ETV Bharat / business

ಚೀನಾ- ಅಮೆರಿಕ ಟ್ರೇಡ್​ ವಾರ್​: ಭಾರತಕ್ಕೆ ಹರಿದು ಬಂತು ಕೋಟಿ- ಕೋಟಿ ಡಾಲರ್​ - India's Export

ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆ (ಯುಎನ್​ಸಿಟಿಎಡಿ) ನಡೆಸಿದ ಅಧ್ಯಯನದಲ್ಲಿ ಚೀನಾ- ಅಮೆರಿಕ ನಡುವಿನ ಟ್ರೇಡ್ ವಾರ್, ಈ ರಾಷ್ಟ್ರಗಳ ವಹಿವಾಟಿನ ಮೇಲೆ ಪರಿಣಾಮ ಬೀರಿ ವ್ಯಾಪಾರದಲ್ಲಿ ತೀವ್ರ ಕುಸಿತ ಉಂಟಾಗಿದೆ. ಗ್ರಾಹಕರಿಗೆ ಹೆಚ್ಚಿನ ಬೆಲೆಯ ಸರಕುಗಳು ಲಭ್ಯವಾಗುತ್ತಿದ್ದು, ವ್ಯಾಪಾರದಲ್ಲಿ ತಿರುವು ಕಂಡುಬಂದಿದೆ. ವ್ಯಾಪಾರದಲ್ಲಿ ನೇರವಾಗಿ ಭಾಗಿಯಾಗದ ದೇಶಗಳಿಂದ ಅಮೆರಿಕದ ಆಮದು ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2019ರ ಮೊದಲಾರ್ಧದಲ್ಲಿ ರಾಸಾಯನಿಕಗಳು, ಲೋಹಗಳು ಮತ್ತು ಅದಿರು ರಫ್ತಿನಿಂದ ಭಾರತ ಸುಮಾರು 755 ಮಿಲಿಯನ್ ಡಾಲರ್‌ ಲಾಭ ಗಳಿಸಿದೆ ಎಂದಿದೆ.

ಚೀನಾ- ಅಮೆರಿಕ
author img

By

Published : Nov 6, 2019, 1:39 PM IST

ನವದೆಹಲಿ: ಚೀನಾದೊಂದಿಗಿನ ವಾಷಿಂಗ್ಟನ್‌ನ ಸುಂಕದ ವ್ಯಾಪಾರ ಸಮರವು ಭಾರತಕ್ಕೆ ವರವಾಗಿ ಪರಿಣಮಿಸಿದ್ದು, 2019ರ ಮೊದಲಾರ್ಧದಲ್ಲಿ ರಾಸಾಯನಿಕಗಳು, ಲೋಹಗಳು ಮತ್ತು ಅದಿರಿನ ರಫ್ತಿನಿಂದ ಸುಮಾರು 755 ಮಿಲಿಯನ್ ಡಾಲರ್‌ ಲಾಭ ಗಳಿಸಿದೆ.

ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆ (ಯುಎನ್​ಸಿಟಿಎಡಿ) ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಚೀನಾ- ಅಮೆರಿಕ ನಡುವಿನ ಟ್ರೇಡ್ ವಾರ್, ಈ ರಾಷ್ಟ್ರಗಳ ವಹಿವಾಟಿನ ಮೇಲೆ ಪರಿಣಾಮ ಬೀರಿ ವ್ಯಾಪಾರದಲ್ಲಿ ತೀವ್ರ ಕುಸಿತ ಉಂಟಾಗಿದೆ. ಗ್ರಾಹಕರಿಗೆ ಹೆಚ್ಚಿನ ಬೆಲೆಯ ಸರಕುಗಳು ಲಭ್ಯವಾಗುತ್ತಿದ್ದು, ವ್ಯಾಪಾರದಲ್ಲಿ ತಿರುವು ಕಂಡುಬಂದಿದೆ. ವ್ಯಾಪಾರದಲ್ಲಿ ನೇರವಾಗಿ ಭಾಗಿಯಾಗದ ದೇಶಗಳಿಂದ ಅಮೆರಿಕದ ಆಮದು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಈ ಅಧ್ಯಯನವು 2019ರ ಮೊದಲಾರ್ಧದಲ್ಲಿ ಅಮೆರಿಕ - ಚೀನಾ ಸುಂಕದ ವ್ಯಾಪಾರ ಸಮರದ ದುಷ್ಪರಿಣಾಮವನ್ನು ಸುಮಾರು 21 ಬಿಲಿಯನ್ ಡಾಲರ್​ ಆಗಲಿದೆ ಎಂದು ಅಂದಾಜಿಸಿತ್ತು. ಈಗ ಇದರ ನಿವ್ವಳ ವ್ಯಾಪಾರ ನಷ್ಟದ ಪ್ರಮಾಣವು ಸುಮಾರು 14 ಬಿಲಿಯನ್ ಆಗಿದೆ ಎಂದಿದೆ.

ಈ ವ್ಯಾಪಾರ ತಿರುವು ಪರಿಣಾಮಗಳು ತೈವಾನ್ (ಚೀನಾ ಪ್ರಾಂತ್ಯ), ಮೆಕ್ಸಿಕೊ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಸಾಕಷ್ಟು ಪ್ರಯೋಜನಗಳನ್ನು ತಂದಿದೆ. ಕೊರಿಯಾ, ಕೆನಡಾ ಮತ್ತು ಭಾರತಕ್ಕೆ ಗಣನೀಯವಾದ ಪ್ರಯೋಜನ ಪಡೆದುಕೊಂಡಿವೆ. ಇದು 0.9 ಬಿಲಿಯನ್ ಡಾಲರ್​ನಿಂದ 1.5 ಬಿಲಿಯನ್ ಡಾಲರ್ ವರೆಗೆ ಏರಿಕೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

ಚೀನಾದ ಮೇಲಿನ ಅಮೆರಿಕದ ಸುಂಕ ಏರಿಕೆ ಪರಿಣಾಮವಾಗಿ 2019ರ ಮೊದಲಾರ್ಧದಲ್ಲಿ ಹೆಚ್ಚಿನ ರಾಸಾಯನಿಕಗಳು (243 ಮಿಲಿಯನ್ ಡಾಲರ್​), ಲೋಹಗಳು ಮತ್ತು ಅದಿರು (181 ಮಿಲಿಯನ್ ಡಾಲರ್​), ವಿದ್ಯುತ್ ಯಂತ್ರೋಪಕರಣಗಳನ್ನು (83 ಮಿಲಿಯನ್ ಡಾಲರ್) ಮಾರಾಟ ಮಾಡುವ ಮೂಲಕ ಭಾರತ ಹೆಚ್ಚುವರಿ ರಫ್ತಿನಿಂದ ಸುಮಾರು 755 ಮಿಲಿಯನ್ ಡಾಲರ್ ಗಳಿಸಿದೆ. ವಿವಿಧ ಯಂತ್ರೋಪಕರಣಗಳು (68 ಮಿಲಿಯನ್ ಡಾಲರ್) ಮತ್ತು ಕೃಷಿ ಆಹಾರೋತ್ಪನ್ನಗಳು, ಪೀಠೋಪಕರಣಗಳು, ಕಚೇರಿ ಯಂತ್ರೋಪಕರಣಗಳು, ಜವಳಿ ಮತ್ತು ಉಡುಪು ಹಾಗೂ ಸಾರಿಗೆ ಉಪಕರಣಗಳಂತಹ ರಫ್ತು ಸರಕುಗಳ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಯುಎನ್​ಸಿಟಿಎಡಿ ಹೇಳಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.