ಮುಂಬೈ: 2020ರ ಅಂತಿಮ ವಿತ್ತೀಯ ನೀತಿ ಪರಿಶೀಲನೆಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಮುಂದೂಡಿಕೆ ಆಗಿದೆ.
ಈ ಹಿಂದೆ ಎಂಪಿಸಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ನಡೆಯಬೇಕಿತ್ತು. ಈ ದಿನಾಂಕವನ್ನು ಕೇಂದ್ರ ಬ್ಯಾಂಕ್ ಮುಂದೂಡಿಕೆ ಮಾಡಿದೆ. ಈ ಬಗ್ಗೆ ಯಾವುದೇ ಕಾರಣ ಸಹ ಅದು ನೀಡಲಿಲ್ಲ.
2020ರ ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1ರ ಅವಧಿಯಲ್ಲಿ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಮರು ನಿಗದಿಪಡಿಸಲಾಗಿದೆ. ಎಂಪಿಸಿ ಸಭೆಯ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಿತಿಗೆ ಹೊಸ ಬಾಹ್ಯ ಸದಸ್ಯರ ಬಗ್ಗೆ ಸರ್ಕಾರದ ನಿರ್ಧಾರಕ್ಕಾಗಿ ಆರ್‌ಬಿಐ ಎದುರು ನೋಡುತ್ತಿದೆ. ಆರ್‌ಬಿಐ ಕಾಯ್ದೆಯ ಪ್ರಕಾರ, ಎಂಪಿಸಿಯ ಹೊರಗಿನ ಸದಸ್ಯರಿಗೆ ನಾಲ್ಕು ವರ್ಷಗಳ ಅವಧಿ ಇರುತ್ತದೆ. ಎಂಪಿಸಿ 2016ರ ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿತ್ತು.