ನವದೆಹಲಿ: ಆಹಾರ ಮತ್ತು ತರಕಾರಿ ಬೆಲೆಗಳ ಇಳಿಕೆಯಿಂದಾಗಿ ಫೆಬ್ರವರಿ ತಿಂಗಳ ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಹಣದುಬ್ಬರ ಶೇ 2.26ರಷ್ಟಿದೆ ಎಂದು ಸರ್ಕಾರದ ಅಂಕಿ - ಅಂಶಗಳು ತಿಳಿಸಿವೆ.
2020ರ ಜನವರಿ ಮಾಸಿಕದಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ 3.1ರಷ್ಟು ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 2.93ರಷ್ಟು ಇದಿತ್ತು ಎಂಬುದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯದ ದತ್ತಾಂಶಗಳು ಸೂಚಿಸುತ್ತವೆ.
ಡಬ್ಲ್ಯುಪಿಐನ ಆಹಾರ ವಿಭಾಗದ ಹಣದುಬ್ಬರವು ಜನವರಿ ಶೇ 11.51ಕ್ಕೆ ಪ್ರತಿಯಾಗಿ ಫೆಬ್ರವರಿಯಲ್ಲಿ ಶೇ 7.79ಕ್ಕೆ ತಲುಪಿದೆ. ಈರುಳ್ಳಿ ಹಾಗೂ ಆಲೂಗಡ್ಡೆಯು ಜನವರಿ ತಿಂಗಳಲ್ಲಿನ ಕ್ರಮವಾಗಿ ₹ 293.37 ಹಾಗೂ ₹ 87. 84ಕ್ಕೆ ಹೋಲಿಸಿದರೇ ₹ 162.3 ಮತ್ತು ₹ 60.73ಕ್ಕೆ ತಲುಪಿವೆ.
ಫೆಬ್ರವರಿ 2020ರಲ್ಲಿ ಡಬ್ಲ್ಯುಪಿಐ ಹಣದುಬ್ಬರದಲ್ಲಿನ ಗಣನೀಯ ಕುಸಿತವು ನಮ್ಮ ಮುನ್ಸೂಚನೆಗೆ ಅನುಗುಣವಾಗಿದೆ. ಇದು ಮುಖ್ಯವಾಗಿ ಆಹಾರ ಪದಾರ್ಥಗಳ ಇಳಿಕೆಯ ಜೊತೆಗೆ ಕಚ್ಚಾ ತೈಲ ಮತ್ತು ಖನಿಜಗಳ ಬೆಲೆಯಲ್ಲಿನ ಕುಸಿತ ಸಹ ಹಣ್ಣದುಬ್ಬರ ನಿಯಂತ್ರಣಕ್ಕೆ ನೆರವಾಗಿದೆ. ಇದು ಹೀಗೆ ನಡೆಯುತ್ತಿದ್ದರೇ ಮುಂದಿನ ತಿಂಗಳಲ್ಲಿ ತೀವ್ರಗೊಳ್ಳುತ್ತದೆ ಎಂದು ಐಸಿಆರ್ ಐ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅಭಿಪ್ರಾಯಪಟ್ಟರು.