ETV Bharat / business

ದೇಶದ ಆರ್ಥಿಕತೆ 'ವಿ'ಕಾರವಾಗಿದೆಯಾ ಇಲ್ಲವೇ U,W,L,Z, ಸ್ವೂಶ್​ ಆಕಾರದಲ್ಲಿದೆಯಾ? - ಭಾರತದ ಆರ್ಥಿಕತೆ

ಭಾರತದ ಆರ್ಥಿಕ ಚೇತರಿಕೆಯು 'ವಿ' (V) ಬದಲು 'ಯು' (U) ಅಥವಾ 'ಡಬ್ಲ್ಯೂ' (W) ಆಕಾರದಲ್ಲಿ ಇರುವ ಸಾಧ್ಯತೆ ದಟ್ಟವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಪರಿಣಾಮ ಮುನ್ನವೇ ವಿತ್ತೀಯ ವೃದ್ಧಿ ಬೆಳವಣಿಗೆಗಾಗಿ ಹೆಣಗಾಡುತ್ತಿತ್ತು ಎಂದು ವಿಶ್ಲೇಷಕರು ಜೂನ್​​ನಲ್ಲಿ ನಡೆಸಿದ್ದ ಸಂಶೋಧನಾ ವರದಿಯಲ್ಲಿ ವ್ಯಾಖ್ಯಾನಿಸಿದ್ದರು.

Economy
ಆರ್ಥಿಕತೆ
author img

By

Published : Jul 11, 2020, 5:57 PM IST

ನವದೆಹಲಿ: ಕಳೆದ ವಾರ ಭಾರತದ ಖರ್ಚು ವೆಚ್ಚದ ಬಗ್ಗೆ ಮಾತನಾಡಿದ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಆರ್ಥಿಕತೆಯ ಚೇತರಿಕೆಯ ಹಾದಿಯ ಬಗ್ಗೆ ಕೇಂದ್ರವು ಆಶಾವಾದಿಯಾಗಿದೆ ಮತ್ತು 'ವಿ' ಆಕಾರದ ಚೇತರಿಕೆ ನಿರೀಕ್ಷಿಸುತ್ತದೆ. ಈ ವರ್ಷ 'ವಿ'ಯ ಕೆಳಭಾಗದಲ್ಲಿದ್ದು, ಮುಂದಿನ ವರ್ಷ 'ವಿ' ಮೇಲ್ಭಾಗಕ್ಕೆ ಹತ್ತಿರದಲ್ಲಿ ಇರಲಿದೆ ಎಂದು ಹೇಳಿದ್ದರು.

ಭಾರತದ ಆರ್ಥಿಕ ಚೇತರಿಕೆಯು 'ವಿ' (V) ಬದಲು 'ಯು' (U) ಅಥವಾ 'ಡಬ್ಲ್ಯೂ' (W) ಆಕಾರದ ಇರುವ ಸಾಧ್ಯತೆ ದಟ್ಟವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ಪರಿಣಾಮ ಮುನ್ನವೇ ವಿತ್ತೀಯ ವೃದ್ಧಿ ಬೆಳವಣಿಗೆಗಾಗಿ ಹೆಣಗಾಡುತ್ತಿತ್ತು ಎಂದು ವಿಶ್ಲೇಷಕರು ಜೂನ್​​ನಲ್ಲಿ ನಡೆಸಿದ್ದ ಸಂಶೋಧನಾ ವರದಿಯಲ್ಲಿ ವ್ಯಾಖ್ಯಾನಿಸಿದ್ದರು.

ಒಂದು ರಾಷ್ಟ್ರದ ಆರ್ಥಿಕ ಹಿಂಜರಿತ ಮತ್ತು ಚೇತರಿಕೆಯನ್ನು ಸಾಮಾನ್ಯವಾಗಿ ಯು, ವಿ ಮತ್ತು ಡಬ್ಲ್ಯೂ ಅಕ್ಷರಗಳ ಆಕಾರಗಳಲ್ಲಿ ಪಟ್ಟಿಮಾಡಲಾಗುತ್ತದೆ. ಲೆಕ್ಕಾಚಾರ ಮಾನದಂಡದ 'V', 'W', 'Z, 'L', 'ಸ್ವೂಶ್' ಮತ್ತು 'U' ಅಕ್ಷಗಳ ಆಕಾರದಲ್ಲಿ ಆರ್ಥಿಕ ಹಿಂಜರಿತ ಮತ್ತು ಚೇತರಿಕೆಯ ಚಕ್ರವು ಏರಿಳಿತವನ್ನು ಸೂಚಿಸುತ್ತವೆ.

'V' -ಆಕಾರದ ಚೇತರಿಕೆ ಎಂದರೇನು?

v
'V' ಆಕಾರದ ಚೇತರಿಕೆ

V-ಆಕಾರದ ಚೇತರಿಕೆ ಎಂದರೇ ಪುನಶ್ಚೇತನದ ಚಾರ್ಟಿಂಗ್‌ನಲ್ಲಿ "ವಿ" (V) ಆಕಾರ ಹೋಲುತ್ತದೆ. ಸರಳವಾಗಿ ಹೇಳುವುದಾದರೇ ತೀವ್ರ ಕುಸಿತದ ಬಳಿಕ ಹಿಂದಿನ ಗರಿಷ್ಠ ಮಟ್ಟಕ್ಕೆ ತೀಕ್ಷ್ಣವಾಗಿ ಏರಿಕೆ ಕಾಣುತ್ತದೆ. ತೀಕ್ಷ್ಣ ಆರ್ಥಿಕ ಕುಸಿತದ ನಂತರ ಆರ್ಥಿಕ ಕಾರ್ಯಕ್ಷಮತೆಯು ತ್ವರಿತ ಮತ್ತು ನಿರಂತರ ಚೇತರಿಕೆಯಿಂದ ಕೂಡಿರುತ್ತದೆ.

'W'- ಆಕಾರದ ಚೇತರಿಕೆ ಎಂದರೇನು?

W
'W' ಆಕಾರದ ಚೇತರಿಕೆ

W ಆಕಾರದ ಚೇತರಿಕೆ ತೀಕ್ಷ್ಣವಾದ ಕುಸಿತದ ಬಳಿಕ ತೀಕ್ಷ್ಣವಾಗಿ ಮೇಲಕ್ಕೆ ಏರುತ್ತದೆ. ಮತ್ತೆ ತೀಕ್ಷ್ಣ ಇಳಿಕೆ ಕಂಡು ಮತ್ತೊಂದು ವೇಗದ ಮೇಲ್ಮುಖದ ಏರಿಕೆಯೊಂದಿಗೆ ಕೊನೆಗೊಳ್ಳುತ್ತದೆ. 'W'ನ ಮಧ್ಯದ ವಿಭಾಗದ ಸೂಚಕವು ಕರಡಿ ಮಾರುಕಟ್ಟೆಯ ಸೀಸನ್​ ಅಥವಾ ಹೆಚ್ಚುವರಿ ಆರ್ಥಿಕ ಬಿಕ್ಕಟ್ಟಿನ ಚೇತರಿಕೆ ಪ್ರತಿನಿಧಿಸುತ್ತದೆ. ಕುಸಿತದಲ್ಲಿ ವಿ ಆಕಾರದಂತೆ ಅತಿ ಹೆಚ್ಚಿನ ಕುಸಿತ ಕಂಡುಬರಲಿದೆ. ಆದರೆ ಚೇತರಿಕೆ ಲಕ್ಷಣಗಳು ಗೋಚರಿಸಿ ಮತ್ತೊಮ್ಮೆ ಆರ್ಥಿಕತೆ ಮುಗ್ಗರಿಸಲಿದೆ. ಆರ್ಥಿಕತೆ ಪೂರ್ಣಪ್ರಮಾಣದಲ್ಲಿ ಚೇತರಿಕೆ ಕಾಣುವುದಕ್ಕೂ ಮುನ್ನವೇ ಎರಡನೇ ಬಾರಿ ಕುಸಿಯುವುದರಿಂದ ಇದನ್ನು ಡಬಲ್ ಡಿಪ್ ಕುಸಿತ ಎಂದೂ ಕರೆಯಲಾಗುತ್ತೆ.

'U'-ಆಕಾರದ ಚೇತರಿಕೆ ಎಂದರೇನು?

U
'U' ಆಕಾರದ ಚೇತರಿಕೆ

'U'-ಆಕಾರದ ಚೇತರಿಕೆ ಮಾಪನ ಮಾಡಿದ ಚಾರ್ಟ್​ನ ಯು ಆಕಾರ ಹೋಲುತ್ತದೆ. ಯು 'U' -ಆಕಾರದ ಚೇತರಿಕೆ ಉದ್ಯೋಗ, ಜಿಡಿಪಿ ಮತ್ತು ಕೈಗಾರಿಕಾ ಉತ್ಪಾದನೆಯಂತಹ ಕೆಲವು ಆರ್ಥಿಕ ಕ್ರಮಗಳನ್ನು ಪ್ರತಿನಿಧಿಸುತ್ತದೆ. ಯು-ಆಕಾರದ ಚೇತರಿಕೆ ವಿ-ಆಕಾರದ ಚೇತರಿಕೆ ಹೋಲುತ್ತಿದ್ದರೂ ವಿತ್ತೀಯ ಬೆಳವಣಿಗೆ ತಕ್ಷಣ ಮರುಕಳಿಸುವ ಬದಲು ಹಿಂಜರಿತದ ಕೆಳಭಾಗದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬಳಿಕ ವೇಗವಾಗಿ ಮೇಲಕ್ಕೇರುತ್ತದೆ.

'L'- ಆಕಾರದ ಚೇತರಿಕೆ ಎಂದರೇನು?

L
L ಆಕಾರದ ಚೇತರಿಕೆ

'L' ಆಕಾರದ ಆರ್ಥಿಕತೆಯು ಹಿಂಜರಿತದ ತೀವ್ರ ಸ್ವರೂಪದಾಗಿದ್ದು, ನೈಜ ಚೇತರಿಕೆ ಕಾಣಿಸುವುದಿಲ್ಲ. ಈ ಸನ್ನಿವೇಶದಲ್ಲಿ ದೇಶವು ಕಡಿದಾದ ಆರ್ಥಿಕ ಕುಸಿತವನ್ನು ಅನುಭವಿಸುತ್ತದೆ. ಹಲವು ವರ್ಷಗಳಿಂದ ಬಿಕ್ಕಟ್ಟಿನ ಪೂರ್ವದ ಬೆಳವಣಿಗೆಗೆ ಹಿಂತಿರುಗುವುದಿಲ್ಲ. ಇದು ಆರ್ಥಿಕತೆಗೆ ದೀರ್ಘಕಾಲದ ಹಾನಿಯನ್ನು ಉಂಟುಮಾಡಲಿದೆ.

'Z' ಆಕಾರದ ಚೇತರಿಕೆ ಎಂದರೇನು?

z
'Z' ಆಕಾರದ ಚೇತರಿಕೆ

'Z' ಆಕಾರದ ಆರ್ಥಿಕ ಚೇತರಿಕೆಯ ಅತ್ಯಂತ ಆಶಾವಾದಿ ರೂಪವಾಗಿದೆ. ವಿ-ಆಕಾರಕ್ಕಿಂತಲೂ ಇದು ಉತ್ತಮವಾಗಿದೆ. ಈ ಸನ್ನಿವೇಶದಲ್ಲಿ ಆರ್ಥಿಕತೆಯು ಕುಸಿತವನ್ನು ಅನುಭವಿಸುತ್ತದೆ. ಈ ಬಳಿಕ ಬಿಕ್ಕಟ್ಟಿನ ಪೂರ್ವದ ಮಟ್ಟಕ್ಕಿಂತಲೂ ಹೆಚ್ಚಿನ ಎತ್ತರಕ್ಕೆ ಪುಟಿಯುತ್ತದೆ. ಮೂಲ ​​ಬೆಳವಣಿಗೆಯಲ್ಲಿ ನೆಲೆಗೊಳ್ಳುವ ಮೊದಲು ತಾತ್ಕಾಲಿಕ ಏರಿಕೆ ಸೃಜಿಸುತ್ತದೆ.

'ಸ್ವೂಶ್' ಆಕಾರದ ಚೇತರಿಕೆ ಎಂದರೇನು?

Swoosh
ಸ್ವೂಶ್​ ಆಕಾರ

'ಸ್ವೂಶ್'​ ಆಕಾರದ ಆರ್ಥಿಕತೆಯ ಲೋಗೊ ನೈಕ್‌ನ ಚಿನ್ಹೆಯನ್ನೇ ಹೋಲುತ್ತದೆ. ಆರ್ಥಿಕ ಚೇತರಿಕೆಯ ವೇಳೆ ಸ್ಪಷ್ಟವಾದ ಕಡಿಮೆ ಬಿಂದುವಿನೊಂದಿಗೆ ತೀಕ್ಷ್ಣವಾದ ಕುಸಿತವು ಭಾಗಶಃ ಏರಿಕೆಯ ಬಳಿಕ ದೀರ್ಘ ಕ್ರಮೇಣ ಚೇತರಿಕೆ ಕಾಣುತ್ತದೆ. ಈ ನಂತರ ಆರ್ಥಿಕತೆಯು ಪೂರ್ವಕ್ಕೆ ಮರಳಲು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ಕ್ರೈಸಿಸ್ ಪಥ ಎನ್ನುತ್ತಾರೆ.

'ಯು' ಅಥವಾ 'ಡಬ್ಲ್ಯೂ' ಆಕಾರದಲ್ಲಿ ದೇಶದ ಆರ್ಥಿಕ ಚೇತರಿಕೆ!

ಕೋವಿಡ್‌-19 ಸೋಂಕು ಎದುರಿಸಲು ಭಾರತವು ನಿಗದಿಗೂ ಮೊದಲೇ ಲಾಕ್‌ಡೌನ್‌ ಮೊರೆ ಹೋಗಿತ್ತು. ಇದನ್ನು ದೀರ್ಘಕಾಲದವರೆಗೆ ವಿಧಿಸಿತ್ತು. ಕಳೆದ ಎರಡು ವರ್ಷಗಳ ಕಳಪೆ ಬೆಳವಣಿಗೆ ಗಮನಿಸಿದ್ರೆ, ಆರ್ಥಿಕತೆಯಲ್ಲಿ ಬೇಡಿಕೆ ಪ್ರೋತ್ಸಾಹಿಸಲು ಸರ್ಕಾರವು ಸೀಮಿತ ಸಂಪನ್ಮೂಲಗಳನ್ನು ಹೊಂದಿತ್ತು ಎಂಬುದು ತಿಳಿದು ಬರುತ್ತದೆ. ಹೀಗಾಗಿ ಕೋವಿಡ್-19​ ಪ್ರಭಾವವು ಭಾರತದಲ್ಲಿ ಆಳವಾಗಿರಲಿದೆ. ಕೆಲವು ವಲಯಗಳ ಸುಧಾರಿತದಿಂದಾಗಿ ಆರ್ಥಿಕತೆ 'ವಿ' ಚೇತರಿಕೆಗಿಂತ ಹೆಚ್ಚು 'ಯು' ಅಥವಾ 'ಡಬ್ಲ್ಯೂ' ಆಗಿರುತ್ತದೆ ಎಂದು ವಿಶ್ಲೇಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.