ETV Bharat / business

ಬೈಕ್​​, ಕಾರು ಖರೀದಿದಾರರಿಗೆ ಶೀಘ್ರವೇ ಸಿಗಲಿದೆ ಸಿಹಿ ಸುದ್ದಿ: ಜಾವಡೇಕರ್ ನೀಡಿದ ಅಭಯ ಏನು ಗೊತ್ತೇ?

ಕೊರೊನಾ ಸಾಂಕ್ರಾಮಿಕ ರೋಗವು ಭಾರತದ ಆಟೋಮೊಬೈಲ್ ಬೇಡಿಯನ್ನು ಹದಗೆಡಿಸಿದೆ. ಈಗಾಗಲೇ ಅದು ಕಳೆದ ವರ್ಷಕ್ಕಿಂತಲೂ ನಿಧಾನಗತಿಯಲ್ಲಿ ಸಾಗುತ್ತಿದೆ. ತೆರಿಗೆ ಕಡಿತದ ರೂಪದಲ್ಲಿ ಬೇಡಿಕೆ ವೃದ್ಧಿಸಲು ಉದ್ಯಮಿಗಳು ಸರ್ಕಾರದ ಬೆಂಬಲವನ್ನು ಕೋರಿದ್ದಾರೆ. ಒಂದು ವೇಳೆ ಜಿಎಸ್​ಟಿ ಸ್ಲ್ಯಾಬ್ ದರ ಇಳಿಕೆಯಾದರೇ ಖರೀದಿದಾರರಿಗೆ ವಾಹನಗಳ ಮೇಲಿನೆ ತೆರಿಗೆ ಹೊರೆ ತಗ್ಗಲಿದೆ. ಇದರಿಂದಲಾದರೂ ಬೇಡಿಕೆ ಚೇತರಿಸಿಕೊಳ್ಳಬಹುದು ಎಂಬುದು ಉದ್ಯಮಿಗಳ ವಾದ.

Javadekar
ಜಾವಡೇಕರ್
author img

By

Published : Sep 4, 2020, 2:43 PM IST

Updated : Sep 4, 2020, 3:49 PM IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತಗೊಳಿಸುವ ಉದ್ಯಮದ ಬೇಡಿಕೆಯನ್ನು ಹಣಕಾಸು ಸಚಿವರು ಹಾಗೂ ಪ್ರಧಾನಿಗಳ ಜತೆ ಚರ್ಚಿಸಿ ಈಡೇರಿಸುವುದಾಗಿ ಕೇಂದ್ರ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾವಡೇಕರ್ ವಾಹನ ಉದ್ಯಮಕ್ಕೆ ಭರವಸೆ ನೀಡಿದರು.

ಭಾರತೀಯ ವಾಹನಗಳ ತಯಾರಿಕ ಸಂಘಟನೆ ಆಯೋಜಿಸಿದ್ದ (ಸಿಯಾಮ್) ವರ್ಚ್ಯುವಲ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಉದ್ಯಮ ಬೇಡಿಕೆ ವೃದ್ಧಿಸಲು ಕೆಲವು ರಿಯಾಯಿತಿಗಳನ್ನು ಪಡೆಯಲಿದೆ. ವಿಶೇಷವಾಗಿ ಹಬ್ಬದ ಬೇಡಿಕೆಗಳಿಗೆ ಸಂಬಂಧಿಸಿದ್ದು ಆಗಿರಲಿದೆ ಎಂದು ತಿಳಿಸಿದರು.

ಜಿಎಸ್​ಟಿ ಕಡಿತದ ಬಗ್ಗೆ ಯಾವುದೇ ನಿರ್ಧಾರವನ್ನು ಜಿಎಸ್​​ಟಿ ಮಂಡಳಿಯು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಗಣನೆಗೆ ತೆಗೆದುಕೊಂಡು ತೀರ್ಮಾನಿಸುತ್ತದೆ. ಈಗಾಗಲೇ ಆದಾಯವು ತುಂಬಾ ಕಡಿಮೆ ಆಗಿರುವುದರಿಂದ ದರ ಕಡಿತದಂತಹ ನಿರ್ಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ನೀವು ಶೀಘ್ರದಲ್ಲೇ ಕೆಲ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದರು.

ಕೊರೊನಾ ಸಾಂಕ್ರಾಮಿಕ ರೋಗವು ಭಾರತದ ಆಟೋಮೊಬೈಲ್ ಬೇಡಿಯನ್ನು ಹದಗೆಡಿಸಿದೆ. ಈಗಾಗಲೇ ಅದು ಕಳೆದ ವರ್ಷಕ್ಕಿಂತಲೂ ನಿಧಾನಗತಿಯಲ್ಲಿ ಸಾಗುತ್ತಿದೆ. ತೆರಿಗೆ ಕಡಿತದ ರೂಪದಲ್ಲಿ ಬೇಡಿಕೆ ವೃದ್ಧಿಸಲು ಉದ್ಯಮಿಗಳು ಸರ್ಕಾರದ ಬೆಂಬಲವನ್ನು ಕೋರಿದ್ದಾರೆ. ಒಂದು ವೇಳೆ ಜಿಎಸ್​ಟಿ ಸ್ಲ್ಯಾಬ್ ದರ ಇಳಿಕೆಯಾದರೇ ಖರೀದಿದಾರರಿಗೆ ವಾಹನಗಳ ಮೇಲಿನೆ ತೆರಿಗೆ ಹೊರೆ ತಗ್ಗಲಿದೆ. ಇದರಿಂದಲಾದರೂ ಬೇಡಿಕೆ ಚೇತರಿಸಿಕೊಳ್ಳಬಹುದು ಎಂಬುದು ಉದ್ಯಮಿಗಳ ವಾದ.

ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಜಿಎಸ್​​ಟಿ ಮಂಡಳಿ ದ್ವಿಚಕ್ರ ವಾಹನಗಳ ಮೇಲೆ ಜಿಎಸ್​ಟಿ ಕಡಿಮೆ ಮಾಡುವ ಪ್ರಸ್ತಾಪ ಪರಿಶೀಲಿಸಲಿದೆ. ಅದು ಐಷಾರಾಮಿ ಸರಕುಗಳ ಅಡಿಯಲ್ಲಿ ಬರುವುದಿಲ್ಲ ಎಂದಿದ್ದರು.

Last Updated : Sep 4, 2020, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.