ETV Bharat / business

ಚೀನಾ, ಪಾಕ್​ ಸೈಬರ್​ ಯುದ್ಧಕ್ಕೆ ಪ್ರಧಾನಿ ರಣತಂತ್ರ: ಮೋದಿಯವರ ಹೊಸ ಅಸ್ತ್ರವೇನು? - ವಾಣಿಜ್ಯ ಸುದ್ದಿ

ಚೀನಾ, ರಷ್ಯಾ ಮತ್ತು ಪಾಕಿಸ್ತಾನದಂತಹ ದೇಶಗಳಿಂದ ಸಂಭವಿಸುತ್ತಿರುವ ದಾಳಿಗಳ ಮಧ್ಯೆ ಭಾರತೀಯರ ಡೇಟಾ ದೇಶದ ಗಡಿಯೊಳಗೆ ಇಡಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಕೇಂದ್ರವು 'ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರ 2020' ಅನ್ನು ರೂಪಿಸಿದೆ.

cybersecurity policy
ಸೈಬರ್​ ಸೆಕ್ಯುರಿಟಿ
author img

By

Published : Aug 15, 2020, 3:42 PM IST

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಸೈಬರ್‌ ಸುರಕ್ಷತಾ ನೀತಿಯನ್ನು ಅನಾವರಣಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುನರುಚ್ಚರಿಸಿದ್ದಾರೆ.

74ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ಜಾಗರೂಕವಾಗಿದೆ, ಎಚ್ಚರಿಕೆಯಿಂದಿದೆ ಮತ್ತು ಸೈಬರ್ ಬೆದರಿಕೆಗಳನ್ನು ಮಟ್ಟಹಾಕುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ನಿರಂತರವಾಗಿ ಇದಕ್ಕೆ ಬೇಕಾದ ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.

ಭಾರತದ ಮೇಲೆ ಆನ್​ಲೈನ್​ ದಾಳಿಗಳನ್ನು ತಡೆಯುವ ಉದ್ದೇಶಿದಿಂದ ರಾಷ್ಟ್ರೀಯ ಸೈಬರ್ ಸೆಕ್ಯುರಿಟಿ ಸ್ಟ್ರಾಟಜಿ 2020ರ ಕರಡು ಸಿದ್ಧವಾಗಿದ್ದು, ಈ ವರ್ಷ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಸೈಬರ್‌ಪೇಸ್‌ನಿಂದ ಬರುವ ಬೆದರಿಕೆಗಳು ಭಾರತೀಯ ಜೀವನದ ಈ ಎಲ್ಲ ಅಂಶಗಳನ್ನು ಅಪಾಯಕ್ಕೆ ದೂಡಬಹುದು. ಈ ಬೆದರಿಕೆಯ ಬಗ್ಗೆ ಸರ್ಕಾರ ಎಚ್ಚರವಾಗಿದ್ದು, ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮೋದಿ ತಿಳಿಸಿದರು.

ಭಾರತೀಯ ಬಳಕೆದಾರರ ವೈಯಕ್ತಿಕ ಡೇಟಾ ರಕ್ಷಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಹಲವು ಚೀನಿ ಮೂಲದ ಅಪ್ಲಿಕೇಷನ್‌ಗಳನ್ನು ನಿಷೇಧಿಸಿತು.

ಚೀನಾ, ರಷ್ಯಾ ಮತ್ತು ಪಾಕಿಸ್ತಾನದಂತಹ ದೇಶಗಳಿಂದ ಸಂಭವಿಸುತ್ತಿರುವ ದಾಳಿಗಳ ಮಧ್ಯೆ ಭಾರತೀಯರ ಡೇಟಾ ದೇಶದ ಗಡಿಯೊಳಗೆ ಇಡಬೇಕೆಂಬ ಬೇಡಿಕೆಯ ಕೇಳಿಬರುತ್ತಿದೆ. ಕೇಂದ್ರವು 'ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರ 2020' ಅನ್ನು ರೂಪಿಸಿದೆ.

ಸೈಬರ್ ಒಳನುಸುಳುವಿಕೆ ಮತ್ತು ದಾಳಿಗಳು ರಾಷ್ಟ್ರೀಯ ಆರ್ಥಿಕತೆ ಮತ್ತು ಸುರಕ್ಷತೆಯ ಮೇಲೆ ಪ್ರಭಾವ ಬೀರುವ ಸೂಕ್ಷ್ಮ ವೈಯಕ್ತಿಕ ವ್ಯವಹಾರಗಳ ದತ್ತಾಂಶ ಮತ್ತು ನಿರ್ಣಾಯಕ ಮಾಹಿತಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿವೆ.

ಕರಡು ಪ್ರಕಾರ ಕ್ಲೌಡ್ ಕಂಪ್ಯೂಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇಂಟರ್​​ನೆಟ್ ಆಫ್ ಥಿಂಗ್ಸ್, 5ಜಿಯಂತಹ ಮುಂದುವರಿದ ತಾಂತ್ರಿಕ ಬೆಳವಣಿಗೆಗಳು ಸೈಬರ್ ಬೆದರಿಕೆಯ ಸವಾಲುಗಳನ್ನು ಒಡ್ಡುತ್ತದೆ. ವಿದೇಶದಲ್ಲಿ ಸಂಗ್ರಹವಾಗಿರುವ ಡೇಟಾ, ಸಾಮಾಜಿಕ ಜಾಲತಾಣಗಳ ಪ್ರವೇಶದ ದುರುಪಯೋಗವಾಗುತ್ತಿದೆ.

ಹೊಸ ಸವಾಲುಗಳಲ್ಲಿ ಡೇಟಾ ಸಂರಕ್ಷಣೆ ಮತ್ತು ಗೌಪ್ಯತೆ, ಸೈಬರ್‌ಪೇಸ್ ವಿಕಸನಕ್ಕೆ ಕಾನೂನು ಜಾರಿ, ವಿದೇಶಗಳಲ್ಲಿ ಸಂಗ್ರಹವಾದ ಡೇಟಾ ಪ್ರವೇಶ, ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆ, ಸೈಬರ್ ಅಪರಾಧ ಮತ್ತು ಸೈಬರ್ ಭಯೋತ್ಪಾದನೆ ಕುರಿತು ಅಂತಾರಾಷ್ಟ್ರೀಯ ಸಹಕಾರ ಎಚ್ಚರಿಸಿದೆ. ಭಾರತದಲ್ಲಿ ಡಿಜಿಟಲೀಕರಣವು ಕೋವಿಡ್​-19 ನಂತರ ನಾಟಕೀಯವಾಗಿ ಏರಿಕೆಯಾಗಲಿದೆ. ಹೀಗಾಗಿ, ನೂತನ ಸೈಬರ್​ ರಕ್ಷಣಾ ನೀತಿ ಅಗತ್ಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.