ನವದೆಹಲಿ: ಆನ್ಲೈನ್ ಮೂಲಕ ಹಣ ವರ್ಗಾವಣೆಯ ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್ನಲ್ಲಿ (ಆರ್‌ಟಿಜಿಎಸ್) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಂದು ಮಹತ್ವದ ಬದಲಾವಣೆ ಮಾಡಿದೆ.
ಸದ್ಯ ರಿಯಲ್ ಟೈಮ್ ಗ್ರಾಸ್ ಸೆಟ್ಲ್‌ಮೆಂಟ್ ವ್ಯವಸ್ಥೆಯು ಗ್ರಾಹಕರ ವಹಿವಾಟುಗಳಿಗೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತ್ತು ಅಂತರಬ್ಯಾಂಕ್ ವಹಿವಾಟುಗಳಿಗೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7:45ರ ವರೆಗೆ ಲಭ್ಯವಿದೆ. ಆರ್‌ಟಿಜಿಎಸ್ ವ್ಯವಸ್ಥೆಯ ಲಭ್ಯತೆ ಅವಧಿ ವಿಸ್ತರಣೆಯಾಗಿದ್ದು, ಗ್ರಾಹಕರು ಬೆಳಿಗ್ಗೆ 7:00ರಿಂದ ತಮ್ಮ ವಹಿವಾಟು ಆರಂಭಿಸಬಹುದೆಂದು ಆರ್‌ಬಿಐ ತಿಳಿಸಿದೆ.
ಪರಿಷ್ಕೃತ ನೂತನ ನಿಯಮವು ಆಗಸ್ಟ್ 26ರಿಂದ ಜಾರಿಗೆ ಬರಲಿದೆ. ತಿಂಗಳ ಆರಂಭದಲ್ಲಿ ಆರ್‌ಟಿಜಿಎಸ್ ಸೇವೆಯ ಶುಲ್ಕವನ್ನು ತೆಗೆದುಹಾಕುವಂತೆ ಕೇಂದ್ರ ಬ್ಯಾಕ್ ಸಹವರ್ತಿ ಬ್ಯಾಂಕ್ಗಳಿಗೆ ಸೂಚಿಸಿತ್ತು.