ETV Bharat / business

ಆಮೆಗತಿಯ ಭಾರತದ ಆರ್ಥಿಕ ಚೇತರಿಕೆಗೆ ಸಿಂಹಸ್ವಪ್ನವಾದ ಬೆಲೆ ಏರಿಕೆಯ ಹಣದುಬ್ಬರ!

author img

By

Published : Apr 3, 2021, 4:12 PM IST

ಇಂಧನ ಬೆಲೆ ಮತ್ತು ತೆರಿಗೆ ಹೆಚ್ಚಳದಿಂದ ಸಾರಿಗೆ ವೆಚ್ಚ ಏರಿಕೆಯಾಗುತ್ತದೆ. ಇದು ಸ್ಪರ್ಧಾತ್ಮಕತೆ ಮತ್ತು ರಫ್ತುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೆ, ಉಕ್ಕು ಮತ್ತು ಸಿಮೆಂಟ್ ಮೇಲಿನ ಜಿಎಸ್​ಟಿ ದರವನ್ನು ಶೇ.28ರಿಂದ ಕೆಳಮಟ್ಟಕ್ಕೆ ಇಳಿಸುವ ಕೂಗು ಪ್ರಾರಂಭವಾಗಿದೆ..

economic
economic

ನವದೆಹಲಿ : ಭಾರತದ ಆರ್ಥಿಕತೆಯು ನಿಧಾನಗತಿಯಲ್ಲಿ ಭರವಸೆಯೊಂದಿಗೆ ಚೇತರಿಸಿಕೊಂಡರೂ ಸರಕುಗಳ ಬೆಲೆ ಏರಿಕೆಯಿಂದ ಹೆಚ್ಚುತ್ತಿರುವ ಹಣದುಬ್ಬರ ದೊಡ್ಡ ಆತಂಕವಾಗಿದೆ.

ಕಳೆದ 3-6 ತಿಂಗಳಲ್ಲಿ ವೇಗದ ಆರ್ಥಿಕ ಚೇತರಿಕೆಯ ಜೊತೆಗೆ ಜಾಗತಿಕ ಉತ್ತೇಜಕ ಕ್ರಮಗಳು ಮತ್ತು ಅತಿ ಕಡಿಮೆ ಬಡ್ಡಿದರಗಳು ಹಾಗೂ ಲಸಿಕೆ ಚಾಲನೆಯ ಆರಂಭವು ಸರಕುಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಹೀಗಾಗಿ, ಉಕ್ಕು, ಸಿಮೆಂಟ್, ಔಷಧ ಮತ್ತು ಹತ್ತಿ ನೂಲಿನ ಬೆಲೆಗಳು ಗಗನಕ್ಕೇರಿವೆ.

ಆಹಾರ ಮತ್ತು ಇಂಧನ ಬೆಲೆಗಳು ಆಕಾಶ ಮುಖವಾಗಿವೆ. ಉತ್ಪಾದಕರು ಮತ್ತು ಮಾರಾಟಗಾರರು ಗ್ರಾಹಕರ ಮೇಲೆ ಸ್ವಲ್ಪಮಟ್ಟಿನ ವೆಚ್ಚ ವರ್ಗಾಯಿಸಲು ಬೆಲೆ ಏರಿಕೆಗೆ ಪ್ರೇರೇಪಿತವಾಗಿದೆ. ಆರ್ಥಿಕ ವೀಕ್ಷಕರ ಪ್ರಕಾರ, ವೇತನ ಹೆಚ್ಚಳವಿಲ್ಲದೆ ಈ ಹಣದುಬ್ಬರ ಪ್ರವೃತ್ತಿ 2022ರ ಹಣಕಾಸು ವರ್ಷದ ಬೆಳವಣಿಗೆಯ ನಿರೀಕ್ಷೆಗೆ ಅಡ್ಡಿಯಾಗುತ್ತದೆ.

ಇದಲ್ಲದೆ ಏರುತ್ತಿರುವ ಬೆಲೆಗಳು ಆರ್ಥಿಕತೆಯಲ್ಲಿ ಬೇಡಿಕೆ ಬೆಂಬಲಿಸುವಲ್ಲಿ ಮುಖ್ಯವಾದ ಸಾಲದ ದರಗಳನ್ನು ತಗ್ಗಿಸುವ ಮತ್ತು ದ್ರವ್ಯತೆ ಮಟ್ಟ ಕಾಯ್ದುಕೊಳ್ಳುವ ಆರ್‌ಬಿಐ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ. ಪ್ರಸ್ತುತ, ವಿವಿಧ ಮುನ್ನೋಟಗಳ ದೃಷ್ಟಿಯಲ್ಲಿ ಇರಿಸಿಕೊಂಡು 2022ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7-11ರ ವ್ಯಾಪ್ತಿಯಲ್ಲಿ ಇರಿಸಿದೆ.

ಆದರೂ ಆರ್‌ಬಿಐ ಬೆಳವಣಿಗೆಯ ನಿಲುವು ಬೆಂಬಲಿಸಲು ಮುಂದಿನ 6-9 ತಿಂಗಳವರೆಗೆ ರೆಪೋ ದರ ಶೇ.4ರಷ್ಟು ಹಿಡಿದಿಟ್ಟುಕೊಳ್ಳಲಿದೆ. ದಶಕಗಳಲ್ಲಿ ವಾಹನ ಮತ್ತು ಗೃಹ ಸಾಲಗಳಿಗೆ ಹಣಕಾಸು ಅಗ್ಗವಾದ ಬಡ್ಡಿ ದರ ಇರಲಿದೆ. ಸರಕುಗಳ ಬೆಲೆಯಲ್ಲಿನ ವೇಗದಿಂದಾಗಿ ಹಣದುಬ್ಬರ ಏರಿಕೆಯು 2022ರ ಹಣಕಾಸು ವರ್ಷದಲ್ಲಿ ದೇಶದ ಬೆಳವಣಿಗೆಯ ಭವಿಷ್ಯಕ್ಕೆ ಪ್ರಮುಖ ಕಳವಳವಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್‌ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಸಿನ್ಹಾ ಸುದ್ದಿ ಏಜೆನ್ಸಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರಕ್ಕೆ ಸ್ವಾಯತ್ತತೆ ಸಿಗುವ ತನಕ ಭಾರತದ ಜತೆ ಸದ್ಯಕ್ಕೆ ವ್ಯಾಪಾರವಿಲ್ಲ: ಪಾಕ್​ ಪ್ರಧಾನಿ ಖಾನ್

ಇತ್ತೀಚಿನ ಹಿಂದಿನ ಉತ್ಪಾದಕರಿಗಿಂತ ಭಿನ್ನವಾಗಿ ಇನ್ಪುಟ್ ವೆಚ್ಚದ ಹೆಚ್ಚಳವನ್ನುಔಟ್​ಪುಟ್ ಬೆಲೆಗಳಿಗೆ ತಲುಪಿಸಲು ಪ್ರಾರಂಭವಾಗಿದೆ. ಇನ್ಪುಟ್ ವೆಚ್ಚದ ಏರಿಕೆ ಹೀರಿಕೊಳ್ಳುವುದು ಅವರ ಇಬಿಐಟಿಡಿಎ ಲಾಭದಾಯಕತೆ ಹೊಡೆದುರುಳಿಸುತ್ತದೆ. ಉಕ್ಕು ಮತ್ತು ಸಿಮೆಂಟ್‌ನ ಜೊತೆಗೆ ಹೆಚ್ಚಿನ ತೈಲ ಬೆಲೆಗಳು ಮೂಲಸೌಕರ್ಯ ಸೃಷ್ಟಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು. ಮೂಲಸೌಕರ್ಯ ರಚನೆಯ ಮೂಲಕ ಆರ್ಥಿಕತೆಯ ಬೆಳವಣಿಗೆ ಪುನರುಜ್ಜೀವನಗೊಳಿಸುವ ಭರವಸೆ ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಹೆಚ್ಚುತ್ತಿರುವ ಬೆಲೆಗಳು ಖಂಡಿತವಾಗಿಯೂ ಭವಿಷ್ಯತಿಗೆ ಉತ್ತಮವಲ್ಲ. ಇದು ತೈಲ ಬೆಲೆಗಳಿಂದ ಉಂಟಾಗುವ ವೆಚ್ಚದ ಅಂಶಗಳಿಂದ ಉಂಟಾಗುತ್ತದೆ ಎಂದು ಬ್ರಿಕ್ವರ್ಕ್ ರೇಟಿಂಗ್ಸ್ ಮುಖ್ಯ ಆರ್ಥಿಕ ಸಲಹೆಗಾರ ಎಂ. ಗೋವಿಂದ ರಾವ್ ಹೇಳಿದರು. ಇಂಧನ ಬೆಲೆ ಮತ್ತು ತೆರಿಗೆ ಹೆಚ್ಚಳದಿಂದ ಸಾರಿಗೆ ವೆಚ್ಚ ಏರಿಕೆಯಾಗುತ್ತದೆ. ಇದು ಸ್ಪರ್ಧಾತ್ಮಕತೆ ಮತ್ತು ರಫ್ತುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೆ, ಉಕ್ಕು ಮತ್ತು ಸಿಮೆಂಟ್ ಮೇಲಿನ ಜಿಎಸ್​ಟಿ ದರವನ್ನು ಶೇ.28ರಿಂದ ಕೆಳಮಟ್ಟಕ್ಕೆ ಇಳಿಸುವ ಕೂಗು ಪ್ರಾರಂಭವಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯ ಮತ್ತು ಕೇಂದ್ರ ಸುಂಕ ಕಡಿಮೆ ಮಾಡುವಂತೆ ಒತ್ತಾಯಿಸಲಾಗಿದೆ. ಜಾಗತಿಕ ಸರಕುಗಳ ಬೆಲೆಗಳು ತೀವ್ರ ಏರಿಕೆಯಾಗಿರುವುದರಿಂದ ಇಂಧನ ಮತ್ತು ಹಣದುಬ್ಬರ ಎರಡಕ್ಕೂ ಅಪಾಯವಿದೆ. ಈ ಹಿನ್ನೆಲೆ ವ್ಯಾಕ್ಸಿನೇಷನ್ ಪ್ರಗತಿಯೊಂದಿಗೆ ನಿರೀಕ್ಷಿತ ವಿ-ಆಕಾರದ ಚೇತರಿಕೆಯ ಮಧ್ಯೆ ಉತ್ಪಾದಕರು ಹೆಚ್ಚಿನ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಹುದು ಎಂದು ಅಕ್ಯುಟ್ ರೇಟಿಂಗ್ಸ್ & ರಿಸರ್ಚ್​ನ ಮುಖ್ಯ ವಿಶ್ಲೇಷಕ ಸುಮನ್ ಚೌಧರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.