ವಾಷಿಂಗ್ಟನ್: ವ್ಯಾಪಾರದ ಏಕೀಕರಣ, ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಅಧಿಕ ಮೊತ್ತದ ಸಾಲದಂತಹ ಸಮಸ್ಯೆಗಳಿಗೆ ಬಲವಾದ ಜಾಗತಿಕ ಸಮನ್ವಯ ಅಗತ್ಯವಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ನಡೆದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ ಸಮೂಹದ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಸೀತಾರಾಮನ್, ಆರ್ಥಿಕ ಮಂದಗತಿಗೆ ಕಾರಣವಾದ ಅಡೆತಡೆಗಳನ್ನು ತಗ್ಗಿಸಲು ಸಮಗ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಬಹುಪಕ್ಷೀಯ ಮನೋಭಾವಕ್ಕೆ ಆಹ್ವಾನಿಸಿದರು.
ನಿಧಾನಗತಿ ಬಿಕ್ಕಟ್ಟುಗಳು ಮರೆ ಆಗುವವರೆಗೂ ನಾವು ಕಾಯಬೇಕಾಗಿಲ್ಲ. ವಾಣಿಜ್ಯ ಸಮರಗಳೇ ರಕ್ಷಣಾತ್ಮಕ ಅನಿಶ್ಚಿತತೆಗಳನ್ನು ಸೃಷ್ಟಿಸಿದ್ದು, ಅಂತಿಮವಾಗಿ ಇದು ಬಂಡವಾಳ, ಸರಕು ಮತ್ತು ಸೇವೆಗಳ ಒಳ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಿದರು.