ಮುಂಬೈ: ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡುವ, ಸ್ವಯಂ ಉದ್ಯೋಗಕ್ಕೆ ದಾರಿ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ಮುದ್ರಾ ಯೋಜನೆ ವಿಫಲವಾಗಿದೆ ಎನ್ನುತ್ತಿವೆ ಕೆಲವು ಸಮೀಕ್ಷೆಗಳು.
ಇದರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ ಎಂ.ಕೆ. ಜೈನ್, ಮುದ್ರಾ ಸಾಲಗಳಲ್ಲಿ ಅನುತ್ಪಾದಕ ಆಸ್ತಿಯ (ಎನ್ಪಿಎ) ಪ್ರಮಾಣ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಈ ಸಾಲಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಬ್ಯಾಂಕ್ಗಳಿಗೆ ಸೂಚಿಸಿದ್ದಾರೆ.
ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡಿ ಉದ್ಯಮಶೀಲತೆ ಉತ್ತೇಜಿಸಲು ಪ್ರಧಾನಿ ಮೋದಿ 2015ರಲ್ಲಿ ಮುದ್ರಾ ಯೋಜನೆಗೆ ಚಾಲನೆ ನೀಡಿತ್ತು.
ಮುದ್ರಾ ಒಂದು ಉದಾಹರಣೆಯಾಗಿದೆ ... ಇಂತಹ ಬೃಹತ್ ಮೇಲ್ದರ್ಜೆಗೆ ಕೊಂಡೊಯ್ಯುವ ಅನೇಕ ಫಲಾನುಭವಿಗಳನ್ನು ಬಡತನದಿಂದ ಹೊರಹಾಕಬಹುದಾದರೂ, ಸಾಲಗಾರರಲ್ಲಿ ಅನುತ್ಪಾದಕ ಸ್ವತ್ತುಗಳು ಹೆಚ್ಚುತ್ತಿರುವ ಬಗ್ಗೆ ಆತಂಕಗಳಿವೆ ಎಂದು ಮೈಕ್ರೋಫೈನಾನ್ಸ್ ಕುರಿತು ಸಿಡ್ಬಿ ಕಾರ್ಯಕ್ರಮದಲ್ಲಿ ಹೇಳಿದರು.
ಸಾಲಗಾರರ ಮೌಲ್ಯಮಾಪನ ಹಂತದಲ್ಲಿಯೇ ಬ್ಯಾಂಕ್ಗಳು ಮರುಪಾವತಿ ಸಾಮರ್ಥ್ಯದತ್ತ ಗಮನ ಹರಿಸಬೇಕು. ಲೈಫ್ ಸೈಕಲ್ ಮೂಲಕ ಸಾಲಗಳನ್ನು ಹೆಚ್ಚು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.