ETV Bharat / business

ಮುಂದಿನ ವರ್ಷವೇ ಪುಟಿದೇಳಲಿದೆ ದೇಶದ ಆರ್ಥಿಕತೆ : ಬ್ರಿಕ್‌ವರ್ಕ್ ರೇಟಿಂಗ್ಸ್ ಹೇಳಿದ್ದೆಷ್ಟು? ‌ - ಆರ್ಥಿಕ ಚೇತರಿಕೆ

ಕೋವಿಡ್​-19 ವೈರಸ್​ಗೆ ಪರಿಣಾಮಕಾರಿಯಾದ ಲಸಿಕೆ ಮತ್ತು ದೇಶೀಯ ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುವ ಸಂಕೇತಗಳ ಕಾಣಿಸಿಕೊಳ್ಳುತ್ತಿವೆ. ನೈಜ ಜಿಡಿಪಿ 2022ರ ಆರ್ಥಿಕ ವರ್ಷದಲ್ಲಿ ಶೇ 11ಕ್ಕೆ ಬೆಳೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. 2021ರ ಆರ್ಥಿಕ ವರ್ಷದಲ್ಲಿ ಶೇ 7ರಿಂದ 7.5ರಷ್ಟು ಸಂಕೋಚನವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

GDP
ಜಿಡಿಪಿ
author img

By

Published : Jan 12, 2021, 7:01 PM IST

ಮುಂಬೈ: ವೇಗವಾಗಿ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳುತ್ತಿರುವುದರಿಂದ ದೇಶದ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಮುಂದಿನ ಹಣಕಾಸು ವರ್ಷದಲ್ಲಿ ಶೇ 11ರಷ್ಟು ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ದೇಶೀಯ ರೇಟಿಂಗ್ ಏಜೆನ್ಸಿ ಬ್ರಿಕ್‌ವರ್ಕ್ ರೇಟಿಂಗ್ಸ್‌ನ ವರದಿ ಪ್ರಕಾರ, ಲಾಕ್‌ಡೌನ್ ಸಡಿಲಿಸಿದ ನಂತರ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಕೋವಿಡ್ ಪೂರ್ವ ಮಟ್ಟ ತಲುಪುತ್ತಿವೆ. ಆದರೆ, ಸಾಮಾಜಿಕ ಅಂತರ ಮಾನದಂಡಗಳಿಗೆ ಪ್ರಭಾವಿತವಾಗಿರುವ ಕ್ಷೇತ್ರಗಳನ್ನು ಕೋವಿಡ್​ ಪೂರ್ವದ ಮಟ್ಟದಲ್ಲಿವೆ.

ಕೋವಿಡ್​-19 ವೈರಸ್​ಗೆ ಪರಿಣಾಮಕಾರಿಯಾದ ಲಸಿಕೆ ಮತ್ತು ದೇಶೀಯ ಆರ್ಥಿಕತೆಯಲ್ಲಿ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುವ ಸಂಕೇತಗಳು ಕಾಣಿಸಿಕೊಳ್ಳುತ್ತಿವೆ. ನೈಜ ಜಿಡಿಪಿ 2022ರ ಆರ್ಥಿಕ ವರ್ಷದಲ್ಲಿ ಶೇ 11ಕ್ಕೆ ಬೆಳೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. 2021ರ ಆರ್ಥಿಕ ವರ್ಷದಲ್ಲಿ ಶೇ 7ರಿಂದ 7.5ರಷ್ಟು ಸಂಕೋಚನವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ವೇಗದ ಸೇವೆಗೆ 8 ಸ್ಟಾರ್ಟ್​​ಅಪ್​​ಗಳನ್ನ ಆಯ್ಕೆ ಮಾಡಿಕೊಂಡ ಫ್ಲಿಪ್​ಕಾರ್ಟ್​

ರಾಷ್ಟ್ರೀಯ ಸಾಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜಿನ ಪ್ರಕಾರ, ದೇಶದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.7ರಷ್ಟು ಕುಸಿಯುತ್ತದೆ ಎಂದು ಅಂದಾಜಿಸಿದೆ.

ಆರ್ಥಿಕತೆಯು 2021ರ ಆರ್ಥಿಕ ವರ್ಷದ ಮಧ್ಯಂತರದಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣುವ ಸಾಧ್ಯತೆಯಿದೆ. ಆದರೆ, ಕೆಲವು ವಲಯಗಳು ಸಾಮಾಜಿಕ ದೂರವಿಡುವ ಮಾನದಂಡಗಳಿಂದಾಗಿ ಚೇತರಿಕೆ ದಾಖಲಿಸುತ್ತವೆ. ಆರ್ಥಿಕತೆಯು ಈಗಲೂ ಸಾಂಕ್ರಾಮಿಕ ರೋಗದ ಹಿಡಿತದಲ್ಲಿ ಇರುವುದರಿಂದ ವಿವೇಚನೆಯಿಂದ ಖರ್ಚು ಮಾಡುವ ಕ್ಷೇತ್ರಗಳ ಪುನರುಜ್ಜೀವನವು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಅದೇನೇ ಇದ್ದರೂ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿನ ಪ್ರಗತಿಯೊಂದಿಗೆ ಮುಂದಿನ ಹಣಕಾಸಿನ ದೃಷ್ಟಿಕೋನವು ಸುಧಾರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರವು ಸ್ಥಿರವಾದ ಬೆಳವಣಿಗೆಯ ಆವೇಗದೊಂದಿಗೆ ಶೇ 3.5ರಷ್ಟು ಮುಂದುವರಿಯಬಹುದು. ಕೈಗಾರಿಕಾ ವಲಯವು ಶೇ 11.5 ಮತ್ತು ಸೇವಾ ವಲಯವು ಶೇ 11 ರಿಂದ 12ರಷ್ಟು ಏರಿಕೆಯಾಗಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.