ನವದೆಹಲಿ: ಕಳೆದ ವರ್ಷ 20 ಲಕ್ಷ ಕೋಟಿ ರೂ. ಪರಿಹಾರ ಕ್ರಮಗಳನ್ನು ಘೋಷಿಸಿದ್ದ ಕೇಂದ್ರ ಸರ್ಕಾರ ಈ ವರ್ಷ ಅಂತಹ ಯಾವುದೇ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ ಎಂದು ಹೇಳಲಾಗಿತ್ತು.
ಆದರೆ, ಹೀಗೆ ಹೇಳಿ ಒಂದು ತಿಂಗಳ ಬಳಿಕ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕತೆಯನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಪರಿಹಾರದ ಘೋಷಣೆಗಳನ್ನ ಮಾಡಿದ್ದಾರೆ.
ಈ ಬಾರಿ ಅವರು ಬರೋಬ್ಬರಿ 6.29 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಕೋವಿಡ್ ವೈರಸ್ನ ಎರಡನೇ ಅಲೆಯಿಂದ ಸುಮಾರು 3 ಕೋಟಿಗಿಂತಲೂ ಹೆಚ್ಚು ಜನರು ಪಾಸಿಟಿವ್ಗೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿ ಸುಮಾರು 4ಲಕ್ಷ ಜನ ಸಾವನ್ನಪ್ಪಿದ್ದರು. ಮೊದಲ ಅಲೆಯಲ್ಲಿ ದೇಶದ ಆರ್ಥಕತೆ ಪಾತಾಳಕ್ಕೆ ಕುಸಿದಿತ್ತು. ಸುಮಾರು, ಶೇ-7.3ಕ್ಕೆ ಜಿಡಿಪಿ ಕುಸಿವಾಗಿತ್ತು.
ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್, 6.29 ಲಕ್ಷ ಕೋಟಿ ರೂ ಪರಿಹಾರ ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ನಿಜವಾದ ಹಣಕಾಸಿನ ನೆರವು 80,000 ಕೋಟಿ ರೂ.ಗಳಿಂದ 1,20,000 ಕೋಟಿ ರೂ.ವರೆಗೆ ಅವಶ್ಯಕತೆಯಿದೆ.
ಪ್ಯಾಕೇಜ್ ಪೂರೈಕೆ, ರಫ್ತು ಹೆಚ್ಚಿಸಲು, ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು, ಪ್ರಯಾಣ, ಪ್ರವಾಸೋದ್ಯಮ ಕ್ಷೇತ್ರವನ್ನು ಬೆಂಬಲಿಸಲು, ಸಾಲ-ವಿಮಾ ಖಾತರಿಗಳನ್ನು ಒದಗಿಸುವುದಕ್ಕೆ ಹಣದ ಹರಿವಿನ ಅವಶ್ಯತೆ ಇದೆ. ಸೋಮವಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಸೀತಾರಾಮನ್ ಐದು ತಿಂಗಳ ಸಬ್ಸಿಡಿ ಆಹಾರ ಧಾನ್ಯ ಯೋಜನೆಯ ವಿಸ್ತರಣೆಯನ್ನು ಸೇರಿಸಿದ್ದಾರೆ.
ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಇಸಿಎಲ್‌ಜಿಎಸ್ ಶೇ.50ರಷ್ಟು ಅಂದರೆ 3 ಲಕ್ಷ ಕೋಟಿ ರೂ.ಗಳಿಂದ 4.5 ಲಕ್ಷ ಕೋಟಿ ರೂ.ಗೆ ವಿಸ್ತರಿಸಿದೆ. ಕಂಪನಿಗಳ ಕಾರ್ಯನಿರತ ಬಂಡವಾಳ ಸಾಲದ ಅಗತ್ಯವನ್ನು ಪೂರೈಸಲು ಕಳೆದ ವರ್ಷ ಘೋಷಿಸಲಾಗಿದ್ದ 3 ಲಕ್ಷ ಕೋಟಿ ರೂ.ಗಳ ಇಸಿಎಲ್‌ಜಿಎಸ್ ಅನ್ನು ಸುಮಾರು 2.73 ಲಕ್ಷ ಕೋಟಿ ರೂ.ಗಳ ಸಾಲಕ್ಕೆ ಮಂಜೂರು ಮಾಡಲಾಗಿದೆ.
ಸುಮಾರು 2.1 ಲಕ್ಷ ಕೋಟಿ ರೂ.ಗಳ ವಿತರಣೆಯೊಂದಿಗೆ ಪೂರ್ಣವಾಗಿ ಬಳಸಿಕೊಳ್ಳಲಾಗಿದೆ ಎಂದು ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿ ಆಗಿರುವ ಡೆಬಾಶಿಶ್ ಪಾಂಡೆ ಮಾಹಿತಿ ನೀಡಿದರು.
"ನೀತಿ ಪ್ರಕಟಣೆಗಳು ಆರ್ಥಿಕ ಬೆಳವಣಿಗೆ, ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಂಡು ಜೀವನೋಪಾಯದ ಪರಿಣಾಮಗಳನ್ನು ಒಳಗೊಂಡಿವೆ. ಕೆಲವು ಯೋಜನೆಗಳು ಹೊಸದಾಗಿದ್ದರೆ ಇತರವು ಹಿಂದಿನ ಕ್ರಮಗಳ ವಿಸ್ತರಣೆಗಳಾಗಿವೆ" ಎಂದು ಯೆಸ್ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಇಂದ್ರಾನೈಲ್ ಪಾನ್ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಸುಲಭ ಸಾಲ : 50,000 ಕೋಟಿ ರೂ.ಗಳ ಸಾಲ ಖಾತರಿ ಖಂಡಿತವಾಗಿಯೂ ಮೆಟ್ರೋ - ಅಲ್ಲದ ನಗರಗಳಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಗುರಿ ಹೊಂದಿದ್ದು, ವಿಸ್ತರಣಾ ಯೋಜನೆಗಳಿಗೆ ಶೇ.50ರಷ್ಟು ಸಾಲವನ್ನು ನೀಡಲಾಗುತ್ತದೆ.
ಆದರೆ, ಈ ಯೋಜನೆಯಡಿ ಎಷ್ಟು ಹಾಸಿಗೆಗಳು, ಆಮ್ಲಜನಕ ಬೆಡ್ಗಳು, ವೆಂಟಿಲೇಟರ್‌ಗಳು ಅಥವಾ ಆಮ್ಲಜನಕ ಸ್ಥಾವರಗಳನ್ನು ಸೇರಿಸಲಾಗುವುದು ಎಂಬುದರ ಕುರಿತು ಸರ್ಕಾರವು ಯಾವುದೇ ಪ್ರಮಾಣಿತ ಗುರಿಗಳನ್ನು ನಿಗದಿಪಡಿಸಿಲ್ಲ.
ಇಂದ್ರಾನಿಲ್ ಪ್ಯಾನ್, ರಾಧಿಕಾ ಪಿಪ್ಲಾನಿ ಮತ್ತು ಸಂಜನಾ ಷಾ ಬರೆದಿರುವ ಸಂಶೋಧನಾ ವರದಿಯಲ್ಲಿ, ಕ್ರೆಡಿಟ್ ಖಾತರಿಗಳು ಘೋಷಿತ ಕ್ರಮಗಳ ಕೇಂದ್ರದಲ್ಲಿಯೇ ಉಳಿದಿವೆ. ಆದರೆ, ಅವು ಯಾವುದೇ ನೈಜ ಹಣಕಾಸಿನ ವಿನಿಯೋಗಕ್ಕೆ ಸಮನಾಗಿಲ್ಲ ಎಂದು ಲೇಖಕರು ಹೇಳಿದ್ದಾರೆ.
6.29 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ : ತನ್ನ ವರದಿಯಲ್ಲಿ, ಯೆಸ್ ಬ್ಯಾಂಕ್ ಅರ್ಥಶಾಸ್ತ್ರಜ್ಞರು ಈ ಕ್ರಮಗಳ ಆರ್ಥಿಕ ಪರಿಣಾಮಗಳನ್ನು 6.29 ಲಕ್ಷ ಕೋಟಿ ರೂ.ಗಳಂತೆ ಪರಿಗಣಿಸಿದರೂ ನಿಜವಾದ ಹಣಕಾಸಿನ ಹೊರೆ ತೀರಾ ಕಡಿಮೆ ಇರುತ್ತದೆ ಎಂದು ಹೇಳಿದರು. "ಕೆಲವು ಯೋಜನೆಗಳು ಹಲವಾರು ವರ್ಷಗಳಿಂದ ವಿಸ್ತರಿಸಲ್ಪಟ್ಟಿದೆ. ಒಟ್ಟಾರೆಯಾಗಿ, ಇಂದಿನ ಪ್ರಕಟಣೆಗಳಿಂದ 78,000 ಕೋಟಿ ರೂ. ಅಥವಾ ನಾಮಮಾತ್ರ ಜಿಡಿಪಿಯ ಶೇ. 0.35ರಷ್ಟು ನೇರ ಹಣಕಾಸಿನ ವಿನಿಯೋಗವನ್ನು ನಾವು ಅಂದಾಜು ಮಾಡುತ್ತೇವೆ ”ಎಂದು ಅವರು ಹೇಳಿದರು.