ನವದೆಹಲಿ : ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂ. ಶುಕ್ರವಾರದಿಂದ ಜನ್‌ಧನ್ ಖಾತೆಗಳಿಗೆ ನೇರ ವರ್ಗಾವಣೆ ಮಾಡುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ. ನೇರ ನಗದು ವರ್ಗಾಯಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಜನ್‌ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 2020ರ ಏಪ್ರಿಲ್ ಮಾಸಿಕದ ಮೊದಲ ಕಂತಿನ 500 ರೂ. ಅವರ ಖಾತೆಗಳಿಗೆ ವರ್ಗಾವಣೆ ಆಗಲಿವೆ ಎಂದು ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಚಿಂದ್ರ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಮತ್ತು 1ರಂತೆ ಕೊನೆಯ ಅಂಕಿಯೊಂದಿಗೆ ಖಾತೆ ಸಂಖ್ಯೆಯನ್ನು ಹೊಂದಿರುವ ಮಹಿಳಾ ಪಿಎಂಜೆಡಿವೈ ಖಾತೆದಾರರು ಏಪ್ರಿಲ್ 3ರಂದು ತಮ್ಮ ಖಾತೆಯಲ್ಲಿ ಹಣ ಪಡೆಯುತ್ತಾರೆ. ಆದರೆ, 2 ಅಥವಾ 3 ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆ ಏಪ್ರಿಲ್ 4ರಂದು ಬ್ಯಾಂಕ್ಗಳನ್ನು ಸಂಪರ್ಕಿಸಬಹುದು. ಏಪ್ರಿಲ್ 7ರಂದು 4 ಅಥವಾ 5ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆ ಹೊಂದಿರುವ ಫಲಾನುಭವಿಗಳು ತಮ್ಮ ಹಣ ಪಡೆಯಬಹುದು. ಖಾತೆ ಸಂಖ್ಯೆ 6 ಅಥವಾ 7ರ ಕೊನೆಯ ಅಂಕಿಯೊಂದಿಗೆ ಮರುದಿನ ಹಿಂತೆಗೆದುಕೊಳ್ಳಬಹುದು.
ಕೊನೆಯ ಸಾಲವನ್ನು ಏಪ್ರಿಲ್ 9ರಂದು 8ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆಗೆ ಕಳುಹಿಸಲಾಗುತ್ತದೆ. ಏಪ್ರಿಲ್ 9ರ ನಂತರ ಫಲಾನುಭವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ದಿನ ಹಿಂತೆಗೆದುಕೊಳ್ಳಬಹುದು.