ಬೀಜಿಂಗ್: ಅಮೆರಿಕದೊಂದಿಗೆ ವಾಣಿಜ್ಯ ಕದನಕ್ಕೆ ಇಳಿದ ಚೀನಾ, ಈಗ ಅದಕ್ಕೆ ತಕ್ಕುದಾದ ಬೆಲೆ ತೆರುತ್ತಿದೆ.
ನಾಲ್ಕು ದಿನಗಳ ಹಿಂದೆಯಷ್ಟು ಚೀನಾದ 300 ಬಿಲಿಯನ್ ಸರುಕಗಳ ಮೇಲೆ ಶೇ 10ರಷ್ಟು ಸುಂಕ ಏರಿಸುವುದಾಗಿ ಘೋಷಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಕರೆನ್ಸಿ ಯುವಾನ್ ಡಾಲರ್ ಎದುರು ಹನ್ನೊಂದು ವರ್ಷಗಳ ಹಿಂದಿನ ಕನಿಷ್ಠ ಮೊತ್ತಕ್ಕೆ ಕುಸಿದಿದೆ. 2008ರ ಬಳಿಕ ಚೀನಾದ ಯುವಾನ್ ಮೌಲ್ಯ ಶೇ 7ರಷ್ಟು ಕುಸಿತ ದಾಖಲಿಸಿದೆ.
ಏಕಪಕ್ಷೀಯತೆ ಮತ್ತು ವ್ಯಾಪಾರ ಸಂರಕ್ಷಣಾ ಕ್ರಮಗಳು ಹಾಗೂ ಚೀನಾದ ಮೇಲೆ ಹೇರಲಾದ ಸುಂಕ ಹೆಚ್ಚಳದಿಂದ ಯುವಾನ್ ಕುಸಿತ ಉಂಟಾಗಿದೆ ಎಂದು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಒಪ್ಪಿಕೊಂಡಿದೆ.
2015 ರಲ್ಲಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ತನ್ನ ಕುಸಿತದ ಬೆಳವಣಿಗೆಯ ದರವನ್ನು ಎದುರಿಸಲು ತನ್ನ ಕರೆನ್ಸಿಯ ಅಪಮೌಲ್ಯಗೊಳಿಸಿತು. ನಾಲ್ಕು ವರ್ಷಗಳ ಬಳಿಕ ಯುವಾನ್ ಡಾಲರ್ ವಿರುದ್ಧ ಕಡಿಮೆ ದರಕ್ಕೆ ಕುಸಿದಿದೆ. ಮತ್ತೆ ಕರೆನ್ಸಿ ಅಪಮೌಲ್ಯ ಮರುಕಳಿಸಲಿದೆಯ ಎಂಬುದು ಪ್ರಶ್ನಾರ್ಥಕವಾಗಿದೆ.
ಮಂಗಳವಾರದ ಮಧ್ಯಾಹ್ನದ ವಹಿವಾಟಿನಲ್ಲಿ ಡಾಲರ್ ಎದುರು ಯುವಾನ್ 7.00ಯಲ್ಲಿ ನಿರತವಾಗಿತ್ತು. ಮಧ್ಯಾಹ್ನದ ಬಳಿಕ ನಾಟಕೀಯವಾಗಿ ಪ್ರತಿ ಯುವಾನ್ 14.2 ಸೆಂಟ್ಸ್ ಇಳಿಕೆಯಾಗಿದೆ. ಟ್ರಂಪ್ನ ಸುಂಕ ನೀತಿ ಹಾಗೂ ಯುವಾನ್ ಕುಸಿತದ ವಿರುದ್ಧ ಚೀನಾ ಸರ್ಕಾರ ಸದೃಢ ನೀತಿಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.