ETV Bharat / business

ಹಣಕಾಸಿನ ಕೊರತೆ ಗುರಿ ನಿಗಿಸಲು ಕೇಂದ್ರದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ರಾಜ್ಯಗಳು

ಜಿಡಿಪಿ ಬೆಳವಣಿಗೆಯಲ್ಲಿ ತೀವ್ರ ಕುಸಿತದಂತಹ ತುರ್ತು ಸಂದರ್ಭಕ್ಕೆ ಮೀಸಲಿರುವ ವಿತ್ತೀಯ ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ (ಎಫ್​ಆರ್​ಬಿಎಂ) ಕಾಯ್ದೆ ನಿಯಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2020ರ ಫೆಬ್ರವರಿ ಬಜೆಟ್​ ಮಂಡನೆಯಲ್ಲಿ ಬಳಸಿಕೊಂಡಿದ್ದರು. ಇದೇ ಕಾಯ್ದೆಯಡಿ ರಾಜ್ಯಗಳು ಹಣಕಾಸಿನ ಕೊರತೆಯ ಗುರಿ ನಿಯಮ ಉಲ್ಲಂಘಿಸಲಿವೆ.

fiscal deficit
ಹಣಕಾಸಿನ ಕೊರತೆ
author img

By

Published : Apr 25, 2020, 9:22 PM IST

ನವದೆಹಲಿ: ಬಹುತೇಕ ರಾಜ್ಯಗಳು ತಮ್ಮಗೆ ಎಫ್‌ಆರ್‌ಬಿಎಂ ಕಾಯ್ದೆಯಲ್ಲಿ ನೀಡಲಾದ ಎಸ್ಕೇಪ್ ಷರತ್ತನ್ನ 2021ಕ್ಕೆ ನಿಗದಿಪಡಿಸಿದ ಶೇ 3ರಷ್ಟು ಹಣಕಾಸಿನ ಕೊರತೆಯ ಗುರಿ ಉಲ್ಲಂಘಿಸಲು ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಹಣಕಾಸಿನ ಆರೋಗ್ಯ ಸೇವೆಗಳ ವೆಚ್ಚ ಹೆಚ್ಚಿಸುತ್ತಿವೆ ಎಂಬುದನ್ನು ಬಳಸಿಕೊಳ್ಳಲಿವೆ.

2021ರ ಹಣಕಾಸು ವರ್ಷದಲ್ಲಿ ಕೇಂದ್ರದ ಜತೆ ಹೆಚ್ಚಿನ ಕೊರತೆಯ ಗುರಿ ತಲುಪಲು ರಾಜ್ಯಗಳು ಈಗಾಗಲೇ ಮುಂದಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅವುಗಳ ಕೊರತೆ ಒಟ್ಟು ರಾಜ್ಯ ದೇಶಿಯ ಉತ್ಪನ್ನದ (ಜಿಎಸ್‌ಡಿಪಿ) ಶೇ 0.5ರಷ್ಟು ಹೆಚ್ಚಿಸುವ ಕ್ರಮ ಅನುಸರಿಸಲು 'ವಿತ್ತೀಯ ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ' (ಎಫ್​ಆರ್​ಬಿಎಂ) ಕಾಯ್ದೆ ಅಡಿ ಮೊರೆಹೋಗಲಿವೆ.

ಬಜೆಟ್​ನಲ್ಲಿ ಬಳಕೆ

ಜಿಡಿಪಿ ಬೆಳವಣಿಗೆಯಲ್ಲಿ ತೀವ್ರ ಕುಸಿತದಂತಹ ತುರ್ತು ಸಂದರ್ಭಕ್ಕೆ ಮೀಸಲಿರುವ ವಿತ್ತೀಯ ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ (ಎಫ್​ಆರ್​ಬಿಎಂ) ಕಾಯ್ದೆ ನಿಯಮವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2020ರ ಫೆಬ್ರವರಿ ಬಜೆಟ್​ ಮಂಡನೆಯಲ್ಲಿ ಬಳಸಿಕೊಂಡಿದ್ದರು.

ಏನಿದು ಎಫ್​ಆರ್​ಬಿಎಂ ಕಾಯ್ದೆ?

ಆದಾಯಕ್ಕಿಂತ ವೆಚ್ಚವು ವಿಪರೀತವಾದರೆ ಆರ್ಥಿಕತೆ ಕುಸಿಯುತ್ತದೆ ಎಂಬ ಸಾಮಾನ್ಯ ನಿಯಮದ ಮೇಲೆ ಎಫ್​ಆರ್​ಬಿಎಂ ಕಾಯ್ದೆ ನಿಂತಿದೆ. 2019-20ರಲ್ಲಿ ಶೇ 3.3ಕ್ಕೆ, 2020-21ಕ್ಕೆ ಅಂತಿಮವಾಗಿ ಶೇ 3ಕ್ಕೆ ಇಳಿಸುವ ಗುರಿ ಕೇಂದ್ರ ಸರ್ಕಾರ ಈ ಹಿಂದಿನ ಬಜೆಟ್​ನಲ್ಲಿ ಘೋಷಿಸಿತ್ತು. ಯುದ್ಧ, ತೀವ್ರ ಆರ್ಥಿಕ ಕುಸಿತದ ವೇಳೆ ತನ್ನ ಗುರಿಯಿಂದ ಶೇ 0.5ರಷ್ಟು ಹೆಚ್ಚಳ ಮಾಡಿಕೊಳ್ಳಬಹುದು. ಅಂದರೆ ಅಷ್ಟು ಪ್ರಮಾಣದಲ್ಲಿ ಹೆಚ್ಚು ಸಾಲ ಮಾಡಬಹುದು ಎಂದು ಎಫ್​ಆರ್​ಬಿಎ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಈ ಅಂಶವನ್ನು ಆಗ ಕೇಂದ್ರ ಸರ್ಕಾರ ಬಳಕೆ ಮಾಡಿಕೊಂಡಿತ್ತು. ಇದೇ ನಡೆಯನ್ನು ರಾಜ್ಯ ಸರ್ಕಾರಗಳು ಬಳಕೆ ಮಾಡಿಕೊಳ್ಳುತ್ತಿವೆ.

2020 ವಿತ್ತೀಯ ವರ್ಷದ ಕೊರತೆಯ ಗುರಿಯನ್ನು ಹಿಂದಿನ ಜಿಡಿಪಿಯ ಶೇ 3.3ರಿಂದ ಶೇ 3.8ಕ್ಕೆ ಏರಿಸಲಾಯಿತು. 2021ರ ಹಣಕಾಸಿನ ಕೊರತೆಯ ಗುರಿಯನ್ನು ಶೇ 3.5ಕ್ಕೆ ಪರಿಷ್ಕರಿಸಲಾಗಿದೆ.

ರಾಜ್ಯಗಳು ಕೊರತೆಯ ಗುರಿಯನ್ನು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಲ್ಲಂಘಿಸುವ ಅಗತ್ಯವಿದೆ. ಆರೋಗ್ಯ ಸೇವೆಗಳನ್ನು ಒದಗಿಸಲು ಭಾರಿ ವೆಚ್ಚಗಳು ಉದ್ಭವಿಸುತ್ತಿದೆ. ಇದಲ್ಲದೆ ಕೇಂದ್ರದ ಆದಾಯ ಸಹ ತೀವ್ರ ಒತ್ತಡದಲ್ಲಿದೆ. ಕೇಂದ್ರದಿಂದ ರಾಜ್ಯಗಳು ಸಾಕಷ್ಟು ಕಡಿಮೆ ಆದಾಯ ಪಾಲ ಪಡೆಯುವ ನಿರೀಕ್ಷೆಯಿದೆ. ಈ ಬಿಕ್ಕಟ್ಟಿನ ಅವಧಿಯಲ್ಲಿ ಹೆಚ್ಚುವರಿ ಹಣಕಾಸಿನ ಅಗತ್ಯ ಪೂರೈಸಲು ಹೆಚ್ಚು ಸಾಲ ಪಡೆಯಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡುತ್ತದೆ.

ರಾಜ್ಯಗಳ ಹಣಕಾಸು ಬಲಾಬಲ:

18 ರಾಜ್ಯಗಳ ಹಣಕಾಸಿನ ಸ್ಥಿತಿಯ ಬಗ್ಗೆ ಮೋತಿಲಾಲ್ ಓಸ್ವಾಲ್ ನಡೆಸಿದ ವಿಶ್ಲೇಷಣೆಯ ಪ್ರಕಾರ, ಎಂಟು ರಾಜ್ಯಗಳು ಈಗಾಗಲೇ ಜಿಎಸ್‌ಡಿಪಿಯ ಶೇ 3ರಷ್ಟು ಹಣಕಾಸಿನ ಕೊರತೆ ಅಥವಾ 2021ರ ಹಣಕಾಸು ವರ್ಷದ ಹೆಚ್ಚಿನ ಬಜೆಟ್ ಮಂಡಿಸಿವೆ. ಇನ್ನೂ ಐದು ರಾಜ್ಯಗಳು ಹಣಕಾಸಿನ ಕೊರತೆಯ ಬಜೆಟ್​ ತಮ್ಮ ಜಿಎಸ್​ಡಿಪಿಯಲ್ಲಿ ಶೇ 2.5-2.9ರಷ್ಟಿದೆ. ಕೇವಲ ಐದು ರಾಜ್ಯಗಳು 2021ರಲ್ಲಿ ಜಿಎಸ್‌ಡಿಪಿಯ ಶೇ 2.5ಕ್ಕಿಂತ ಕಡಿಮೆ ಹಣಕಾಸಿನ ಕೊರತೆಯ ಬಜೆಟ್ ಮಂಡಿಸಿವೆ.

ದಲ್ಲಾಳಿ ಅಧ್ಯಯನ ಮಾಡಿದ ರಾಜ್ಯಗಳಲ್ಲಿ ಕೇವಲ ಏಳು ರಾಜ್ಯಗಳು ಮಾತ್ರ ಆದಾಯ ಖಾತೆಯಲ್ಲಿ ಹೆಚ್ಚುವರಿ ಮೊತ್ತ ಗುರಿಯಾಗಿರಿಸಿಕೊಂಡಿವೆ. 10 ರಾಜ್ಯಗಳು ಈ ವರ್ಷ ಜಿಎಸ್‌ಡಿಪಿಯ ಶೇ 24ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಬಾಕಿ ಪಾವತಿಯ ಬಾಧ್ಯತೆ ಹೊಂದಿವೆ. 10 ರಾಜ್ಯಗಳಿಗೆ ಬದ್ಧತೆಯ ಖರ್ಚು (ಬಡ್ಡಿ, ಸಂಬಳ ಮತ್ತು ಪಿಂಚಣಿ ಪಾವತಿ) ಆದಾಯದ ರಶೀದಿ ಶೇ 53ಕ್ಕಿಂತ ಹೆಚ್ಚಿದೆ. ಎಲ್ಲಾ ರಾಜ್ಯಗಳದ್ದು ಸರಾಸರಿ ಶೇ 49ರಷ್ಟಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಹಲವು ರಾಜ್ಯಗಳ ರಾಜ್ಯ ಹಣಕಾಸು ಖಜಾನೆಗಳು ಒತ್ತಡದಲ್ಲಿವೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚುವರಿ ನಿಧಿಯ ಅಗತ್ಯವನ್ನು ಪೂರೈಸಲು ಹಣಕಾಸು ಕೊರತೆ ವಿಸ್ತರಿಸುವಾಗ ಕೋವಿಡ್ -19 ಆರ್ಥಿಕವಾಗಿ ಬಲಪಡಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ.

2018ರ ಹಣಕಾಸು ವರ್ಷದಲ್ಲಿ ಎಲ್ಲಾ ರಾಜ್ಯಗಳು ಕೇವಲ 1.3 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇ 0.73ರಷ್ಟು ಹಣವನ್ನು ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಖರ್ಚು ಮಾಡಿದ್ದು, ಇದು ರಾಜ್ಯಗಳ ಒಟ್ಟು ಖರ್ಚಿನ ಶೇ 4.5ರಷ್ಟಿದೆ.

22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಪೈಕಿ ದೆಹಲಿ ಆರೋಗ್ಯ ಖರ್ಚಿನ ಹೆಚ್ಚಿನ ಪಾಲು ಹೊಂದಿದೆ (ಒಟ್ಟು ಖರ್ಚಿನ ಶೇ 12.5ರಷ್ಟು). ಅಸ್ಸೋಂ ಶೇ 6.6ರಷ್ಟು, ತೆಲಂಗಾಣ ಮತ್ತು ಆಂಧ್ರಪ್ರದೇಶ ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ಶೇ 3.5ರಷ್ಟು ಖರ್ಚು ಮಾಡುತ್ತವೆ.

ಪಂಜಾಬ್, ರಾಜಸ್ಥಾನ, ಕೇರಳ ಮತ್ತು ಹಿಮಾಚಲ ಪ್ರದೇಶ ಈ ನಾಲ್ಕು ರಾಜ್ಯಗಳು ಹೆಚ್ಚು ಆರ್ಥಿಕ ಒತ್ತಡಕ್ಕೊಳಗಾಗಿವೆ. ಪಶ್ಚಿಮ ಬಂಗಾಳ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಸಹ ಬಿಗಿಯಾದ ಹಣಕಾಸಿನ ಸ್ಥಾನ ಹೊಂದಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೋವಿಡ್​-19ನಿಂದ ಹೆಚ್ಚು ಸಂಕಷ್ಟಕ್ಕೆ ಈಡಾದ ಮಹಾರಾಷ್ಟ್ರ, ಅತ್ಯುತ್ತಮ ಆರ್ಥಿಕ ಸ್ಥಾನ ಹೊಂದಿದೆ. 2019ರಲ್ಲಿ ಅತಿ ಕಡಿಮೆ ಹಣಕಾಸಿನ ಕೊರತೆ ಮತ್ತು ಬಾಕಿ ಇರುವ ಹೊಣೆಗಾರಿಕೆಗಳನ್ನು ಹೊಂದಿದ್ದು, ಒಡಿಶಾಗೆ ಎರಡನೆ ಸ್ಥಾನವಿದೆ ಎಂದು ಬ್ರೋಕರೇಜ್ ವರದಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.