ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಸ್ವಾಯತ್ತತೆಯ ಸಂಬಂಧ ಬುದ್ದಿಜೀವಿಗಳು ನಡೆಸಿದ ಟೀಕಾಪ್ರಹಾರಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಆರ್ಥಿಕ ತಜ್ಞರು ಪ್ರತ್ಯುತ್ತರ ನೀಡಿದ್ದಾರೆ.
ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಕ್ಕೆ ₹ 1.23 ಲಕ್ಷ ಕೋಟಿ ರೂ ಮೊತ್ತ ನಿವ್ವಳ ವರಮಾನ ಮತ್ತು ₹ 52,637 ಕೋಟಿ ಮೊತ್ತವನ್ನು ಮೀಸಲು ನಿಧಿಯಿಂದ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಸಮಿತಿಯ ನಡೆಯನ್ನು ವಿರೋಧಿಸಿ 'ಸ್ವರ್ಗವೇ ಧರೆಗುರುಳುತ್ತಿದೆ' ಎಂಬಂತೆ ವ್ಯಾಖ್ಯಾನಿಸಿ ಟೀಕಿಸಿದ ಬುದ್ದಿಜೀವಿಗಳು, ಸಮಿತಿಯ ಶಿಫಾರಸುಗಳನ್ನು ಸಮಾಧಿ ಮಾಡಲಾಗಿದೆ ಎಂಬ ಆಪಾದನೆಯನ್ನು ಎಸ್ಬಿಐನ ಆರ್ಥಿಕ ಚಿಂತಕರು ತಳ್ಳಿ ಹಾಕಿದ್ದಾರೆ.
ಕೇಂದ್ರ ಬೊಕ್ಕಸಕ್ಕೆ ₹ 52,637 ಕೋಟಿ ಮೊತ್ತವನ್ನು ಆರ್ಬಿಐನ ಮೀಸಲು ನಿಧಿಯಿಂದ ವರ್ಗಾಯಿಸುತ್ತಿರುವುದು ನಿರೀಕ್ಷೆಗಿಂತ ಕಡಿಮೆ ಆಗಿದೆ ಎಂದು ತಜ್ಞರು, ಕೇಂದ್ರೀಯ ಬ್ಯಾಂಕಿನ ಪ್ರಶ್ನೆಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದಿದ್ದಾರೆ.
ಎಸ್ಬಿಐ ತಜ್ಞರ ಈ ನಡೆಯಿಂದ ಆರ್ಬಿಐನ ಮಾಜಿ ಗವರ್ನರ್ಗಳಾದ ವೈ.ವಿ.ರೆಡ್ಡಿ, ಡಿ ಸುಬ್ಬರಾವ್ ಅವರರು ಸೇರಿದಂತೆ ಇತರರ ವ್ಯಾಖ್ಯಾನಗಳನ್ನು ಅಲ್ಲಗಳೆದಂತಿದೆ. ಇದಕ್ಕೂ ಮೊದಲು ಆರ್ಬಿಐನ ಮಾಜಿ ಗವರ್ನರ್ಗಳಾದ ರಘುರಾಮ್ ರಾಜನ್ ಮತ್ತು ಉರ್ಜಿತ್ ಪಟೇಲ್ ಹಾಗೂ ಮಾಜಿ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಸೇರಿದಂತೆ ಇತರರು ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ಮೇಲೆ ಕೇಂದ್ರ ದಾಳಿ ನಡೆಸುತ್ತಿದೆ ಎಂದು ತೀವ್ರವಾಗಿ ಖಂಡಿಸಿದ್ದರು.