ನ್ಯೂಯಾರ್ಕ್: ಕೊರೊನಾ ವೈರಸ್ನಿಂದಾಗಿ ನಿರುದ್ಯೋಗ ಭತ್ಯೆ ಪಡೆಯ ಬಯಸಿ ದಾಖಲೆ ಪ್ರಾಮಾಣದಲ್ಲಿ ಅಮೆರಿಕನ್ನರು ಅರ್ಜಿ ಸಲ್ಲಿಸುತ್ತಿದ್ದಾರೆ.
ಉದ್ಯೋಗ ಕಡಿತದ ಪರಿಹಾರ ಕೋರಿ ನಿರುದ್ಯೋಗ ಭತ್ಯೆಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 3 ಕೋಟಿ ದಾಟಿದೆ. 1930ರ ಮಹಾ ಆರ್ಥಿಕ ಕುಸಿತದ ಬಳಿಕ ಅತಿದೊಡ್ಡ ಹೊಡೆತವಾಗಿದೆ. ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಾಗೂ ಬಂದಿರುವ ಅರ್ಜಿಗಳ ವಿಲೇವಾರಿ ಮಾಡಲು ರಾಜಕೀಯ ನಾಯಕರ ಮೇಲೆ ತೀವ್ರ ಒತ್ತಡ ಬಿದ್ದಿದೆ.
ಗುರುವಾರ ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳು ಪ್ರಕಾರ, ಕಳೆದ ವಾರ 3.8 ಕೋಟಿ ನಿರುದ್ಯೋಗಿಗಳು ಉದ್ಯೋಗ ಕಡಿತ ಪ್ರಯೋಜನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆರು ವಾರಗಳಲ್ಲಿ 3.3 ಕೋಟಿಗೆ ಏರಿಕೆಯಾಗಿದೆ. ಶಟ್ಡೌನ್ನಿಂದಾಗಿ ದೇಶದ ಬಹುತೇಕ ಕಾರ್ಖಾನೆ ಹಾಗೂ ಕೈಗಾರಿಕೆಗಳು ಮುಚ್ಚಿವೆ.
ಯುರೋ ಕರೆನ್ಸಿ ಬಳಸುವ 19 ರಾಷ್ಟ್ರಗಳು ಮೊದಲ ತ್ರೈಮಾಸಿಕದಲ್ಲಿ ಯುರೋಪಿಯನ್ ಆರ್ಥಿಕತೆಯು ಶೇ 3.8ರಷ್ಟಿದೆ. ಲಾಕ್ಡೌನ್ನಿಂದಾಗಿ ನಗರಗಳು ಭೂತದ ಪಟ್ಟಣಗಳಾಗಿ ಮಾರ್ಪಟ್ಟವು. ರಾಷ್ಟ್ರಗಳನ್ನು ಹಿಂಜರಿತಕ್ಕೆ ನೂಕಿತು. 1995ರಲ್ಲಿ ಯೂರೊ ಆರಂಭವಾದಾಗಿನಿಂದ ಈ ಕುಸಿತ ಅತಿ ದೊಡ್ಡದಾಗಿದೆ.
ಫ್ರಾನ್ಸ್ ಆರ್ಥಿಕತೆ ಶೇ 5.8ರಷ್ಟಿದ್ದು. ಇದು 1949 ರಿಂದ ಈಚೆಗೆ ಅತಿ ದೊಡ್ಡ ತ್ರೈಮಾಸಿಕ ಕುಸಿತವಾಗಿದೆ. ಸ್ಪೇನ್ನಲ್ಲಿ ಇಳಿಕೆ ಶೇ 5.2ರಷ್ಟು, ಜರ್ಮನಿಯ ಆರ್ಥಿಕತೆ ಈ ವರ್ಷ ಶೇ 6.3ರಷ್ಟು ಕುಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.