ETV Bharat / business

ಆರ್​ಬಿಐ ವಿತ್ತೀಯ ನೀತಿ ಸಮಿತಿ ಸಭೆ ಇಂದು ಮುಕ್ತಾಯ : ಬಡ್ಡಿ ದರ ಪ್ರಕಟಿಸುವ ಸಾಧ್ಯತೆ

ವಿತ್ತೀಯ ನೀತಿ ಸಮಿತಿ ಸಭೆಯ ಸಂಬಂಧ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ನಡೆಸುವರು.

rbi-policy-announcement-governors-address-at-10-am-today
ವಿತ್ತೀಯ ನೀತಿ ಸಮಿತಿ ಸಭೆ
author img

By

Published : Oct 9, 2020, 5:18 AM IST

ನವದೆಹಲಿ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಬೆಳಗ್ಗೆ 10 ಗಂಟೆಗೆ ವಿತ್ತೀಯ ನೀತಿ ಸಮಿತಿ ಸಭೆಯ ಕುರಿತು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಹಣದುಬ್ಬರವನ್ನು ಗಟ್ಟಿಯಾಗಿಸುವ ದೃಷ್ಟಿಯಿಂದ ಕೇಂದ್ರೀಯ ಬ್ಯಾಂಕ್ ಸಾಲ ನೀಡುವ ದರಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂಬ ನಿರೀಕ್ಷೆಯ ಮಧ್ಯೆ ರಿಸರ್ವ್ ಬ್ಯಾಂಕಿನ ಹೊಸದಾಗಿ ರಚಿಸಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ತನ್ನ ಮೂರು ದಿನಗಳ ಚರ್ಚೆಯನ್ನು ಬುಧವಾರ ಪ್ರಾರಂಭಿಸಿತ್ತು. ಈ ಸಭೆಯು ಇಂದು ಮುಕ್ತಾಯಗೊಳ್ಳಲಿದೆ.

ಚರ್ಚೆಯ ಅಂತ್ಯದಲ್ಲಿ ಆರ್‌ಬಿಐ ಇಂದು ತನ್ನ ಹಣಕಾಸು ನೀತಿ ಪರಿಶೀಲನೆಯೊಂದಿಗೆ ಹೊರಬರಲಿದೆ. ಸ್ವತಂತ್ರ ಸದಸ್ಯರ ನೇಮಕ ವಿಳಂಬ ಆಗಿದ್ದರಿಂದ ಈ ಹಿಂದೆ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ನಿಗದಿಯಾಗಿದ್ದ ಆರು ಸದಸ್ಯರ ಎಂಪಿಸಿ ಸಭೆಯನ್ನು ಮರು ನಿಗದಿಪಡಿಸಲಾಗಿತ್ತು.

ಆರ್‌ಬಿಐ ಗವರ್ನರ್​ ನೇತೃತ್ವದ ಎಂಪಿಸಿ ಸದಸ್ಯರಾಗಿ ಸರ್ಕಾರ ಈಗ ಮೂವರು ಖ್ಯಾತ ಅರ್ಥಶಾಸ್ತ್ರಜ್ಞರಾದ ಆಶಿಮಾ ಗೋಯಲ್, ಜಯಂತ್ ಆರ್ ವರ್ಮಾ ಮತ್ತು ಶಶಾಂಕ್​​ ಭಿಡೆ ಅವರನ್ನು ನೇಮಿಸಿದೆ.

ಹೆಚ್ಚುತ್ತಿರುವ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಪಾಲಿಸಿ ದರವನ್ನು ಕಡಿಮೆ ಮಾಡಲು ಮುಂದಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯಲ್ಲಿ ಸಂಕೋಚನವನ್ನು ಸೀಮಿತಗೊಳಿಸುವ ಗಂಭೀರ ಸವಾಲುಗಳು ಇರುವುದರಿಂದ ಆರ್‌ಬಿಐ, ತನ್ನ ನೀತಿ ಬಡ್ಡಿ ದರಗಳ ಬಗೆಗಿನ ನಿಲುವನ್ನು ಉಳಿಸಿಕೊಳ್ಳಬೇಕಿದೆ ಎಂದು ಕೈಗಾರಿಕಾ ಸಂಸ್ಥೆಗಳು ಹೇಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.