ನವದೆಹಲಿ: ಕೆಟ್ಟ ಪರಿಸ್ಥಿತಿ ನಮ್ಮ ಹಿಂದೆ ಇದೆ ಮತ್ತು ಆರ್ಥಿಕ ಚೇತರಿಕೆಯ ಬೆಳವಣಿಗೆ ನಿರೀಕ್ಷೆಗಿಂತ ವೇಗವಾಗಿದೆ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಸಿಇಒ ಕೆಕಿ ಮಿಸ್ತ್ರಿ ಹೇಳಿದರು.
ಡಿಸೆಂಬರ್ ತ್ರೈಮಾಸಿಕದ ಬೆಳವಣಿಗೆಯು ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ದಾಖಲಾದ ವಿಸ್ತರಣೆಯನ್ನು ಮೀರಿಸುತ್ತದೆ. ಭಾರತೀಯ ಆರ್ಥಿಕತೆಯು ತನ್ನ ಚೇತರಿಕೆಯನ್ನು ತೋರಿಸಿದೆ ಎಂದರು.
ಸೌಮ್ಯ (ಬೆನಿಗ್ನ್) ಬಡ್ಡಿದರ ದೌಲತ್ತು ಮುಂದುವರಿಯುತ್ತದೆ. ಆರ್ಥಿಕ ಚಟುವಟಿಕೆಗಳು ಹೆಚ್ಚಿನ ವೇಗ ಸಂಗ್ರಹಿಸಿದ ಬಳಿಕ ಮತ್ತು ಹಣದುಬ್ಬರ ಒತ್ತಡ ಹೆಚ್ಚಾದ ನಂತರವೇ ದರಗಳು ಏರಿಕೆ ಆಗುತ್ತವೆ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಉಪಾಧ್ಯಕ್ಷ/ ಸಿಇಒ ಮಿಸ್ತ್ರಿ ಅಖಿಲ ಭಾರತ ನಿರ್ವಹಣಾ ಸಂಘ (ಎಐಎಂಎ) ಆಯೋಜಿಸಿದ ಆನ್‌ಲೈನ್ ಸಂವಾದದಲ್ಲಿ ತಿಳಿಸಿದ್ದಾರೆ.
ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳನ್ನು ಸರ್ಕಾರ ಗುರುತಿಸಬೇಕು. ಅವರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು. ಕೃಷಿ ಬಳಿಕ ಆರ್ಥಿಕತೆಯಲ್ಲಿ ಅತಿದೊಡ್ಡ ಉದ್ಯೋಗದಾತ ವಸತಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರವಾಗಿದೆ. ಈ ವಲಯದ ಶೇ 80ರಷ್ಟು ಉದ್ಯೋಗಿಗಳಿಗೆ ಕನಿಷ್ಠ ಕೌಶಲ್ಯಗಳು ಬೇಕಾಗುತ್ತವೆ ಎಂದು ಹೇಳಿದರು.
ಉತ್ಪಾದನಾ ಕ್ಷೇತ್ರಗಳಿಗೆ ಆದ್ಯತೆಯ ಬೆಂಬಲವನ್ನೂ ಕೋರಿ, ವಸತಿ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿನ ಮರುಪಾವತಿ ಸಮಸ್ಯೆಗಳ ಕುರಿತು ಮಾತನಾಡಿದ ಮಿಸ್ತ್ರಿ, ನಿಷ್ಕ್ರಿಯ ಸಾಲಗಳು ಒಂದೇ ಅಂಕೆಗಳಲ್ಲಿ ಇರಬಹುದೆಂದು ನಿರೀಕ್ಷಿಸಿದ್ದೇನೆ. ಕೋವಿಡ್ -19ರ ಅವಧಿಯಲ್ಲಿನ ಹೆಚ್ಚಿನ ಉದ್ಯೋಗ ನಷ್ಟಗಳು ಕಡಿಮೆ ಆದಾಯದ ಕಾರ್ಮಿಕರಿಗೆ ಮಾತ್ರ ಸೀಮಿತವಾಗಿವೆ. ಹಣ ಸಾಲ ಪಡೆಯುವ ಜನರಿಗೆ ಉದ್ಯೋಗ ನಷ್ಟವು ಆತಂಕಕಾರಿಯಲ್ಲ ಎಂದರು.
ಕೆಟ್ಟದ್ದು ನಮ್ಮ ಹಿಂದೆ ಇದೆ ಮತ್ತು ಚೇತರಿಕೆ ನಿರೀಕ್ಷೆಗಿಂತ ವೇಗವಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಆರ್ಥಿಕತೆಯು ಹೆಚ್ಚಿನ ವಲಯಗಳಿಗೆ ಕೋವಿಡ್ ಪೂರ್ವ ಮಟ್ಟದಲ್ಲಿರುತ್ತದೆ. ಡಿಸೆಂಬರ್ ತ್ರೈಮಾಸಿಕದ ಬೆಳವಣಿಗೆ ಕಳೆದ ಡಿಸೆಂಬರ್ ತ್ರೈಮಾಸಿಕದ ಬೆಳವಣಿಗೆಗಿಂತ ಉತ್ತಮ ಈಗಿರಬಹುದು ಎಂದರು.