ನವದೆಹಲಿ: ಕೇಂದ್ರದ ಇ- ಸಿಗರೇಟ್ ಮೇಲಿನ ನಿಷೇಧ ಘೋಷಣೆ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧದ ಪ್ರತಿಕ್ರಿಯೆಗಳು ನೆಟ್ಟಿಗರಿಂದ ಕೇಳಿಬರುತ್ತಿವೆ.
ಇ- ಸಿಗರೇಟ್ ನಿಷೇಧವನ್ನು ಬಹುತೇಕ ನೆಟ್ಟಿಗರು ಸ್ವಾಗತಿಸಿದ್ದು, ತಂಬಾಕು ನಿಷೇಧ ಏಕಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಹೇವಾರಿ ಮೀಮ್, ಎಮೋಜಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
-
#ecigarettes are banned
— Abhishek Gupta (@abhigupta_ak) September 18, 2019 " class="align-text-top noRightClick twitterSection" data="
Meanwhile tobacco company pic.twitter.com/pP9qRdRiYX
">#ecigarettes are banned
— Abhishek Gupta (@abhigupta_ak) September 18, 2019
Meanwhile tobacco company pic.twitter.com/pP9qRdRiYX#ecigarettes are banned
— Abhishek Gupta (@abhigupta_ak) September 18, 2019
Meanwhile tobacco company pic.twitter.com/pP9qRdRiYX
ಇ-ಸಿಗರೇಟ್ಗಳು ತಂಬಾಕು ಮುಕ್ತ ಮತ್ತು ಕಡಿಮೆ ನಿಕೋಟಿನ್ ಇದೆ. ನಮ್ಮ ದೇಶದ ಅತಿದೊಡ್ಡ ಸಮಸ್ಯೆ ಇರುವುದು ತಂಬಾಕಿನಲ್ಲಿ. ಅದನ್ನು ಏಕೆ ನಿಷೇಧಿಸಿಲ್ಲ ಎಂದು ಪ್ರೀತಿ ಶರ್ಮಾ ಟ್ವೀಟ್ ಮಾಡಿದ್ದಾರೆ.
-
Correction. #ecigarettes are tobacco free and low nicotine. The biggest cause of serious medical problems in our country is tobacco - why don't they ban it?
— Preeti Sharma Menon (@PreetiSMenon) September 19, 2019 " class="align-text-top noRightClick twitterSection" data="
">Correction. #ecigarettes are tobacco free and low nicotine. The biggest cause of serious medical problems in our country is tobacco - why don't they ban it?
— Preeti Sharma Menon (@PreetiSMenon) September 19, 2019Correction. #ecigarettes are tobacco free and low nicotine. The biggest cause of serious medical problems in our country is tobacco - why don't they ban it?
— Preeti Sharma Menon (@PreetiSMenon) September 19, 2019
ಅಭಿಷೇಕ್ ಗುಪ್ತಾ, ತಂಬಾಕು ಕಂಪನಿಗಳು ಸಂತುಷ್ಟವಾಗಿವೆ ಎಂಬಂತೆ ರೂಪಕವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಗುತ್ತಿರುವ ಮೀಮ್ ಪೋಸ್ಟ್ ಮಾಡಿದ್ದಾರೆ.
-
Tobacco cigarette companies after #ecigarettes ban pic.twitter.com/6reYUuioWL
— dead island (@SmilingLadka) September 18, 2019 " class="align-text-top noRightClick twitterSection" data="
">Tobacco cigarette companies after #ecigarettes ban pic.twitter.com/6reYUuioWL
— dead island (@SmilingLadka) September 18, 2019Tobacco cigarette companies after #ecigarettes ban pic.twitter.com/6reYUuioWL
— dead island (@SmilingLadka) September 18, 2019
ಬುಧವಾರ ಸಚಿವ ಸಂಪುಟ ನಡೆಸಿದ ಬಳಿಕ ಸಭೆಯ ನೇತೃತ್ವದ ವಹಿಸಿದ್ದ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ ಸಚಿವಾಲಯದ ಪ್ರಸ್ತಾವನೆಯ ಮೇರೆಗೆ ಇ- ಸಿಗರೇಟ್ ನಿಷೇಧಿಸುವ ಅನುಮೋದನೆ ಪಡೆಯಲಾಗಿದೆ, ಉದ್ದೇಶಿತ ಯೋಜನೆ ಜಾರಿಯಾದ ಬಳಿಕ ಇ- ಸಿಗರೇಟ್ ಬಳಕೆ, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಮೊದಲ ಬಾರಿಯ ನಿಯಮ್ಮ ಉಲ್ಲಂಘನೆಗೆ 1 ಲಕ್ಷ ರೂ. ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಇಲ್ಲವೇ ಎರಡೂ ಅನುಭವಿಸಬೇಕಾಗುತ್ತದೆ. ಮತ್ತೆ ಕೃತ್ಯ ಮರುಕಳಿಸಿದರೆ 5 ಲಕ್ಷ ದಂಡ ಅಥವಾ 3 ವರ್ಷ ಸಜೆ ಇಲ್ಲವೆ ಎರಡೂ ಶಿಕ್ಷಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದ್ದರು.