ETV Bharat / business

ಜಗತ್ತಿಗೆ ಎಚ್ಚರಿಕೆಯ ಅಲಾರಾಂ​... ಪ್ರವಾಹಕ್ಕಿಂತ ಮೊದಲು ಈ ಮಹಾಮಾರಿ 2021ಕ್ಕೆ ಸಂಭವಿಸಲಿದೆಯಂತೆ! - American Presiident Donald Trump

ಕೆಲವು ಆರ್ಥಿಕ ಚಿಂತಕರು ಅಧ್ಯಕ್ಷ ಟ್ರಂಪ್ ಅವರ ನೀತಿಗಳನ್ನು ಖಂಡಿಸಿ ಕಳವಳ ವ್ಯಕ್ತಪಡಿಸಿದ್ದಾರೆ. 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಿಷ್ಠ ಆರ್ಥಿಕತೆ ಪ್ರವರ್ಧಮಾನಕ್ಕೆ ಬರಲಿದೆ. ಗ್ರಾಹಕ ವಲಯದ ಉತ್ಪನ್ನಗಳ ಮಾರಾಟ ಜುಲೈಗೆ ಶೇ 6ಕ್ಕೆ ಇಳಿಕೆ ಆಗಿದೆ. ನಿಧಾನಗತಿಯ ಆರ್ಥಿಕತೆಯ ಬಗ್ಗೆ ಎಚ್ಚೆತುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಳೆದ ಸೋಮವಾರ ನಡೆದ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವಂತೆ ಫೆಡರಲ್​ ರಿಸರ್ವ್​ ತಜ್ಞರಿಗೆ ಸೂಚಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 22, 2019, 6:13 PM IST

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಆರ್ಥಿಕ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಶೇ 74ರಷ್ಟು ಆರ್ಥಿಕ ತಜ್ಞರು, 2021ರ ಅಂತ್ಯದ ವೇಳೆಗೆ ಅಮೆರಿಕದಲ್ಲಿ ಆರ್ಥಿಕ ಕುಸಿತ ಸಂಭವಿಸಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಕೆಲವು ಆರ್ಥಿಕ ಚಿಂತಕರು ಅಧ್ಯಕ್ಷ ಟ್ರಂಪ್ ಅವರ ನೀತಿಗಳನ್ನು ಖಂಡಿಸಿ ಕಳವಳ ವ್ಯಕ್ತಪಡಿಸಿದ್ದಾರೆ. 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಿಷ್ಠ ಆರ್ಥಿಕತೆ ಪ್ರವರ್ಧಮಾನಕ್ಕೆ ಬರಲಿದೆ. ಗ್ರಾಹಕ ವಲಯದ ಉತ್ಪನ್ನಗಳ ಮಾರಾಟ ಜುಲೈಗೆ ಶೇ 6ಕ್ಕೆ ಇಳಿಕೆ ಆಗಿದೆ. ನಿಧಾನಗತಿಯ ಆರ್ಥಿಕತೆಯ ಬಗ್ಗೆ ಎಚ್ಚೆತುಕೊಂಡ ಡೊನಾಲ್ಡ್​ ಟ್ರಂಪ್​ ಕಳೆದ ಸೋಮವಾರ ನಡೆದ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವಂತೆ ಫೆಡರಲ್​ ರಿಸರ್ವ್​ ತಜ್ಞರಿಗೆ ಸೂಚಿಸಿದ್ದಾರೆ.

ದೇಶೀಯ ಆರ್ಥಿಕ ಚಿಂತಕರ ಚಾವಡಿಯ ತಂಡ, 'ಮುಂದಿನ ಎರಡು ವರ್ಷದಲ್ಲಿ ಅಂದರೆ, 2021ರ ಅಂತ್ಯದ ವೇಳೆಗೆ ಮತ್ತೊಂದು ಮಹಾನ್ ಆರ್ಥಿಕ ಕುಸಿತ ಸಂಭವಿಸಲಿದೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಆರ್ಥಿಕ ತಜ್ಞರು ಒಳಗೊಂಡ ನ್ಯಾಷನಲ್ ಅಸೋಸಿಯೇಷನ್ ಫಾರ್ ಬಿಸಿನೆಸ್ ಎಕನಾಮಿಕ್ಸ್ ಸಮೀಕ್ಷೆಇತ್ತೀಚೆಗೆ ಬಿಡುಗಡೆ ಆಗಿದ್ದು, ಈ ವರದಿಯಲ್ಲಿ ಆರ್ಥಿಕತೆಯ ಬಗ್ಗೆ ಟ್ರಂಪ್ ಅವರು ಹೊಂದಿರುವ ಆಶಾವಾದಿ ದೃಷ್ಟಿಕೋನದ ಕುರಿತು ಹೆಚ್ಚಾಗಿ ಹಂಚಿಕೊಳ್ಳಲಿಲ್ಲ. ಆದರೂ ಫೆಬ್ರವರಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಅವರು ಊಹಿಸಿದಂತೆ ಹಿಂಜರಿತವು ಸಾಮಾನ್ಯವಾಗಿ ಕಂಡುಬರಲಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಒಟ್ಟು ಅರ್ಥಶಾಸ್ತ್ರಜ್ಞರ ಪೈಕಿ ಶೇ 34 ಪ್ರತಿದಷ್ಟು ತಜ್ಞರು. 'ನಿಧಾನಗತಿಯ ಆರ್ಥಿಕತೆಯು 2021ರಲ್ಲಿ ಆರ್ಥಿಕತ ಹಿಂಜರಿತಕ್ಕೆ ಕಾರಣ ಆಗಬಹುದು' ಎಂದಿದ್ದಾರೆ. ಫೆಬ್ರವರಿಯ ಸಮೀಕ್ಷೆಯಲ್ಲಿ ಶೇ 25ರಿಂದ ಹೆಚ್ಚಳವಾಗಿದೆ. ಮತದಾನ ಮಾಡಿದವರಲ್ಲಿ ಹೆಚ್ಚಿನವರು ಶೇ 38ರಷ್ಟು ಜನರು ಮುಂದಿನ ವರ್ಷ ಆರ್ಥಿಕ ಹಿಂಜರಿತ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ, ಫೆಬ್ರವರಿಯಲ್ಲಿ ಶೇ 42ರಷ್ಟು ತಜ್ಞರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮತ್ತೊಂದು ಶೇ 2ರಷ್ಟು ತಜ್ಞರು ಈ ವರ್ಷದಿಂದ ಆರ್ಥಿಕ ಕುಸಿತ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಫೆಬ್ರವರಿಯ ಸಮೀಕ್ಷೆಯಲ್ಲಿ ಶೇ 77ರಷ್ಟು ಅರ್ಥಶಾಸ್ತ್ರಜ್ಞರು ಈ ವರ್ಷ, ಮುಂದಿನ ವರ್ಷ ಅಥವಾ 2021ರಲ್ಲಿ ಆರ್ಥಿಕ ಹಿಂಜರಿತ ಸಂಭವಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. 2020ರಲ್ಲಿ ಅಮೆರಿಕ ಅಧ್ಯಕ್ಷೀಯ ಆಯ್ಕೆಯ ಚುನಾವಣೆ ನಡೆಯಲಿದ್ದು, ಮಂದಗತಿಯ ಆರ್ಥಿಕತೆ ಮುನ್ನೆಲೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಪ್ರತಿ ಬಾರಿ ಆರ್ಥಿಕ ಕುಸಿತ ಉಂಟಾದಾಗ ಬಂಡವಾಳಶಾಹಿ ದೇಶಗಳಾದ ಯುರೋಪ್​ ಒಕ್ಕೂಟದ ಕೆಲ ರಾಷ್ಟ್ರಗಳು, ಅಮೆರಿಕ, ಜಪಾನ್; ಅವಲಂಭಿ ಆರ್ಥಿಕ ರಾಷ್ಟ್ರಗಳಾದ ಭಾರತ, ಚೀನಾ, ಬ್ರೆಜಿಲ್​, ದಕ್ಷಿಣ ಆಫ್ರಿಕಾ ತಮ್ಮದೆಯಾದ ಸುಲಭದ ಹಣದ ಮೂಲಕ ಆರ್ಥಿಕ ಕುಸಿತದಿಂದ ಪಾರಾಗಲು ಯತ್ನಿಸುತ್ತವೆ. ನೋಟುಗಳನ್ನು ಮುದ್ರಿಸಿ ಸಾಲವಾಗಿ ನೀಡುವುದು; ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾಯಿಸುವುದು, ಮೂಲ ಭೂತ ಸೌಕರ್ಯಗಳ ಹಣದ ಹಂಚಿಕೆ ಸೇರಿದಂತೆ ಸುಲಭ ಹಣ ಹರಿವಿನ ವಿಧಾನಗಳಿಗೆ ಮೊರೆಹೋಗುತ್ತವೆ. ಅಮೆರಿಕದಲ್ಲಿ 1930, 1940 ಮತ್ತು 2007-08ರಲ್ಲಿ ಘಟಿಸಿದ್ದ ಮಾಹಾ ಆರ್ಥಿಕ ಕುಸಿತವು ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಭಾದಿಸಿತ್ತು. ಪ್ರಸಕ್ತವಾಗಿ ಕಾಡುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟು ಈ ಹಿಂದಿಗಿಂತ ಭಿನ್ನವಾಗಿದೆ. ರಾಷ್ಟ್ರ- ರಾಷ್ಟ್ರಗಳ ನಡುವಿನ ವಾಣಿಜ್ಯ ಸಮರ ತಾರಕಕ್ಕೆ ಏರಿದೆ. ಮುಂದೆ ನಡೆಯಲಿದೆ ಎಂಬ ಮತ್ತೊಂದು ಆರ್ಥಿಕ ಮುಗ್ಗಟ್ಟು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆರ್ಥಿಕತೆ ಆಪೋಶನ ತೆಗೆದುಕೊಳ್ಳಬಹುದು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.