ETV Bharat / business

ಟಿಕ್​ಟಾಕ್​ನಿಂದ ಹೊರ ಹೋಗುವಂತೆ ಬೈಟ್​ಡ್ಯಾನ್ಸ್​ಗೆ ಟ್ರಂಪ್​ 90 ದಿನ ಗಡುವು - ಟಿಕ್​ಟಾಕ್​ ನಿಷೇಧ

ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಅಪಾಯವಿದೆ ಎಂದು ಉಲ್ಲೇಖಿಸಿದ ಟ್ರಂಪ್, ಕಳೆದ ವಾರ ಟಿಕ್‌ಟಾಕ್‌ನ ಚೀನಾ ಮಾಲೀಕರು ಮತ್ತು ಮೆಸೇಜಿಂಗ್ ಆ್ಯಪ್ ವೀಚಾಟ್ ನಿಷೇಧಕ್ಕೆ ಆದೇಶಿಸಿದ್ದರು.

TikTok
ಟಿಕ್​ಟಾಕ್​
author img

By

Published : Aug 15, 2020, 3:40 PM IST

ವಾಷಿಂಗ್ಟನ್: ವಿಡಿಯೋ ಟಿಕ್‌ಟಾಕ್ ಆ್ಯಪ್​ ಬೆಂಬಲಕ್ಕೆ ಬಳಸುವ ಎಲ್ಲ ಸ್ವತ್ತುಗಳಿಂದ ಹೊರಬರುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಕಂಪನಿ ಬೈಟ್‌ಡ್ಯಾನ್ಸ್‌ಗೆ 90 ದಿನಗಳ ಕಾಲಾವಕಾಶ ನೀಡಿದ್ದಾರೆ.

ಬೈಟ್‌ಡ್ಯಾನ್ಸ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಕ್ರಮ ತೆಗೆದುಕೊಳ್ಳಬಹುದು ಎಂದು ನಂಬಲಾರ್ಹ ಮೂಲಗಳು ಟ್ರಂಪ್​ ಗಮನಕ್ಕೆ ತಂದಿದ್ದರಿಂದ ಈ ಗಡುವು ನೀಡಿದ್ದಾರೆ.

ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಅಪಾಯವಿದೆ ಎಂದು ಉಲ್ಲೇಖಿಸಿದ ಟ್ರಂಪ್, ಕಳೆದ ವಾರ ಟಿಕ್‌ಟಾಕ್‌ನ ಚೀನಾ ಮಾಲೀಕರು ಮತ್ತು ಮೆಸೇಜಿಂಗ್ ಆ್ಯಪ್ ವೀಚಾಟ್ ನಿಷೇಧಕ್ಕೆ ಆದೇಶಿಸಿದ್ದರು.

ಅಪ್ಲಿಕೇಷನ್‌ಗೆ ಅಮೆರಿಕದ 100 ಮಿಲಿಯನ್ ಬಳಕೆದಾರರಿದ್ದಾರೆ. ಅವರಲ್ಲಿ ಬಹುತೇಕರು ಹದಿಹರೆಯದವರು ಇದ್ದಾರೆ. ಕಿರು ವಿಡಿಯೋ ಪೋಸ್ಟ್ ಮಾಡಲು ಮತ್ತು ವೀಕ್ಷಿಸಲು ಬಳಸುತ್ತಾರೆ.

ಟಿಕ್‌ಟಾಕ್‌ನ ಕೆಲವು ಪಾಲು ಖರೀದಿಸಲು ಮೈಕ್ರೋಸಾಫ್ಟ್ ಮಾತುಕತೆ ನಡೆಸುತ್ತಿದೆ.

ಟ್ರಂಪ್‌ರ ಹಿಂದಿನ ಟಿಕ್‌ಟಾಕ್ ಮತ್ತು ವೀಚಾಟ್ ಆದೇಶಗಳನ್ನು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಗುರುವಾರ ಸಮರ್ಥಿಸಿಕೊಂಡು, '1977ರ ಕಾನೂನಿನ ಪ್ರಕಾರ ಅವರು ತಮ್ಮ ತುರ್ತು ಅಧಿಕಾರ ಚಲಾಯಿಸುತ್ತಿದ್ದಾರೆ' ಎಂದು ಸುದ್ದಿಗಾರರಿಗೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.