ನವದೆಹಲಿ: ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಗರ ಪ್ರದೇಶದ ಶೇ 69ರಷ್ಟು ಜನ ಸಮೀಕ್ಷೆಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಗರ ಪ್ರದೇಶದ ಅರ್ಧದಷ್ಟು ಭಾರತೀಯರು ನಿರುದ್ಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. 69 ಪ್ರತಿಶತದಷ್ಟು ಜನರು ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸಮೀಕ್ಷೆಯೊಂದರಲ್ಲಿ ಒಪ್ಪಿಕೊಂಡಿದ್ದಾರೆ.
ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ, ಅಪರಾಧ ಮತ್ತು ಹಿಂಸೆ, ಬಡತನ ಮತ್ತು ಸಾಮಾಜಿಕ ಅಸಮಾನತೆ ಹಾಗೂ ಹವಾಮಾನ ಬದಲಾವಣೆಯಂತಹ ಸಂಗತಿಗಳ ಕುರಿತು ಭಾರತೀಯರು ಚಿಂತಿಸುವ ಇತರ ವಿಷಯಗಳಾಗಿವೆ ಎಂಬುದು ಸಂಶೋಧನಾ ಸಂಸ್ಥೆ ಇಪ್ಸೋಸ್ ನಡೆಸಿದ 'ವಾಟ್ ವರೀಸ್ ದಿ ವರ್ಲ್ಡ್' ಸಮೀಕ್ಷೆಯಿಂದ ತಿಳಿದುಬಂದಿದೆ.
ಶೇ 69ರಷ್ಟು ನಗರ ಕೇಂದ್ರೀತ ಭಾರತೀಯರು ದೇಶವು ಸರಿಯಾದ ಹಾದಿಯಲ್ಲಿದೆ ಎಂದು ಭಾವಿಸಿದ್ದಾರೆ. ಇದೇ ವೇಳೆ, ಭಾರತದಲ್ಲಿ ನಿರಾಶಾವಾದದ ಜಾಗತಿಕ ಪ್ರವೃತ್ತಿ ಹೆಚ್ಚಿಸಿದ್ದು, ದೇಶವು ತಪ್ಪು ಹಾದಿಯಲ್ಲಿದೆ ಎಂದು 61 ಪ್ರತಿಶತ ಜಾಗತಿಕ ನಾಗರಿಕರ ಅಭಿಪ್ರಾಯವಾಗಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ನಗರ ಭಾರತೀಯರಲ್ಲಿ ಕನಿಷ್ಠ 46 ಪ್ರತಿಶತದಷ್ಟು ಜನರು ನಿರುದ್ಯೋಗದ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಸಿದ್ದ ಸಮೀಕ್ಷೆಗಿಂತ ಶೇ 3ರಷ್ಟು ಹೆಚ್ಚಳವಾಗಿದೆ. ಭಾರತೀಯರು ಚಿಂತೆ ಮಾಡುವ ಇತರ ಕೆಲವು ವಿಷಯಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ, ಅಪರಾಧ ಮತ್ತು ಹಿಂಸೆ, ಬಡತನ ಮತ್ತು ಸಾಮಾಜಿಕ ಅಸಮಾನತೆ ಮತ್ತು ಹವಾಮಾನ ಬದಲಾವಣೆಗಳು ಸಹ ಸೇರಿವೆ.
ಮತ್ತೊಂದೆಡೆ ಬಡತನ ಮತ್ತು ಸಾಮಾಜಿಕ ಅಸಮಾನತೆಯ ಕುರಿತು ಜಾಗತಿಕ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ, ಅಪರಾಧ ಮತ್ತು ಹಿಂಸೆ, ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ ಹಾಗೂ ಆರೋಗ್ಯ ರಕ್ಷಣೆ ಸಹ ಅವರ ಪ್ರಮುಖ ಚಿಂತೆಗಳಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
ಇಪ್ಸೋಸ್ ಆನ್‌ಲೈನ್ ಪ್ಯಾನಲ್ ಮೂಲಕ ವಿಶ್ವದ 28 ದೇಶಗಳಲ್ಲಿ ಮಾಸಿಕವಾಗಿ ಸಮೀಕ್ಷೆ ನಡೆಸಿಕೊಂಡು ಬರುತ್ತಿದೆ.