ETV Bharat / business

ಭಾರತಕ್ಕೆ ಮಲ್ಯ ಹಸ್ತಾಂತರ ವಿಳಂಬದ ನಿಖರ ಕಾರಣ ಬಿಚಿಟ್ಟ ಕೇಂದ್ರ: ನ.2ಕ್ಕೆ ಡೆಡ್​ಲೈನ್ ಕೊಟ್ಟ ಸುಪ್ರೀಂ - ವಿಜಯ್ ಮಲ್ಯ

ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಯು.ಯು ಲಲಿತ್​ ನೇತೃತ್ವದ ನ್ಯಾಯಪೀಠದ ಮುಂದೆ ಭಾರತಕ್ಕೆ ವಿಜಯ್ ಮಲ್ಯ ಹಸ್ತಾಂತರಿಸುವ ವಿಳಂಬದ ಬಗ್ಗೆ ವಾದಿಸಿದರು.

Mallya
ವಿಜಯ್ ಮಲ್ಯ
author img

By

Published : Oct 5, 2020, 5:00 PM IST

ನವದೆಹಲಿ: ದೇಶ ಬಿಟ್ಟು ಪರಾರಿ ಆಗಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರ ಹಸ್ತಾಂತರ ಪ್ರಕರಣ ಮುಗಿದಿದೆ. ಆದರೆ, ಇಂಗ್ಲೆಂಡ್​​ನಲ್ಲಿ ಕೆಲವು ರಹಸ್ಯ ವಿಚಾರಣೆಗಳು ನಡೆಯುತ್ತಿವೆ. ಭಾರತಕ್ಕೆ ಅವರನ್ನು ಹಸ್ತಾಂತರಿಸಲು ಅಲ್ಲಿನ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿತು.

ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಯು.ಯು ಲಲಿತ್​ ನೇತೃತ್ವದ ನ್ಯಾಯಪೀಠದ ಮುಂದೆ ವಾದಿಸಿದರು.

ಗೌಪ್ಯ ವಿಚಾರಣೆಯ ಸ್ವರೂಪದ ಬಗ್ಗೆ ಸರ್ಕಾರಕ್ಕೆ ಏನು ತಿಳಿದಿಲ್ಲ. ಮಲ್ಯರನ್ನು ಹಸ್ತಾಂತರಿಸಲು ಇಂಗ್ಲೆಂಡ್​ನ ಉನ್ನತ್ತ ನ್ಯಾಯಾಲಯ ಆದೇಶಿಸಿದೆ. ಆದರೆ ಅದು ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರದ ಪರ ವಕೀಲರು ಹೇಳಿದ್ದಾರೆ.

ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಭಾರತಕ್ಕೆ ಹಸ್ತಾಂತರಿಸುವ ಆದೇಶವನ್ನು ಪ್ರಶ್ನಿಸಿ ಮೇ ತಿಂಗಳಲ್ಲಿ ಇಂಗ್ಲೆಂಡ್​​ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಅರ್ಜಿಯನ್ನು ಲಂಡನ್ ಹೈಕೋರ್ಟ್​ ವಜಾಗೊಳಿಸಿತ್ತು.

ಈ ಗೌಪ್ಯ ವಿಚಾರಣೆಯ ಸ್ವರೂಪ ಮತ್ತು ಅದು ಯಾವಾಗ ಮುಗಿಯುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಲು ಮಲ್ಯ ಅವರ ವಕೀಲ ಅಂಕುರ್ ಸೈಗಲ್ ಅವರನ್ನು ನ್ಯಾಯಪೀಠ ಕೇಳಿತು.

ನ್ಯಾಯಮೂರ್ತಿ ಲಲಿತ್ ಅವರು ತಮ್ಮ ಕಕ್ಷಿದಾರ ಯಾವಾಗ ಕೋರ್ಟ್‌ ಮುಂದೆ ಹಾಜರಾಗುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸುವಂತೆ ಸೈಗಲ್ ಅವರನ್ನು ಪ್ರಶ್ನಿಸಿದ್ದರು. ನ್ಯಾಯಾಲಯದ ತಿರಸ್ಕಾರ ಶಿಕ್ಷೆಯ ವಿಚಾರಣೆ ಅವರ ಸಮ್ಮುಖದಲ್ಲಿ ನಡೆಯಬಹುದು. ಈಗಾಗಲೇಮ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ.

ಈ ಪ್ರಶ್ನೆಗಳಿಗೆ ನವೆಂಬರ್ 2ರ ಒಳಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್​ ಮಲ್ಯ ಪರ ವಕೀಲರಿಗೆ ಸೂಚಿಸಿತು.

2017ರ ಆಗಸ್ಟ್ 31 ರಂದು ನೀಡಿದ್ದ ನ್ಯಾಯಾಲಯ ನಿಂದನೆಯ ತಪ್ಪಿತಸ್ಥತ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಲ್ಯ ಅವರ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಉನ್ನತ ನ್ಯಾಯಾಲಯವು ಅಕ್ಟೋಬರ್ 5ರಂದು ಮಲ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.