ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದ ಕೊರತೆಯನ್ನು ಪೂರೈಸಲು ಹಣಕಾಸು ಸಚಿವಾಲಯವು ರಾಜ್ಯಗಳಿಗೆ ವಾರದ ಕಂತು 6 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
23 ರಾಜ್ಯಗಳಿಗೆ 5,516.60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಜಿಎಸ್‌ಟಿ ಕೌನ್ಸಿಲ್ ಸದಸ್ಯರಾಗಿರುವ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಗೆ 483.40 ಕೋಟಿ ರೂ., ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಜಿಎಸ್‌ಟಿ ಅನುಷ್ಠಾನದ ಕಾರಣದಿಂದಾಗಿ ಆದಾಯದಲ್ಲಿ ಅಂತರವಿಲ್ಲ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಜಿಎಸ್‌ಟಿ ಅನುಷ್ಠಾನದ ಕಾರಣದಿಂದ ಆದಾಯದಲ್ಲಿ ಉಂಟಾಗುವ 1.10 ಲಕ್ಷ ಕೋಟಿ ರೂ.ಗಳ ಕೊರತೆಯನ್ನು ಪೂರೈಸಲು ಕೇಂದ್ರ ಸರ್ಕಾರವು ವಿಶೇಷ ಸಾಲದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈ ಮೊತ್ತವನ್ನು ಸಾಲವಾಗಿ ಪಡೆಯುತ್ತಿದೆ.
ಈ ವಾರ ಬಿಡುಗಡೆಯಾದ ಮೊತ್ತವು ರಾಜ್ಯಗಳಿಗೆ ಒದಗಿಸಿದ 6 ನೇ ಕಂತಾಗಿದೆ. ಈ ಮೊತ್ತವನ್ನು ಈ ವಾರ ಶೇ 4.2089 ರಷ್ಟು ಬಡ್ಡಿದರದಲ್ಲಿ ಸಾಲ ಪಡೆಯಲಾಗಿದೆ. ಇಲ್ಲಿಯವರೆಗೆ ಕೇಂದ್ರವು ವಿಶೇಷ ಸಾಲ ಪಡೆಯುವ ಯೋಜನೆ ಮೂಲಕ ಸರಾಸರಿ 4.7106 ರಷ್ಟು ಬಡ್ಡಿದರದಲ್ಲಿ 36,000 ಕೋಟಿ ರೂ. ಪಡೆದುಕೊಂಡಿದೆ.