ನವದೆಹಲಿ: ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೂ ಎಸ್ಬಿಐ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇಂದು ರಾತ್ರಿ 10:45 ರಿಂದ ನಾಳೆ ಮಧ್ಯಾಹ್ನ 1:15ರವರೆಗೆ ಇಂಟರ್ನೆಟ್ ಬ್ಯಾಂಕಿಂಗ್/ಯೋನೊ/ಯೋನೊ ಲೈಟ್/ಯುಪಿಐ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
-
We request our esteemed customers to bear with us as we strive to provide a better Banking experience.#InternetBanking #YONOSBI #YONO #ImportantNotice pic.twitter.com/HwIug1nEFB
— State Bank of India (@TheOfficialSBI) July 15, 2021 " class="align-text-top noRightClick twitterSection" data="
">We request our esteemed customers to bear with us as we strive to provide a better Banking experience.#InternetBanking #YONOSBI #YONO #ImportantNotice pic.twitter.com/HwIug1nEFB
— State Bank of India (@TheOfficialSBI) July 15, 2021We request our esteemed customers to bear with us as we strive to provide a better Banking experience.#InternetBanking #YONOSBI #YONO #ImportantNotice pic.twitter.com/HwIug1nEFB
— State Bank of India (@TheOfficialSBI) July 15, 2021
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಜುಲೈ 10ರಂದು ಹಾಗೂ ಮೇ ತಿಂಗಳ 22- 23ರಂದು ತನ್ನ ಬ್ಯಾಂಕಿಂಗ್ ಸೇವೆಗಳ ಅಪ್ಗ್ರೇಡ್ ಹಾಗೂ ನಿರ್ವಹಣೆ ಸಂಬಂಧ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಮೇ 22ನೇ ತಾರೀಕಿನಂದು NEFT, RTGS, YONO ಹಾಗೂ YONO Lite ಸೇವೆಗಳು ಲಭ್ಯ ಇರಲಿಲ್ಲ.
ಇದೀಗ ಮತ್ತೆ ಇಂತಹುದೇ ಅಪ್ಗ್ರೇಡ್ ಮಾಡಲಾಗುತ್ತಿದೆ. ಹಾಗಾಗಿ ಸೇವೆಯಲ್ಲಿ ಆಗುವ ವ್ಯತ್ಯಯಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಬ್ಯಾಂಕ್ ಮನವಿ ಮಾಡಿದೆ.