ಸ್ಯಾನ್ಫ್ರಾನ್ಸಿಸ್ಕೋ: ಟ್ವಿಟರ್ ಸಿಇಒ ಜಾಕ್ ಡಾರ್ಸೆ ಅವರು, ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆ ನಿಷೇಧದ ನಡೆಯನ್ನು ಸಮರ್ಥಿಸಿಕೊಂಡು, ಇದೇ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
ಕಳೆದ ವಾರ ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿಗೆ ಟ್ರಂಪ್ ಅವರು ತಮ್ಮ ಅನುಯಾಯಿಗಳನ್ನು ಪ್ರಚೋದಿಸಿ, ಕೆಟ್ಟ ಸಂದೇಶಗಳನ್ನು ಟ್ವೀಟ್ ಮಾಡುವುದನ್ನು ಮುಂದುವರಿಸಿದ್ದರು. ಸಾರ್ವಜನಿಕ ಸುರಕ್ಷತೆಗೆ ಉಂಟಾಗುವ ಅಪಾಯವನ್ನು ಮನಗಂಡು ಕಂಪನಿಯು ಅವರ ಅಕೌಂಟ್ ಸ್ಥಗಿತಗೊಳಿಸಿದೆ ಎಂದು ಹೇಳಿದರು.
ಕ್ಯಾಪಿಟಲ್ ಗಲಭೆಯ ದಿನದಂದೇ ಟ್ರಂಪ್ ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಟ್ವಿಟರ್, ಶುಕ್ರವಾರ ಸಂಪೂರ್ಣವಾಗಿ ನಿಷೇಧಿಸಿತು.
ಇದನ್ನೂ ಓದಿ: ಧೋನಿ ವ್ಯಾಪಾರಕ್ಕೂ ಸೋಂಕಿದ ಹಕ್ಕಿ ಜ್ವರ.. ಆರ್ಡರ್ ಮಾಡಿದ 2000 ‘ಕಡಕ್ ನಾಥ್’ ಕೋಳಿಗಳ ಸಾವು
ಟ್ವಿಟರ್ನಿಂದ ಡೊನಾಲ್ಡ್ ಟ್ರಂಪ್ ಅವರನ್ನು ನಿಷೇಧಿಸುವ ಬಗ್ಗೆ ನಾನು ಹೆಮ್ಮೆಪಡುತ್ತಿಲ್ಲ. ಆದರಿದು ಟ್ವಿಟರ್ನ ಸರಿಯಾದ ನಿರ್ಧಾರ ಎಂದು ಅವರು ಹೇಳಿದರು.