ETV Bharat / business

ಸಂಕೀರ್ಣ ಸವಾಲೊಡ್ಡುವ ಅಮೆರಿಕದ ಜತೆಗೆ ವ್ಯಾಪಾರ ಒಪ್ಪಂದ ಸುಲಭವಲ್ಲ: ಜೈಶಂಕರ್ - ವಿಲ್ಬರ್ ರಾಸ್

ದೆಹಲಿಯಲ್ಲಿ ಆಯೋಜಿಸಿದ 'ವಿಶ್ವ ಆರ್ಥಿಕ ವೇದಿಕೆ' ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​​. ಜೈಶಂಕರ್, ಇದು ಸಾಕಷ್ಟು ಸಂಕೀರ್ಣವಾದ ಸಮಸ್ಯೆಗಳ ಗುಂಪಾಗಿದೆ. ನೀವು ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೀರಿ. ಸಮಸ್ಯೆಗಳಿಗೆ ಅವರು ಸ್ವಲ್ಪ ಸಮಯ ತೆಗೆದುಕೊಂಡು ಅವುಗಳಿಗೆ ಸಮರ್ಥನೆ ನೀಡುವರು ಎಂಬುದನ್ನು ನಾನು ಭಾವಿಸುತ್ತೇನೆ ಎಂದರು.

ಸಾಂದರ್ಭಿಕ ಚಿತ್ರ
author img

By

Published : Oct 5, 2019, 3:25 PM IST

ನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದವು 'ಅಷ್ಟು ಸುಲಭವಲ್ಲ'. ಉಭಯ ರಾಷ್ಟ್ರಗಳ ವಾಣಿಜ್ಯ ಸಚಿವರು ತಮ್ಮ- ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್​​. ಜೈಶಂಕರ್ ಹೇಳಿದರು.

ದೆಹಲಿಯಲ್ಲಿ ಆಯೋಜಿಸಿದ 'ವಿಶ್ವ ಆರ್ಥಿಕ ವೇದಿಕೆ'ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಸಾಕಷ್ಟು ಸಂಕೀರ್ಣವಾದ ಸಮಸ್ಯೆಗಳ ಗುಂಪಾಗಿದೆ. ನೀವು ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೀರಿ. ಸಮಸ್ಯೆಗಳಿಗೆ ಅವರು ಸ್ವಲ್ಪ ಸಮಯ ತೆಗೆದುಕೊಂಡು ಅವುಗಳಿಗೆ ಸಮರ್ಥನೆ ನೀಡುವವರು ಎಂಬುದನ್ನು ನಾನು ಭಾವಿಸುತ್ತೇನೆ ಎಂದರು.

ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಮತ್ತು ವಾಣಿಜ್ಯ ಮತ್ತು ಕಾರ್ಪೊರೇಟ್​ ಸಚಿವ ಪಿಯೂಷ್ ಗೋಯಲ್ ಅವರು ದೆಹಲಿಯಲ್ಲಿ ಮಾತುಕತೆ ನಡೆಸುತ್ತಿರುವಾಗ ಜೈಶಂಕರ್ ಅವರ ಹೇಳಿಕೆಗಳು ಹೊರಬಂದಿವೆ.

ಅಮೆರಿಕ- ಭಾರತ ನಡುವಿನ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಜಾರಿಗೆ ತರಲು ಸಾಧ್ಯವಿಲ್ಲ ಎಂಬುದಕ್ಕೆ ಯಾವುದೇ ರಚನಾತ್ಮಕ ಕಾರಣಗಳಿಲ್ಲ ಎಂದು ಗುರುವಾರ ರಾಸ್ ಹೇಳಿದ್ದಾರೆ.

ಐದು ನಿಮಿಷಗಳಲ್ಲಿ ವ್ಯಾಪಾರ- ಒಪ್ಪಂದ ನಡೆಯಲಿದೆ ಎಂದು ಯಾವುದೇ ಸರ್ಕಾರ ಹೇಳಲಿಲ್ಲ. ಅದು ಕೇವಲ ಊಹಾಪೋಹವಾಗಿತ್ತು. ಯಾವುದೇ ಒಂದು ಪಕ್ಷದವರು ಬೇಗನೆ ನಿರ್ಧಾರ ತೆಗೆದುಕೊಳ್ಳದಿರಲು ರಚನಾತ್ಮಕ ಕಾರಣಗಳಿಲ್ಲ ಎಂಬುದನ್ನು ನಾವು ಭಾವಿಸುತ್ತೇವೆ ಎಂದು ರಾಸ್​ ಹೇಳಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.