:21 PM IST

ನವದೆಹಲಿ: ಸ್ಮಾರ್ಟ್​​ಫೋನ್​ಗಳು ಮೊಬೈಲ್ ಈಗ ನಮ್ಮ ಜೀವನದ ಅವಶ್ಯಕ ವಸ್ತುಗಳಾಗಿ ಮಾರ್ಪಟ್ಟಿವೆ. ಹಲವು ಕಂಪನಿಗಳ ದಿನಕ್ಕೊಂದು ಮಾಡೆಲ್​ಗಳು ಮಾರುಕಟ್ಟೆಗೆ ಬರುತ್ತಿದ್ದು, ದೇಶಿ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ವರ್ಷದಿಂದ ವರ್ಷದ (ವೈಒವೈ) ಶೇ 32ರಷ್ಟು ಬೆಳವಣಿಗೆಯೊಂದಿಗೆ ಎರಡು ವರ್ಷಗಳ ನಂತರ ಸ್ಯಾಮ್​ಸಂಗ್ ಭಾರತೀಯ ಸ್ಮಾರ್ಟ್​​ಫೋನ್​ ಮಾರುಕಟ್ಟೆಯಲ್ಲಿ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮಿದೆ. ಕೋವಿಡ್​ ಪರಿಸ್ಥಿತಿಯಿಂದ ಸ್ಯಾಮ್‌ಸಂಗ್ ಅನೇಕ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಿ ಮತ್ತೆ ಪ್ರಥಮ ಸ್ಥಾನಕ್ಕೆ ಏರಿದೆ. ಪೂರೈಕೆ ಸರಪಳಿ, ಹೊಸ ಉತ್ಪನ್ನಗಳ ಮಾರಾಟ, ನಾನಾ ಬೆಲೆಯ ಆಯ್ಕೆ, ನಿರಂತರ ಆನ್‌ಲೈನ್ ಪ್ರಚಾರ ತಂತ್ರಗಳ ಮೊರೆ ಹೋಗಿದೆ.

Top Smartphone Brands in India
ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಸ್ಮಾರ್ಟ್​​ಫೋನ್​

2018ರ 3ನೇ ತ್ರೈಮಾಸಿಕದ ನಂತರ ಶಿಯೋಮಿ ವರ್ಷದಿಂದ ವರ್ಷದ ಮಾರಾಟದಲ್ಲಿ ಶೇ 4ರಷ್ಟು ಕುಸಿತದೊಂದಿಗೆ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ತಳಲ್ಪಟ್ಟಿದೆ. ಕೋವಿಡ್​-19 ಕಾರಣದಿಂದಾಗಿ ಸರಬರಾಜು ಮತ್ತು ಬೇಡಿಕೆಯ ನಡುವಿನ ಅಂತರವೇ ಬಹುಶಃ ಅವನತಿಗೆ ಕಾರಣವಾಗಿದೆ.

ಆರ್ಥಿಕ ಚೇತರಿಕೆ: ಖಜಾನೆಗೆ ಬಂತು 1.09 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ

ಲಡಾಖ್​ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ಭವಿಸಿದ ಗಡಿ ಬಿಕ್ಕಟ್ಟಿನ ಬಳಿಕ ಚೀನೀ ಉತ್ಪನ್ನಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದು ಕೂಡ ಮಾರುಕಟ್ಟೆ ಪಾಲು ಕುಸಿತಕ್ಕೆ ಕಾರಣ ಆಗಿರಬಹುದು. ಶಿಯೋಮಿಯ ರೆಡ್‌ಮಿ 9 ಮತ್ತು ನೋಟ್ 9 ಸರಣಿ ಮತ್ತು ಇತರ ಮಾರ್ಕೆಟಿಂಗ್ ತಂತ್ರಗಳಿಂದ ಬಹುಶಃ ಮುಂದಿನ ತ್ರೈಮಾಸಿಕದಲ್ಲಿ ಪ್ರಥಮ ಸ್ಥಾನಕ್ಕೆ ಬರಬಹುದು.

ವಿವೋ ವೈಒವೈ ಬೆಳವಣಿಗೆಯು ಶೇ 4ರಷ್ಟು ಕಾಪಾಡಿಕೊಂಡಿದೆ. 3ನೇ ತ್ರೈಮಾಸಿಕದಲ್ಲಿ ಮೂರನೇ ಸ್ಥಾನ ಉಳಿಸಿಕೊಂಡಿದೆ. 2020ರ 3ನೇ ತ್ರೈಮಾಸಿಕದಲ್ಲಿ ಎಕ್ಸ್ 50 ಸರಣಿಯೊಂದಿಗೆ ಪ್ರೀಮಿಯಂ ಮಾರುಕಟ್ಟೆ ಪ್ರವೇಶಿಸಿತು. 2020ರ 3ನೇ ತ್ರೈಮಾಸಿಕದಲ್ಲಿ ರಿಯಲ್​ಮೀ ಶೇ 4ರಷ್ಟು ವರ್ಷದಿಂದ ವರ್ಷಕ್ಕೆ ಬೆಳೆವಣಿಗೆ ದಾಖಲಿಸಿದೆ. ಉತ್ಪಾದನೆ ಜತೆಗೆ ಪೂರೈಕೆ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯಿತು.

ಇದೇ ಅವಧಿಯಲ್ಲಿ ಓಪ್ಪೋ ಶೇ 30ರಷ್ಟುವೈಓವೈ ಬೆಳವಣಿಗೆ ಕಂಡಿದೆ. ಅದರ ಬಜೆಟ್ ವಿಭಾಗದ ಸಾಧನಗಳಾದ ಎ 12 ಮತ್ತು ಎ 11 ಮತ್ತು ಆಫ್‌ಲೈನ್ ವಿಭಾಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎ 52, ಎ 53 2020 ಮತ್ತು ಎಫ್ 15ಗಳ ಉತ್ತಮ ಮಾರಾಟ ಕಾಣುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.