ನವದೆಹಲಿ: ಎಂಜಿನಿಯರಿಂಗ್ ಉತ್ಕೃಷ್ಟತೆ ಮತ್ತು ನಾವೀನ್ಯತೆಯಡಿ ಕಳೆದ ವರ್ಷ 98 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ ಎಂದು ದೇಶೀಯ ಆಟೋ ದೈತ್ಯ ಟಾಟಾ ಮೋಟರ್ಸ್ ತಿಳಿಸಿದೆ.
ಈ ಪೇಟೆಂಟ್‌ಗಳು ಮುಖ್ಯವಾಗಿ ಸಿಇಎಸ್ಎಸ್ (ಸಂಪರ್ಕಿತ, ವಿದ್ಯುದ್ದೀಕೃತ, ಸುಸ್ಥಿರ ಮತ್ತು ಸುರಕ್ಷಿತ) ವಾಹನಗಳಿಗೆ ಸಂಬಂಧಿಸಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪೇಟೆಂಟ್‌ಗಳು ಆಟೋಮೋಟಿವ್ ಎಲೆಕ್ಟ್ರಾನಿಕ್ಸ್, ಶಬ್ದ ಕಂಪನ ಮತ್ತು ಕಠೋರತೆ, ಸಾಂಪ್ರದಾಯಿಕ ಮತ್ತು ಸುಧಾರಿತ ಪವರ್‌ಟ್ರೇನ್ ಸಿಸ್ಟಮ್, ಕೈಗಾರಿಕಾ ವಿನ್ಯಾಸ, ಹಕ್ಕುಸ್ವಾಮ್ಯ, ನೋಟರೈಸೇಷನ್‌ಗಳಂತಹ ಕ್ರ್ಯಾಶ್ ಸುರಕ್ಷತೆಯ ಸುಧಾರಣೆಗಳು ಸಹ ಒಳಗೊಂಡಿವೆ ಎಂದಿದೆ.
ಕಂಪನಿಯು ಎಂಜಿನಿಯರಿಂಗ್ ಉತ್ಕೃಷ್ಟತೆ ಮತ್ತು ನಾವೀನ್ಯತೆಗಾಗಿ 2020ರಲ್ಲಿ 98 ಪೇಟೆಂಟ್ ಪಡೆದು 80 ಪೇಟೆಂಟ್ಗಳ ನೋಂದಣಿ ಮಾಡಿಕೊಂಡಿದೆ.
ಟಾಟಾ ಮೋಟರ್ಸ್‌ನಲ್ಲಿ ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಬೆಳೆಯುತ್ತಾ ಹೊಸ ಆವಿಷ್ಕಾರಗಳನ್ನು ಪರಿಚಯಿಸುವಂತಹ ಶ್ರೀಮಂತ ಇತಿಹಾಸ ನಮ್ಮಲ್ಲಿದೆ. ನಮ್ಮ ಪ್ರತಿಭಾವಂತ ತಂಡವನ್ನು ಹೊಸದಾಗಿ ಯೋಚಿಸಲು ಪ್ರೋತ್ಸಾಹಿಸುತ್ತೇವೆ. ನಮ್ಮ ಸತತ ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಈಗಿನ ಯಥಾಸ್ಥಿತಿಗೆ ಸವಾಲು ಹಾಕುತ್ತೇವೆ ಎಂದು ಟಾಟಾ ಮೋಟಾರ್ಸ್ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೆಟ್ಕರ್ ಹೇಳಿದರು.
ಇದನ್ನೂ ಓದಿ: 116 ಎಕ್ರೆ ಜಮೀನು ದಾನ ಮಾಡಿ 4 ಬಾರಿ ಶಾಸಕನಾದ ವೃದ್ಧನಿಗೆ ತಲೆ ಮೇಲೊಂದು ಸೂರಿಲ್ಲ!
ಸಾಂಸ್ಥಿಕ ಮಟ್ಟದಲ್ಲಿ ಬೌದ್ಧಿಕ ಸಾಮರ್ಥ್ಯ ಮತ್ತು ಗುಣಲಕ್ಷಣಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿ, 'ಆತ್ಮನಿರ್ಭಾರ ಭಾರತ' ನಿರ್ಮಾಣದಲ್ಲಿ ಭಾರತದ ವಾಹನ ಉದ್ಯಮದ ಪಾತ್ರ ಪ್ರಮುಖವಾದುದು. ಟಾಟಾ ಮೋಟರ್ಸ್‌ನಲ್ಲಿ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳನ್ನು ನೀಡುವ ಉದ್ದೇಶ ಹೊಂದಿದ್ದು, ಜಾಗತಿಕ ಮಾನದಂಡಗಳ ವಿನ್ಯಾಸ, ಸುರಕ್ಷತೆ, ಸೌಕರ್ಯ ಮತ್ತು ಚಾಲನಾಶೀಲತೆಯಂತಹ ಅಂಶಗಳು ಒಳಗೊಂಡಿವೆ.