ನವದೆಹಲಿ: ತೆರಿಗೆದಾರರ ಅನುಕೂಲಕ್ಕಾಗಿ ಸ್ವಯಂಪ್ರೇರಿತವಾಗಿ ಅನುಸರಣೆ ಪಾಲನೆಗೆ ಆದಾಯ ತೆರಿಗೆ ಇಲಾಖೆಯು ಜುಲೈ 20ರಿಂದ ಇ-ಕ್ಯಾಂಪೇನ್ ಆರಂಭಿಸುತ್ತಿದೆ.
ದತ್ತಾಂಶ ವಿಶ್ಲೇಷಣೆಯು ಕೆಲವು ತೆರಿಗೆದಾರರನ್ನು ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಐಟಿ ರಿಟರ್ನ್ಸ್ (ITR) ಫೈಲ್ ಮಾಡದವರ ಜೊತೆಗೆ ರಿಟರ್ನ್ ಫೈಲ್ ಮಾಡುವವರ ಗುಂಪೊಂದನ್ನು ಗುರುತಿಸಲಾಗಿದೆ. ಇದರಲ್ಲಿ ಹೆಚ್ಚಿನ ಮೌಲ್ಯದ ವಹಿವಾಟುಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ಗೆ ಹೊಂದಾಣಿಕೆ ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. 2019-20ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಮತ್ತು ಪರಿಷ್ಕರಿಸಲು ಕೊನೆಯ ದಿನಾಂಕ (2018-19ನೇ ಹಣಕಾಸು ವರ್ಷಕ್ಕೆ ಸಂಬಂಧ) 2020ರ ಜುಲೈ 31ಕ್ಕೆ ವಿಸ್ತರಿಸಲಾಗಿದೆ.
2020ರ ಜುಲೈ 31ಕ್ಕೆ ಕೊನೆಗೊಳ್ಳುವ 11 ದಿನಗಳ ಅಭಿಯಾನವು 2018-19ರ ಆರ್ಥಿಕ ವರ್ಷಕ್ಕೆ ಸಲ್ಲಿಸುವವರಲ್ಲದವರು ಅಥವಾ ಆದಾಯದಲ್ಲಿ ವ್ಯತ್ಯಾಸ/ ಕೊರತೆಗಳನ್ನು ಹೊಂದಿರುವ ಮೌಲ್ಯಮಾಪಕರು/ ತೆರಿಗೆದಾರರ ಮೇಲೆ ನಿಗವಹಿಸಲಾಗುತ್ತದೆ.
ಐಟಿ ಇಲಾಖೆಯಲ್ಲಿ ಲಭ್ಯವಿರುವ ತೆರಿಗೆ / ಹಣಕಾಸಿನ ವಹಿವಾಟಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಮೌಲ್ಯೀಕರಿಸಲು ಮತ್ತು ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸಲು ತೆರಿಗೆ ಪಾವತಿದಾರರಿಗೆ ಆನ್‌ಲೈನ್‌ನಲ್ಲಿ ಅನುಕೂಲ ಕಲ್ಪಿಸುವುದು ಇ-ಕ್ಯಾಂಪೇನ್ನ ಉದ್ದೇಶವಾಗಿದೆ ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ.