ನವದೆಹಲಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕ್ಷೇತ್ರಕ್ಕೆ ಘೋಷಿಸಿದ ಉತ್ತೇಜಕ ಪ್ಯಾಕೇಜ್ ಸಮಯೋಚಿತ ಮತ್ತು ಸರಿಯಾದ ಅನುಷ್ಠಾನಕ್ಕೆ ಎದುರು ನೋಡುತ್ತಿದೆ. ಸರ್ಕಾರಿ ಇಲಾಖೆಗಳು ಮತ್ತು ಹಣಕಾಸು ಸಂಸ್ಥೆಗಳು ಪ್ಯಾಕೇಜ್ ಅನ್ನು ಹೇಗೆ ಕಾರ್ಯಗತಗೊಳಿಸುತ್ತವೆ ಎಂಬುದರ ಮೇಲೆ ಅದರ ಯಶಸ್ಸು ಅವಲಂಬಿತವಾಗಿರುತ್ತದೆ.
ಪ್ರಸ್ತುತ ಪ್ಯಾಕೇಜ್ ಉತ್ತಮವಾಗಿದೆ. ಆದರೆ, ಅದನ್ನು ಬ್ಯಾಂಕ್ಗಳು ಮತ್ತು ಸರ್ಕಾರಿ ಇಲಾಖೆಗಳು ಹೇಗೆ ಹೊರತರುತ್ತವೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ ಎಂದು ಭಾರತದ ಎಸ್‌ಎಂಇ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ್ ಸಲುಖೆ ಹೇಳಿದರು.
ಸೀತಾರಾಮನ್ ಅವರು ಎಂಎಸ್‌ಎಂಇ ಘಟಕಗಳ ವ್ಯಾಖ್ಯಾನ ಪರಿಷ್ಕರಿಸಿದರು. ಉತ್ಪಾದನಾ ಮತ್ತು ಸೇವಾ ವಲಯದ ಕಂಪನಿಗಳ ನಡುವಿನ ವ್ಯತ್ಯಾಸ ತೆಗೆದುಹಾಕಿದರು. ಹೊಸ ವ್ಯಾಖ್ಯಾನದ ಪ್ರಕಾರ, 1 ಕೋಟಿ, 50 ಕೋಟಿ ಮತ್ತು 100 ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಘಟಕಗಳನ್ನು ಕ್ರಮವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಾಗಿ ವರ್ಗೀಕರಿಸಲಾಗಿದೆ. ಇದು ಕ್ಷೇತ್ರದ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದರು.
ಇದು ಅನುಕ್ರಮವಾಗಿ 5 ಕೋಟಿ, 75 ಕೋಟಿ ಮತ್ತು 250 ಕೋಟಿ ರೂ. ಆಗಿರಬೇಕು ಎಂದು ನಾವು ಸೂಚಿಸಿದ್ದೇವೆ. ಈ ದೃಷ್ಟಿಯಲ್ಲಿ ನಮ್ಮ ಬೇಡಿಕೆಗಳು ಈಡೇರದ ಕಾರಣ ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ ಸಲುಖೆ ಈಟಿವಿ ಭಾರತಗೆ ತಿಳಿಸಿದರು.
ನಾವು ಜಾಗತಿಕವಾಗಿ ಸ್ಪರ್ಧಿಸಲು ಬಯಸಿದರೆ ಎಸ್‌ಎಂಇ ಕ್ಷೇತ್ರದ ನಮ್ಮ ವ್ಯಾಖ್ಯಾನಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರಬೇಕು. ಎಸ್‌ಎಂಇ ವಲಯದಲ್ಲಿನ ಕೆಟ್ಟ ಸಾಲಗಳು ಅಥವಾ ಎನ್‌ಪಿಎಗಳನ್ನು ಸ್ವಯಂಚಾಲಿತವಾಗಿ ಪುನರ್ರಚಿಸಲು ಸರ್ಕಾರವು ಸಾಕಷ್ಟು ದಾಖಲಾತಿಗಳ ಅಗತ್ಯವಿಲ್ಲದೆ ಬ್ಯಾಂಕ್ಗಳನ್ನು ಕೇಳಬೇಕು ಎಂದು ಹೇಳಿದರು.
ಮೇಲಾಧಾರ ಮುಕ್ತ ಸಾಲಗಳು ಕಂಪೆನಿಗಳಿಗೆ ತಮ್ಮ ಕಾರ್ಯನಿರತ ಬಂಡವಾಳದ ಅಗತ್ಯ ನಿರ್ವಹಿಸಲು ನೆರವಾಗಲಿದೆ. ಇದು ಉದ್ಯಮಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಭಾರತೀಯ ವಾಹನ ಬಿಡಿಭಾಗಗಳ ಉತ್ಪಾದಕರ ಒಕ್ಕೂಟದ (ಎಸಿಎಂಎ) ವಿನ್ನಿ ಮೆಹ್ತಾ ಸ್ವಾಗತಿಸಿದರು.
ಈ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಮೊದಲೇ ಆಟೋಮೊಬೈಲ್ ಮತ್ತು ಆಟೋ ಕಾಂಪೊನೆಂಟ್ ತಯಾರಕರು ಕಡಿಮೆ ಬೇಡಿಕೆಯನ್ನು ಎದುರಿಸುತ್ತಿರುವುದರಿಂದ ಬೇಡಿಕೆಯನ್ನು ಹೆಚ್ಚಿಸುವಂತಹ ಕ್ರಮಗಳಿಗಾಗಿ ಉದ್ಯಮವು ಕಾಯುತ್ತಿದೆ ಎಂದರು.
ವಾಹನ ಬಿಡಿಭಾಗಗಳ ಉದ್ಯಮದ ಮೇಲೆ ಸುಮಾರು ಶೇ 60ರಷ್ಟಿನ ಒಟ್ಟು 57 ಬಿಲಿಯನ್ ತೆರಿಗೆ ವಿಧಿಸಲಾಗುತ್ತಿದೆ. ಶೇ 18ರಷ್ಟು ಜಿಎಸ್ಟಿ ತೆರಿಗೆ ಹೇರಲಾಗುತ್ತಿದೆ. ಉಳಿದ 40ರಷ್ಟು ಉತ್ಪಾದನೆಯಲ್ಲಿ ಶೇ 28ರಷ್ಟು ಜಿಎಸ್ಟಿ ಸ್ಲ್ಯಾಬ್ ಅನ್ವಯಿಸುತ್ತದೆ ಎಂದು ಮೆಹ್ತಾ ಹೇಳಿದ್ದಾರೆ.
ಇಡೀ ವಾಹನ ಉದ್ಯಮಕ್ಕೆ ಆಟೋ ಮತ್ತು ಆಟೋ ಬಿಡಿಭಾಗಗಳ ಉದ್ಯಮಕ್ಕೆ ಶೇ 18ರಷ್ಟು ಜಿಎಸ್ಟಿ ತೆರಿಗೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಕಡಿಮೆ ಜಿಎಸ್ಟಿ ದರಗಳು ಬೇಡಿಕೆ ಉತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಈಟಿವಿ ಭಾರತ ಮುಖಾಂತರ ಮನವಿ ಮಾಡಿದರು.
-ಕೃಷ್ಣಾನಂದ್ ತ್ರಿಪಾಠಿ