ಮುಂಬೈ: ಆರ್ಐಎಲ್ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಷೇರುಗಳ ಇತ್ತೀಚಿನ ಗಳಿಕೆ ದಾಖಲೆಯ ನಡುವೆಯೂ ದುರ್ಬಲ ಜಾಗತಿಕ ಸೂಚನೆಗಳು ಹಾಗೂ ಲಾಭ ಬುಕ್ಕಿಂಗ್ ಮಧ್ಯೆ ದೇಶೀಯ ಷೇರು ಮಾರುಕಟ್ಟೆಯು ಗುರುವಾರದಂದು ಮಾರಾಟದ ಒತ್ತಡಕ್ಕೆ ಒಳಗಾಯಿತು.
ದಿನದ ವಹಿವಾಟು ಅಂತ್ಯದ ವೇಳೆ ಸೆನ್ಸೆಕ್ಸ್ 1,066 ಅಂಕ ಅಥವಾ ಶೇ 2.61ರಷ್ಟು ಕುಸಿದು 39,728 ಮಟ್ಟದಲ್ಲಿ ಕೊನೆಗೊಂಡರೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 291 ಅಂಕ ಅಥವಾ ಶೇ 2.43ರಷ್ಟು ಇಳಿಕೆಯೊಂದಿಗೆ 11,680 ಅಂಕಗಳಿಗೆ ಸ್ಥಿರವಾಗಿದೆ.
ಬಿಎಸ್‌ಇ ಸೆನ್ಸೆಕ್ಸ್‌ನ 30 ಘಟಕಗಳಲ್ಲಿ 29 ಯೂನಿಟ್ಗಳು ಕುಸಿತ ದಾಖಲಿಸಿವೆ. ಏಷ್ಯನ್ ಪೇಂಟ್ಸ್ ಶೇ 0.3ರಷ್ಟು ಹಸಿರು ಬಣ್ಣದಲ್ಲಿ ಕೊನೆಗೊಂಡ ಏಕೈಕ ಷೇರಾಗಿದೆ.
ಕೋವಿಡ್ -19 ಸೋಂಕಿನ ಎರಡನೇ ಅಲೆ ಎದುರಿಸಲು ಯುರೋಪಿನಾದ್ಯಂತ ಸ್ಥಳೀಯ ಸರ್ಕಾರಗಳು ಈಗಿನ ನಿರ್ಬಂಧಗಳನ್ನು ಬಿಗಿಗೊಳಿಸಿದ್ದರಿಂದ ಜಾಗತಿಕ ಷೇರುಗಳು ಗುರುವಾರ ಕುಸಿದವು ಮತ್ತು ಆರ್ಥಿಕ ಚೇತರಿಕೆಯ ನಿರೀಕ್ಷೆಯನ್ನೂ ಕುಗ್ಗಿಸಿತು.
ಏಷ್ಯಾದಲ್ಲಿ ಎಂಎಸ್ಸಿಐನ ಜಪಾನ್ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಸೂಚ್ಯಂಕವು ಶೇ 0.6 ರಷ್ಟು ಕಳೆದುಕೊಂಡರೆ, ಜಪಾನ್‌ನ ನಿಕ್ಕಿ ಶೇ 0.5 ರಷ್ಟು ಕುಸಿದಿದೆ. ವಿಶ್ವದ ಹೆಚ್ಚಿನ ಭಾಗಗಳಲ್ಲಿ ವೈರಸ್‌ನ ಹೊಸ ಅಲೆಯ ಉಲ್ಬಣವು ಆರ್ಥಿಕ ಚಟುವಟಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ತೈಲ ಬೆಲೆಗಳೂ ಇಳಿಕೆಯಾದವು.