ETV Bharat / business

ರಾಜ್ಯಸಭೆಯಲ್ಲಿ ಬ್ಯಾಂಕಿಂಗ್​​ ನಿಯಂತ್ರಣ ಕಾಯ್ದೆ 2020ಕ್ಕೆ ಅಂಗೀಕಾರ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​

ಸಹಕಾರಿ ಬ್ಯಾಂಕ್​ ಮತ್ತು ವಾಣಿಜ್ಯ ಬ್ಯಾಂಕ್​ಗಳ ಸ್ಥಿತಿ ಹದಗೆಟ್ಟಿರುವ ಕಾರಣ ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆ 2020ರ ಮಸೂದೆ ಅಂಗೀಕಾರಗೊಂಡಿದೆ.

ajya sabha
ajya sabha
author img

By

Published : Sep 22, 2020, 3:55 PM IST

ನವದೆಹಲಿ: ವಿವಿಧ ಸಹಕಾರಿ ಬ್ಯಾಂಕ್​ಗಳಲ್ಲಿ ಠೇವಣಿ ಇಡುವ ಗ್ರಾಹಕರ ಹಿತ ರಕ್ಷಣೆ ಉದ್ದೇಶದಿಂದ ಸಹಕಾರ ಬ್ಯಾಂಕ್​ಗಳನ್ನ ಭಾರತೀಯ ರಿಜರ್ವ್​​ ಬ್ಯಾಂಕ್​​ ಮೇಲ್ವಿಚಾರಣೆಗೆ ತರುವ ಬ್ಯಾಂಕಿಂಗ್​​ ನಿಯಂತ್ರಣ ಕಾಯ್ದೆ 2020 ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಕೆಲವೊಂದು ಸಹಕಾರಿ ಬ್ಯಾಂಕ್​ ಮತ್ತು ವಾಣಿಜ್ಯ ಬ್ಯಾಂಕ್​ಗಳ ಸ್ಥಿತಿ ಹದಗೆಟ್ಟಿರುವ ಕಾರಣ ಅವುಗಳನ್ನ ಬ್ಯಾಂಕಿಂಗ್​ ನಿಯಂತ್ರಣ(ತಿದ್ದುಪಡಿ) ಮಸೂದೆ ಮೂಲಕ ಆರ್​ಬಿಐ ಮೇಲ್ವಿಚಾರಣೆಗೆ ತರಲು ಉದ್ದೇಶಿಸಲಾಗಿದೆ. ಠೇವಣಿದಾರರು ಇಡುವ ಹಣಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಲೋಕಸಭೆಯಲ್ಲಿ ಕಳೆದ ಬುಧವಾರ ಈ ವಿಧೇಯಕ ಮಂಡಿಸಿದ್ದರು.

Nirmala Sitharaman
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​

ಈ ವೇಳೆ, ಅದಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿತ್ತು. ಇದೀಗ ಧ್ವನಿಮತದ ಮೂಲಕ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. 1949ರ ಬ್ಯಾಂಕಿಂಗ್​​ ನಿಯಂತ್ರಣ ಕಾಯ್ದೆ ಇದಾಗಿದ್ದು, ಇದೀಗ ತಿದ್ದುಪಡಿ ಮಾಡಿ ಅಂಗೀಕರಿಸಲಾಗಿದೆ.

ಕೊರೊನಾ ಸೋಂಕು ಸಮಯದಲ್ಲಿ ಅನೇಕ ಸಹಕಾರಿ ಬ್ಯಾಂಕ್​ಗಳು​ ಒತ್ತಡಕ್ಕೊಳಗಾಗಿದ್ದು, ಬ್ಯಾಂಕಿಂಗ್​​ ವಲಯದಲ್ಲಿ ಅವು ತ್ವರಿತವಾಗಿ ಚೇತರಿಸಿಕೊಳ್ಳಲು ಆರ್​ಬಿಐ ಈ ಮಸೂದೆ ಮೂಲಕ ಸಹಾಯ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.